'ವೀರಶೈವ ಪದ ಬಿಟ್ಟು ಲಿಂಗಾಯತ ಮಾತ್ರ ಉಳಿಸಿಕೊಂಡು ಇದೊಂದೇ ಶೀರ್ಷಿಕೆಯಡಿ ಒಳಪಂಡಗಳು ಒಗ್ಗಟ್ಟಾಗಬೇಕು. ವಚನಗಳನ್ನು ತಿರುಚಿ ತಪ್ಪು ಸಂದೇಶ ಕೊಡುವ 'ವಚನ ದರ್ಶನ'ದಂತ ಕೃತಿಗೆ ವಿರೋಧಿಸಿ ಸತ್ಯಾಂಶ ತಿಳಿಸಬೇಕು'. 

ಬೆಂಗಳೂರು (ಫೆ.28): 'ವೀರಶೈವ ಪದ ಬಿಟ್ಟು ಲಿಂಗಾಯತ ಮಾತ್ರ ಉಳಿಸಿಕೊಂಡು ಇದೊಂದೇ ಶೀರ್ಷಿಕೆಯಡಿ ಒಳಪಂಡಗಳು ಒಗ್ಗಟ್ಟಾಗಬೇಕು. ವಚನಗಳನ್ನು ತಿರುಚಿ ತಪ್ಪು ಸಂದೇಶ ಕೊಡುವ 'ವಚನ ದರ್ಶನ'ದಂತ ಕೃತಿಗೆ ವಿರೋಧಿಸಿ ಸತ್ಯಾಂಶ ತಿಳಿಸಬೇಕು'. 'ವಚನ ಇದು ಜಾಗತಿಕ ಲಿಂಗಾಯತ ಮಹಾಸಭಾ, ಅಖಿಲ ಭಾರತ ವೀರಶೈವ ಮಹಾಸಭಾ, ಲಿಂಗಾಯತ ಮಠಾಧೀಶರ ಒಕ್ಕೂಟ ಜಂಟಿಯಾಗಿ ಇಲ್ಲಿನ ಬಸವ ಸಮಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ದರ್ಶನ: ಸತ್ಯ v/s ಮಿಥ್ಯ' ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ನಾಯಕರು ಹಾಗೂ ವಿವಿಧ ಮಠಾಧೀಶರ ಒಕ್ಕೊರಲ ಧ್ವನಿ. ಲಿಂಗಾಯತ ಕೃತಿ ಬಿಡುಗಡೆ ಮಾಡಿದ ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯಾಧ್ಯಕ್ಷ, ಸಚಿವ ಎಂ.ಬಿ.ಪಾಟೀಲ್ ಮಾತನಾಡಿದರು.

ರಾಜ್ಯದಲ್ಲಿ ಲಿಂಗಾಯತರನ್ನು ಒಡೆದು ಆಳುವ ಒಂದು ಅಜೆಂಡಾ ಕೆಲಸ ಮಾಡುತ್ತಿದೆ. 'ವಚನ ದರ್ಶನ' ಪುಸ್ತಕವು ಇದರ ಭಾಗ, ವಚನಗಳ ಅರ್ಥ ತಿರುಚಿರುವುದನ್ನು ಸಹಿಸಲಾಗಲ್ಲ ಎಂದರು. ಒಕ್ಕಲಿಗರಲ್ಲಿ 104 ಉಪಪಂಗಡಗಳಿದ್ದರೂ ಅವರಲ್ಲಿ ಒಡಕಿಲ್ಲ. ಅಲ್ಲಿ ಒಬ್ಬರೇ ಸ್ವಾಮೀಜಿ ಮತ್ತು ಒಂದೇ ಅಧಿಕಾರ ಕೇಂದ್ರವಿದೆ. ಆದರೆ, ಲಿಂಗಾಯತರು ಉಪಪಂಗಡಗಳಲ್ಲಿ ಹಂಚಿಹೋಗಿದ್ದಾರೆ. ಎಲ್ಲ ಲಿಂಗಾಯತರು ಒಂದೇ ಶೀರ್ಷಿಕೆ ಯಡಿ ಬರಬೇಕು. ಆಗ ಮಾತ್ರ ಸಮುದಾಯಕ್ಕೆ ಮೀಸಲಾತಿ ಸಿಗುತ್ತದೆ ಎಂದರು. ಲಿಂಗಾಯತ ಆನ್‌ಲೈನ್ ಪತ್ರಿಕೆ ಬಿಡುಗಡೆ ಮಾಡಿದ ಸಭಾಪತಿ ಬಸವರಾಜ ಹೊರಟ್ಟಿ, ರಾಜ್ಯದಲ್ಲಿ ಲಿಂಗಾಯತರು ಒಳಪಂಗಡದ ಬಗ್ಗೆ ಮಾತನಾಡುವುದು ನಿಲ್ಲಬೇಕು.

ಎಲ್ಲರೂ ಒಂದಾದಲ್ಲಿ ರಾಜ್ಯ ಆಳುವ ದಿನಗಳು ಮುಂದೆ ಬರಲಿವೆ ಎಂದರು. ಶಿಚಾಚಾರ್ಯ ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಸ್ವಾಮೀಜಿ, ನಾವು ಸಂಘಟಿತರಾದಲ್ಲಿ ಧರ್ಮಕ್ಕಾಗಿ ಹೋರಾಡುವ ಅಗತ್ಯ ಬರುವುದಿಲ್ಲ. ವೇದ ಉಪನಿ ಷತ್ ನಮಗೆ ಸಂಬಂಧ ಪಟ್ಟವಲ್ಲ, ವಚನ ಸಾಹಿತ್ಯವೇ ನಮ್ಮ ಗ್ರಂಥ ಎಂದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಮಾತನಾಡಿ, ಜಂಗಮರಿಂದ ಮಾದರವರೆಗಒಂದಾದರೆ ನಾವು ಕೇಳಿದ ಮೀಸಲಾತಿಯನ್ನು ಕೇಂದ್ರ ಕೊಡಲಿದೆ. ಶ್ಯಾಮನೂರು ಶಿವಶಂಕರಪ್ಪ ಅವರ ಸಮಕ್ಷ ಮದಲ್ಲಿ ಒಂದಾಗೋಣ ಎಂದರು. ತೋಂಟದಾರ್ಯ ಮಠದ ಡಾ.ಸಿದ್ದರಾಮ ಸ್ವಾಮೀಜಿ, ತೋಂಟದ 'ವೀರಶೈವ' ಪದ 'ಲಿಂಗಾಯತ' ಮಾತ್ರ ಬಿಟ್ಟು ನಾವು ಉಳಿಸಿಕೊಂಡು ಹೋಗಬೇಕಿದೆ ಎಂದು ಹೇಳಿದರು. 

ಪ್ರತಿ ವರ್ಷ ವಿಧಾನಸೌಧ ಆವರಣದಲ್ಲಿ ಪುಸ್ತಕ ಮೇಳ: ಸಿಎಂ ಸಿದ್ದರಾಮಯ್ಯ ಭರವಸೆ

ಹಿರಿಯ ಸಾಹಿತಿ ಡಾ.ಗೊ.ರು.ಚನ್ನಬಸಪ್ಪ ಮಾತನಾಡಿ, ಕೆಲವೇ ವರ್ಷಗಳಲ್ಲಿ 'ವೀರಶೈವ' ಎಂಬ ಶಬ್ದ ಹೋಗಿ ಲಿಂಗಾಯತ ಮಾತ್ರ ಉಳಿಯಲಿ ಎಂಬುದು ಬಯಕೆ ಎಂದರು. ಬಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರು, ವೀರಶೈವ ಪದ ಇಟ್ಟುಕೊಂಡು ಹೋದರೆ ಸಾವಿರ ವರ್ಷ ಹೋದರೂ ಧರ್ಮದ ಮಾನ್ಯತೆ ಸಿಗಲು ಸಾದ್ಯವಿಲ್ಲ ಎಂದರು. ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ, ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಶಿವಾನಂದ ಜಮಾದಾರ್, ಲೇಖಕ ಟಿ. ಆರ್. ಚಂದ್ರಶೇಖರ್, ಬೇಲಿಮಠದ ಶಿವ ರುದ್ರ ಸ್ವಾಮೀಜಿ, ಬಸವ ಧರ್ಮ ಪೀಠದ ಡಾ.ಗಂಗಾಮಾತಾಜಿ ಹಾಜರಿದ್ದರು.