ಸೆಪ್ಟೆಂಬರ್ ಮೊದಲ ವಾರದಲ್ಲಿ ಬರ ಘೋಷಣೆ ತೀರ್ಮಾನ: ಕೃಷಿ ಸಚಿವ ಚಲುವರಾಯಸ್ವಾಮಿ
ಸೂಕ್ತ ಸಮಯಕ್ಕೆ ಮಳೆ ಬಾರದೇ ಕೋಟೆನಾಡಿನ ಅನ್ನದಾತರು ಬರಗಾಲಕ್ಕೆ ತುತ್ತಾಗಿದ್ದಾರೆ. ಇಂದು ಜಿಲ್ಲೆಗೆ ಭೇಟಿ ನೀಡಿದ್ದ ಕೃಷಿ ಸಚಿವರು ಬರ ಪಟ್ಟಿಯಲ್ಲಿ ಬಿಟ್ಟಿರುವ ತಾಲ್ಲೂಕುಗಳ ಕುರಿತು ಪರಿಶೀಲನೆ ನಡೆಸಿ ಶೀಘ್ರವೇ ಬರ ಪಟ್ಟಿ ಘೋಷಣೆ ಮಾಡುವುದಾಗಿ ಭರವಸೆ ನೀಡಿದರು.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಆ.29) : ಸೂಕ್ತ ಸಮಯಕ್ಕೆ ಮಳೆ ಬಾರದೇ ಕೋಟೆನಾಡಿನ ಅನ್ನದಾತರು ಬರಗಾಲಕ್ಕೆ ತುತ್ತಾಗಿದ್ದಾರೆ. ಇಂದು ಜಿಲ್ಲೆಗೆ ಭೇಟಿ ನೀಡಿದ್ದ ಕೃಷಿ ಸಚಿವರು ಬರ ಪಟ್ಟಿಯಲ್ಲಿ ಬಿಟ್ಟಿರುವ ತಾಲ್ಲೂಕುಗಳ ಕುರಿತು ಪರಿಶೀಲನೆ ನಡೆಸಿ ಶೀಘ್ರವೇ ಬರ ಪಟ್ಟಿ ಘೋಷಣೆ ಮಾಡುವುದಾಗಿ ಭರವಸೆ ನೀಡಿದರು.
ಹೌದು, ಹೀಗೆ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರೋ ಕೃಷಿ ಸಚಿವ ಚಲುವನಾರಾಯಣಸ್ವಾಮಿ(Agriculutre minister chaluvarayaswamy). ಮತ್ತೊಂದೆಡೆ ಸಚಿವರ ಮುಂದೆಯೇ ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತ ಸಚಿವರಿಗೆ ತರಾಟೆ ತೆಗೆದುಕೊಳ್ತಿರೋ ಅನ್ನದಾತರು. ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗ ತಾಲ್ಲೂಕಿನ ಲಕ್ಷ್ಮಿಸಾಗರ, ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಬಳಿ.
ರಾಜ್ಯವನ್ನು ಬರಗಾಲ ಪೀಡಿತವೆಂದು ಘೋಷಿಸಲಿ: ಬಿ.ಎನ್.ಬಚ್ಚೇಗೌಡ
ಈಗಾಗಲೇ ಜಿಲ್ಲೆಯಾದ್ಯಂತ ಸೂಕ್ತ ಸಮಯಕ್ಕೆ ಮಳೆ ಬಾರದೇ ರೈತರು ಕಂಗಾಲಾಗಿ ಹೋಗಿದ್ದಾರೆ. ಸುಮಾರು ೭೦% ಗಿಂತ ಹೆಚ್ಚು ಬೆಳೆ ಈಗಾಗಲೇ ಮಳೆ ಇಲ್ಲದೇ ಬರಗಾಲ(Drought)ಕ್ಕೆ ತುತ್ತಾಗಿದೆ. ಇಂದು ಕೃಷಿ ಸಚಿವರು ಬರ ವೀಕ್ಷಣೆಗೆಂದು ಆಗಮಿಸಿ, ಅದೇ ರೀತಿ ರೈತರೊಂದಿಗೆ ಸಂವಾದ ನಡೆಸುವ ಕಾರ್ಯಕ್ರಮ ಆಯೋಜಿಸಿದ್ದರು. ಆದ್ರೆ ಸರಿಯಾದ ಸಮಯಕ್ಕೆ ಅವರು ಬಾರದೇ ಕೇಲವ ಕಾಟಾಚಾರಕ್ಕೆ ಒಂದು ಗಂಟೆ ರೈತರೊಂದಿಗೆ ಸಂವಾದ ನೆಪದಲ್ಲಿ ಮಾತನಾಡಿ ಹೋಗುವುದು ಎಷ್ಟು ಸರಿ. ಈಗಾಗಲೇ ಬೆಳೆಗಳು ನಾಶಕ್ಕೆ ಮುಂದಾಗಿವೆ, ಇನ್ನಾದ್ರು ಸರ್ಕಾರ ಬರ ಘೋಷಣೆ ಮಾಡದಿರುವುದು ದುರಂತ. ಸಚಿವರು ಕೇವಲ ಅಧಿಕಾರಿಗಳ ಜೊತೆ, ರೈತರ ಜೊತೆ ಸಂವಾದ ನಡೆಸಿದ್ರೆ ಸಾಲದು,ರೈತರಿಗೆ ಆಗಿರುವ ಅನ್ಯಾಯಕ್ಕೆ ಶೀಘ್ರವೇ ಪರಿಹಾರ ಒದಗಿಸಲಿ ಎಂಬುದು ರೈತರ ಒತ್ತಾಯ.
