Asianet Suvarna News Asianet Suvarna News

ಕೆಐಎಡಿಬಿಯಲ್ಲಿ ಕಾನೂನು ಬಾಹಿರವಾಗಿ ಭೂಮಿ ಹಂಚಿಕೆ, ಭೀಮ್ ಆರ್ಮಿ ಆರೋಪ

ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ – ಕೆಐಎಡಿಬಿ ಅಭಿವೃದ್ಧಿಪಡಿಸಿದ ಕೈಗಾರಿಕಾ ಬಡಾವಣೆಗಳಲ್ಲಿ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ ಎಕರೆಗಟ್ಟಲೆ ಜಮೀನುಗಳನ್ನು ಗುತ್ತಿಗೆ ಹಾಗೂ ಮಾರಾಟದ ಕರಾರುಗಳಿಗೆ ಒಳಪಟ್ಟು ತರಾತುರಿಯಲ್ಲಿ ಹಲವು ಕಂಪೆನಿಗಳಿಗೆ ಹಂಚಿಕೆ ಮಾಡಲಾಗಿದೆ. ಕೂಡಲೇ ರದ್ದುಮಾಡಬೇಕು ಎಂದು ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ಸಂಘಟನೆ ಆಗ್ರಹಿಸಿದೆ.

Illegal land allocation in KIADB Allegation by bhim army at bengaluru rav
Author
First Published Mar 15, 2024, 2:50 PM IST

ವರದಿ- ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್ ಬೆಂಗಳೂರು

ಬೆಂಗಳೂರು (ಮಾ.15) : ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ – ಕೆಐಎಡಿಬಿ ಅಭಿವೃದ್ಧಿಪಡಿಸಿದ ಕೈಗಾರಿಕಾ ಬಡಾವಣೆಗಳಲ್ಲಿ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ ಎಕರೆಗಟ್ಟಲೆ ಜಮೀನುಗಳನ್ನು ಗುತ್ತಿಗೆ ಹಾಗೂ ಮಾರಾಟದ ಕರಾರುಗಳಿಗೆ ಒಳಪಟ್ಟು ತರಾತುರಿಯಲ್ಲಿ ಹಲವು ಕಂಪೆನಿಗಳಿಗೆ ಹಂಚಿಕೆ ಮಾಡಿದ್ದು, ಇದನ್ನು ಕೂಡಲೇ ರದ್ದುಮಾಡಬೇಕು ಎಂದು ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ಸಂಘಟನೆ ಆಗ್ರಹಿಸಿದೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಡಿ. ರಾಜ್ ಗೋಪಾಲ್, ರಿಯಲ್ ಎಸ್ಟೇಟ್ ವಲಯದ ಕಂಪನಿಗಳಿಗೆ ನೂರಾರು ಎಕರೆ ಜಮೀನು ಹಂಚಿಕೆಯಾಗಿದೆ. ರಿಯಲ್‌ ಎಸ್ಟೇಟ್‌ ಕಂಪನಿಯವರು ಯಾವಾಗಿನಿಂದ ಕೈಗಾರಿಕಾ ಉದ್ಯಮ ಮಾಡುತ್ತಿದ್ದಾರೆ?. ಕೆಐಎಡಿಬಿಯು ತನ್ನ ನಿಯಮ 7 ನ್ನು ಉಲ್ಲಂಘಿಸಿ ಈ ಮಂಜೂರಾತಿ ಮಾಡಿದ್ದು, ಕೂಡಲೇ ಇದನ್ನು ರದ್ದುಪಡಿಸಬೇಕು. ಕೆಐಎಡಿಬಿಯ ಈ ಅಕ್ರಮದಿಂದ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ ನಷ್ಟವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

31 ವರ್ಷದ ಹಿಂದೆ ರೈತರ ಜಮೀನು ಭೂಸ್ವಾಧೀನ: ಏಕಾಏಕಿ ಬಡವರ ಮನೆ ನೆಲಸಮಗೊಳಿಸಿದ KIADB

ಭೂಮಿಗೆ ಹೆಚ್ಚಿನ ಬೇಡಿಕೆ ಇರುವ ಪ್ರದೇಶಗಳಲ್ಲಿ ಇಂತಹ ಹಂಚಿಕೆ ಮಾಡಿದ್ದು, ಪಾರದರ್ಶಕತೆಯನ್ನು ಕಾಯ್ದುಕೊಂಡಿಲ್ಲ. ಭೂಮಿ ಹಂಚಿಕೆ ಮಾಡುವ ನಕ್ಷೆಯನ್ನು ಐದು ಬಾರಿ ಬದಲಾಯಿಸಲಾಗಿದೆ. ಪಾರ್ಕ್ ಮತ್ತು ನಿಲುಗಡೆ ಸ್ಥಳಗಳನ್ನು ಕೂಡ ಬಿಡದೇ ಹಂಚಿಕೆ ಮಾಡಲಾಗಿದೆ. ಸಂಪೂರ್ಣ ಪ್ರಕ್ರಿಯೆಯನ್ನು ಆನ್ಲೈನ್ ಮುಖಾಂತರ ಮಾಡಬೇಕಾಗಿತ್ತು, ಆದರೆ ಆಫ್ ಲೈನ್ ಮುಖೇನ ಮಾಡಿರುವುದು ಅಕ್ರಮಕ್ಕೆ ಕಾರಣವಾಗಿದೆ ಎಂದು ಹೇಳಿದರು.

KIADB ಎಲ್ಲಾ ವ್ಯವಹಾರ ವಾದ್ರಾ ಒಡೆತನ ಡಿಎಲ್‌ಎಫ್‌ನಲ್ಲಿ ಆಫೀಸ್‌ನಲ್ಲಿ ನಡೆಯುತ್ತೆ: ಎಚ್‌ಡಿಕೆ ಹೊಸ ಬಾಂಬ್!

ಅತ್ಯಂತ ಬೆಲೆಬಾಳುವ ಪ್ರದೇಶಗಳನ್ನು ಬಹಿರಂಗ ಹರಾಜು ಮೂಲಕ ಹಂಚಿಕೆ ಮಾಡಬೇಕಾಗಿತ್ತು. ಆದರೆ ತಮಗೆ ಬೇಕಾದವರಿಗೆ ಮನಸ್ಸೋ ಇಚ್ಚೆ ಹಂಚಿ ಭಾರೀ ಭ್ರಷ್ಟಾಚಾರ ನಡೆಸಿದ್ದಾರೆ. ಉಪನೋಂದಣಾಧಿಕಾರಿಗಳ ಮಾರ್ಗಸೂಚಿ ಬೆಲೆ ಎಕರೆಗೆ 6 ಕೋಟಿ ಇದೆ, ಆದರೆ ಕೆಐಎಡಿಬಿಗೆ 2.5 ಕೋಟಿಗೆ ಹಂಚಿಕೆ ಮಾಡಿ ಕೆಐಎಡಿಬಿ ಕೈತೊಳೆದುಕೊಂಡಿದೆ. ಇಷ್ಟಕ್ಕೂ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಯಾಕೆ ಕರೆದಿಲ್ಲ ಎಂದು ಡಿ. ರಾಜ್ ಗೋಪಾಲ್ ಪ್ರಶ್ನಿಸಿದರು.
ಸರ್ಕಾರಕ್ಕೆ ನೂರಾರು ಕೋಟಿ ಆದಾಯ ನಷ್ಟ ಉಂಟಾಗಿದೆ.ಆಲ್ಲದೆ ಸರ್ಕಾರ ನಿವೃತ್ತ ನ್ಯಾಯ ಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಬೀಮ್ ಆರ್ಮಿ ಆಗ್ರಹಿಸಿದೆ.

Follow Us:
Download App:
  • android
  • ios