ಪಣಜಿ: ಮಹಾಗಠಬಂಧನವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ವಾರದಲ್ಲಿ ದಿನಕ್ಕೊಬ್ಬರು ಪ್ರಧಾನಿಯಾಗುತ್ತಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ವ್ಯಂಗ್ಯವಾಡಿದರು.

ಇಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಬಿಜೆಪಿ ರಾರ‍ಯಲಿಯಲ್ಲಿ ಮಾತನಾಡಿದ ಶಾ, ‘ಸೋಮವಾರ ಮಾಯಾವತಿ, ಮಂಗಳವಾರ ಅಖಿಲೇಶ್‌, ಬುಧವಾರ ಎಚ್‌.ಡಿ. ದೇವೇಗೌಡರು, ಗುರುವಾರ ಚಂದ್ರಬಾಬು ನಾಯ್ಡು, ಶುಕ್ರವಾರ ಸ್ಟಾಲಿನ್‌, ಶನಿವಾರ ಶರದ್‌ ಪವಾರ್‌ ಪ್ರಧಾನಿ ಆಗುತ್ತಾರೆ. ಭಾನುವಾರ ರಜಾ ದಿನ’ ಎಂದು ಕುಟುಕಿದರು.

ಪ.ಬಂಗಾಳ ಹಾಗೂ ಒಡಿಶಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದೂ ಶಾ ಹೇಳಿದರು.

ಕ್ಯಾನ್ಸರ್‌ಪೀಡಿತರಾಗಿದ್ದರೂ ರಾರ‍ಯಲಿಯಲ್ಲಿ ಭಾಗವಹಿಸಿದ ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರಿಕರ್‌, ‘ಕಾಂಗ್ರೆಸ್‌ ಪಕ್ಷಕ್ಕೆ ಶ್ರೀಲಂಕಾ ಪರಿಸ್ಥಿತಿ ಬರಲಿದೆ’ ಎಂದು ಟೀಕಿಸಿದರು. ‘ಶ್ರೀಲಂಕಾ ಪರಿಸ್ಥಿತಿ’ ಎಂದರೇನು ಎಂಬ ವಿವರವನ್ನು ಅವರು ನೀಡಲಿಲ್ಲ.