ಇನ್ನೂ ಬೆಳಗ್ಗೆ ೧೧ ಗಂಟೆ ಸುಮಾರಿಗೆ ಜಿಲ್ಲೆಗೆ ಆಗಮಿಸಿದ ಕೃಷಿ ಸಚಿವರು ನೇರವಾಗಿ, ದೊಡ್ಡಸಿದ್ದವ್ವನಹಳ್ಳಿಯ ರೈತನ ಜಮೀನಿಗೆ ಭೇಟಿ ನೀಡಿ ಆತ ಬೆಳೆದಿದ್ದ ಸಾವಯವ ಕೃಷಿಯನ್ನು ಕಂಡು ಸಂತಸ ವ್ಯಕ್ತಪಡಿಸಿದರು. ಬಳಿಕ ಲಕ್ಷ್ಮಿಸಾಗರ ಗ್ರಾಮದಲ್ಲಿ ಮೆಕ್ಕೆಜೋಳ, ಶೇಂಗಾ ಬೆಳೆ ಹಾನಿ ಜಮೀನುಗಳಿಗೆ ಭೇಟಿ ನೀಡಿ ರೈತರೊಂದಿಗೆ ಚರ್ಚೆ ನಡೆಸಿದರು. ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯಲ್ಲಿ ನಾಲ್ಕು ತಾಲ್ಲೂಕಗಳನ್ನ ಬರ ಪಟ್ಟಿಗೆ ಸೇರಿಸಲಾಗಿದೆ. ಇನ್ನೂ ರಾಜ್ಯದಲ್ಲಿ ಸುಮಾರು ೧೩೦ಕ್ಕೂ ಹೆಚ್ಚು ತಾಲ್ಲೂಕುಗಳ ಸಮಗ್ರ ಮಾಹಿತಿ ಪಡೆದು ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗಳು ವರದಿ ಸಲ್ಲಿಸಲು ಇದೇ ತಿಂಗಳು ೩೦ಕ್ಕೆ ದಿನಾಂಗ ನಿಗದಿ ಮಾಡಲಾಗಿದೆ.ಇನ್ನೊಮ್ಮೆ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ತಿಂಗಳ ಮೊದಲ ವಾರದಲ್ಲಿಯೇ ಬರ ಪಟ್ಟಿ ಘೋಷಣೆ ಮಾಡಿ ರೈತರಿಗೆ ಅನುಕೂಲ ಆಗುವ ರೀತಿ ನಮ್ಮ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಭರವಸೆ ನೀಡಿದರು. ಬೆಳೆ ಪರಿಹಾರ ತಾರತಮ್ಯ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಅರ್ಧ ಕರ್ನಾಟಕ ಬರಗಾಲ, ಮುಂದೆಯೂ ಮಳೆ ಮುನ್ಸೂಚನೆಯಿಲ್ಲ: ಸಚಿವ ಕೃಷ್ಣಬೈರೇಗೌಡ
ಒಟ್ಟಾರೆಯಾಗಿ ಇಂದು ಜಿಲ್ಲೆಗೆ ಆಗಮಿಸಿದ್ದ ಕೃಷಿ ಸಚಿವರು ಕೇವಲ ಎರಡು ಜಮೀನುಗಳಿಗೆ ಮಾತ್ರ ತೆರಳಿ ಪರಿಶೀಲನೆ ನಡೆಸಿ ತೆರಳೋದು ವಿಪರ್ಯಾಸ. ಈ ರೀತಿ ಕಾಟಾಚಾರಕ್ಕೆ ಪರಿಶೀಲನೆ ಮಾಡುವ ಬದಲು ರೈತರ ಸಂಕಷ್ಟಕ್ಕೆ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕಿದೆ.