ಕೋಟೆನಾಡಿನಲ್ಲಿ ತಲೆ ಎತ್ತುತ್ತಿರುವ ಅಕ್ರಮ ಲೇಔಟ್; ಗುಡ್ಡ ಕುಸಿಯುವ ಬೀತಿ
ಹಚ್ಚ ಹಸುರಿನಿಂದ ಆಕರ್ಷಿಸುತ್ತಿರುವ ಬೆಟ್ಟಗುಡ್ಡಗಳ ನಡುವೇ ಹಾದು ಹೋಗಿರುವ ರಸ್ತೆ.ರಸ್ತೆ ಪಕ್ಕದಲ್ಲೇ ತಲೆಯೆತ್ತುತ್ತಿರುವ ಖಾಸಗಿ ಲೇಔಟ್. ಕೋಟೆನಾಡು ಚಿತ್ರದುರ್ಗದ ಪ್ರವಾಸಿ ತಾಣ ಜೋಗಿಮಟ್ಟಿ ಬಳಿ ರಿಯಲ್ ಎಸ್ಟೇಟ್ ಮಾಫಿಯಾ ಸಕ್ರಿಯ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಸೆ.3): ಚಿತ್ರದುರ್ಗ ಎಂದಾಕ್ಷಣ ಎಲ್ಲರಿಗೂ ನೆನಪಾಗೋದು ಬೆಟ್ಟಗುಡ್ಡಗಳು ಹಾಗು ಆಕರ್ಷಕ ಗಿರಿಧಾಮಗಳು. ಆದ್ರೆ ಇದೀಗ ಅಕ್ರಮ ಲೇಔಟ್ ನಿರ್ಮಾಣಕ್ಕಾಗಿ ಅನೇಕ ಕಡೆ ಗುಡ್ಡಗಳ ಒತ್ತುವರಿಯಾಗಿದ್ದು, ಸುಂದರ ಗಿರಿಧಾಮಗಳನ್ನೇ ಕೊರೆದು ಲೇಔಟ್ ಮಾಡಲು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ಬಾರಿ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಆದ್ರೆ ಅಧಿಕಾರಿಗಳು ಮಾತ್ರ ಸೈಲೆಂಟಾಗಿದ್ದಾರೆ.
ಹಚ್ಚ ಹಸುರಿನಿಂದ ಆಕರ್ಷಿಸುತ್ತಿರುವ ಬೆಟ್ಟಗುಡ್ಡಗಳ ನಡುವೇ ಹಾದು ಹೋಗಿರುವ ರಸ್ತೆ.ರಸ್ತೆ ಪಕ್ಕದಲ್ಲೇ ತಲೆಯೆತ್ತುತ್ತಿರುವ ಖಾಸಗಿ ಲೇಔಟ್. ಕೋಟೆನಾಡು ಚಿತ್ರದುರ್ಗದ ಪ್ರವಾಸಿ ತಾಣ ಜೋಗಿಮಟ್ಟಿ ಬಳಿ ರಿಯಲ್ ಎಸ್ಟೇಟ್ ಮಾಫಿಯಾ ಸಕ್ರಿಯ. ಮಿನಿ ಊಟಿ ಖ್ಯಾತಿಯ ಜೋಗಿಮಟ್ಟಿಯಲ್ಲಿ ಮೋಡ ಹಾಗು ಮಂಜಿನ ನರ್ತನದ ಸೊಬಗನ್ನು ನೋಡಲು, ನಿತ್ಯ ಸಾವಿರಾರು ಜನ ಪ್ರವಾಸಿಗರು ಬರ್ತಾರೆ.ಆದ್ರೆ ಇಂತಹ ಸ್ಥಳದಲ್ಲಿ ಲೇಔಟ್ ನಿರ್ಮಾಣಕ್ಕಾಗಿ ಗುಡ್ಡದ ಮಧ್ಯೆ ಹಾದುಹೋಗಿರುವ ಕಿರಿದಾದ ರಸ್ತೆಯನ್ನು ಲೆಕ್ಕಿಸದೇ ಸುಮಾರು 30 ಅಡಿಗಳಷ್ಟು ಎತ್ತರದ ಬೃಹತ್ ಗುಡ್ಡವನ್ನು ಜೆಸಿಬಿಯಿಂದ ಕೊರೆದಿದ್ದಾರೆ. ಹೀಗಾಗಿ ಕಳೆದ ಎರಡು ದಿನಗಳಿಂದ ಶುರುವಾಗಿರುವ ಮಳೆಗೆ ಗುಡ್ಡದಲ್ಲಿ ಮಣ್ಣಿನ ಸವಕಳಿ ಆತಂಕ ಕೂಡ ಶುರುವಾಗಿದೆ.
ಗ್ಯಾರಂಟಿ ಯೋಜನೆ ಯಶಸ್ಸಿಗೆ ಹೆದರಿ ಸಿಲಿಂಡರ್ ಬೆಲೆ ಇಳಿಸಿದ ಕೇಂದ್ರ : ಮಾಜಿ ಸಚಿವ ಆಂಜನೇಯ
ಈ ಅಕ್ರಮ ಒತ್ತುವರಿ ಕೇವಲ ಈ ಗುಡ್ಡಕ್ಕೆ ಮಾತ್ರ ಸೀಮಿತವಾಗಿಲ್ಲ. ಜಿಲ್ಲೆಯಾದ್ಯಂತ ಇದೇ ರೀತಿ ರಿಯಲ್ ಎಸ್ಡೇಟ್ ಮಾಫಿಯ ನಡೆಯುತ್ತಿದ್ದು, ನಗರದ ಮದ್ಯೆ ಹಾಗೂ ಹೊರವಲಯದಲ್ಲಿರುವ ಎಲ್ಲಾ ಬೃಹತ್ ಬೆಟ್ಟಗುಡ್ಡಗಳಲ್ಲಿ ಮುಂದುವರೆದಿದೆ. ಇದರಿಂದಾಗಿ ಪ್ರವಾಸಿಗರು ಪ್ರಾಣ ಭಯದಿಂದ ಪ್ರವಾಸಿತಾಣಕ್ಕೆ ಬರುವಂತಾಗಿದೆ. ಯಾವಾಗ ಗುಡ್ದ ಕುಸಿಯುವುದೋ ಎಂಬ ಭೀತಿ ಎಲ್ಲರಲ್ಲಿದೆ.
ಲೇಔಟ್ ನಿರ್ಮಾಣದ ಹಿಂದೆ ಅಕ್ರಮದ ವಾಸನೆ ಬರುತ್ತಿದೆ ಹೀಗಿದ್ದೂ ಸಹ ಅರಣ್ಯ ಇಲಾಖೆ, ನಗರಸಭೆ ಹಾಗು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಅಥವಾ ಅಕ್ರಮಗಳಲ್ಲಿ ಶಾಮೀಲಾಗಿದ್ದಾರೆಯೇ ಜನರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇನ್ನು ಅಕ್ರಮ ಲೇಔಟ್ ನಿರ್ಮಾಣ, ಗುಡ್ದ ಒತ್ತುವರಿ ಹಾಗು ಗಿರಿಧಾಮಗಳನ್ನು ಕೊರೆಯುವ ಪ್ರಕ್ರಿಯೆ ಈ ಬಗ್ಗೆ ಲೇಔಟ್ ನಿರ್ಮಾಣ ಮಾಡ್ತಿರುವ ರಿಯಲ್ ಎಸ್ಟೇಟ್ ದಂಧೆಕೋರರನ್ನು ಕೇಳಿದ್ರೆ, ಜನಪ್ರತಿನಿಧಿಗಳು ಹಾಗು ಅಧಿಕಾರಿಗಳೇ ಅನುಮತಿ ನೀಡಿದ್ದಾರೆ. ಹೀಗಾಗಿ ಲೇಔಟ್ ಮಾಡ್ತಿದಿವಿ ಅಂತ ನಿರ್ಭಯವಾಗಿ ಹೇಳ್ತಾರೆ.ಆಗ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆತಂದರೆ ಯಾವುದೇ ಪ್ರಯೋಜನ ಆಗಿಲ್ಲವೆಂದು ಅಸಹಯಕತೆ ಹೊರಹಾಕಿರುವ ಪರಿಸರವಾದಿಗಳು ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕಿದ್ದಾರೆ.
ಸೆಪ್ಟೆಂಬರ್ ಮೊದಲ ವಾರದಲ್ಲಿ ಬರ ಘೋಷಣೆ ತೀರ್ಮಾನ: ಕೃಷಿ ಸಚಿವ ಚಲುವರಾಯಸ್ವಾಮಿ
ಒಟ್ಟಾರೆ ಪ್ರವಾಸಿ ತಾಣ ಜೋಗಿಮಟ್ಟಿ ಪ್ರವೇಶ ದ್ವಾರದ ಬಳಿಯೇ ಅಕ್ರಮ ಲೇಔಟ್ ತಲೆ ಎತ್ತುತ್ತಿದೆ.ಅದಕ್ಕಾಗಿ ಆಕರ್ಷಕ ಗುಡ್ಡ ಬಲಿಯಾಗಿದೆ. ಹಾಗೆಯೇ ಜಿಲ್ಲೆಯಾದ್ಯಂತ ಸಹ ಇದೇ ರೀತಿ ಗಿರಿಧಾಮಗಳು ಲೇಔಟ್ ಮಾಫಿಯಾಕ್ಕೆ ಸಿಲುಕಿದ್ದು ಕುಸಿಯುವ ಬೀತಿ ಜನರಲ್ಲಿದೆ. ಇನ್ನಾದ್ರು ಜಿಲ್ಲಾಡಳಿತ ಎಚ್ಚೆತ್ತು ದೊಡ್ಡ ಅವಘಡ ಜರುಗುವ ಮುನ್ನ ಅಕ್ರಮಕ್ಕೆ ಬ್ರೇಕ್ ಹಾಕಬೇಕಿದೆ.