Asianet Suvarna News Asianet Suvarna News

ಒಕ್ಕಲಿಗನಾಗಿರ್ತಿದ್ರೆ ಸಚಿವನಾಗ್ತಿದ್ದೆ ಎಂದ JDS ನಾಯಕ

ಯಾರದೋ ಮಾತು ಕೇಳಿಕೊಂಡು ಉದ್ದೇಶಪೂರ್ವಕವಾಗಿ ನನಗೆ ವಿಧಾನಪರಿಷತ್ತಿನ ಸಭಾಪತಿ ಸ್ಥಾನವನ್ನು ತಪ್ಪಿಸಲಾಯಿತು ಎಂದು ಜೆಡಿಎಸ್‌ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕುಮಾರಸ್ವಾಮಿ ಹಾಗೂ ದೇವೇಗೌಡರ ವಿರುದ್ಧ ಕಿಡಿ ಕಾರಿದ್ದಾರೆ.

If i was okkaliga then i might be minister now says Basavaraj Horatti
Author
Bangalore, First Published Oct 24, 2019, 2:06 PM IST

ಬೆಂಗಳೂರು(ಅ.24): ಯಾರದೋ ಮಾತು ಕೇಳಿಕೊಂಡು ಉದ್ದೇಶಪೂರ್ವಕವಾಗಿ ನನಗೆ ವಿಧಾನಪರಿಷತ್ತಿನ ಸಭಾಪತಿ ಸ್ಥಾನವನ್ನು ತಪ್ಪಿಸಲಾಯಿತು ಎಂದು ಜೆಡಿಎಸ್‌ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಪಕ್ಷದ ನಾಯಕರಾದ ಕುಮಾರಸ್ವಾಮಿ ಮತ್ತು ದೇವೇಗೌಡರ ವಿರುದ್ಧ ಕಟುವಾಗಿ ಹರಿಹಾಯ್ದ ಅವರು, ಬೆಳಗಾವಿ ಅಧಿವೇಶನ ವೇಳೆ ಪಕ್ಷದ ದೇವೇಗೌಡರು ಕರೆ ಮಾಡಿ ನಾಮಪತ್ರ ಸಲ್ಲಿಸುವಂತೆ ತಿಳಿಸಿದ್ದರು. ಆದರೆ, ಬೆಳಗಾಗುವ ಹೊತ್ತಿಗೆ ಎಚ್.ಡಿ.ಕುಮಾರಸ್ವಾಮಿ ಅವರು ಬೇಡ ಎಂದಿದ್ದಾರೆ.

ಒಕ್ಕಲಿಗನಾಗಿರ್ತಿದ್ರೆ ಸಚಿವನಾಗ್ತಿದ್ದೆ:

ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಅನೇಕರು ಸಚಿವರಿದ್ದರು. ದೇವೇಗೌಡ ಅವರು ಹೇಳಿದ್ದರೆ ಒಂದಿಬ್ಬರು ಸಚಿವ ಸ್ಥಾನ ಬಿಟ್ಟುಕೊಡುತ್ತಿದ್ದರು. ನಾನು ಒಕ್ಕಲಿಗನಾಗಿದ್ದಿದ್ದರೆ ಸಚಿವನಾಗಿರುತ್ತಿದ್ದೆ. ಲಿಂಗಾಯತ ಎಂಬ ಕಾರಣಕ್ಕಾಗಿ ಅವಕಾಶ ಸಿಗಲಿಲ್ಲ ಎಂದು ಆರೋಪಿಸಿದ್ದಾರೆ.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ತಮ್ಮನ್ನು ಕಡೆಗಣಿಸಲಾಗಿತ್ತು ಎಂದು ಕೆಲದಿನಗಳ ಹಿಂದೆ ಹೇಳಿಕೆ ನೀಡಿದ್ದ ಬಸವರಾಜ ಹೊರಟ್ಟಿ ಅವರು ಬುಧವಾರ ಮತ್ತೆ ತಮ್ಮ ಬೇಸರವನ್ನು ಹೊರಹಾಕಿದ್ದಾರೆ.

ಗಣಿ ರೀತಿ ನೆರೆಗೂ ಸಿದ್ದು ನೇತೃತ್ವದಲ್ಲಿ ಪಾದಯಾತ್ರೆ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ನಿಷ್ಠೆಯಿಂದ ದುಡಿದರೂ ನನಗೆ ಅವಕಾಶ ಸಿಗಲಿಲ್ಲ. ಸಚಿವ ಸ್ಥಾನಕ್ಕೂ ನನ್ನನ್ನು ಪರಿಗಣಿಸಲಿಲ್ಲ. ಯಾರದೋ ಮಾತು ಕೇಳಿ ಉದ್ದೇಶಪೂರ್ವಕವಾಗಿ ನನಗೆ ಸ್ಥಾನ ತಪ್ಪಿಸಲಾಯಿತು. ಉಪಸಭಾಪತಿ ಸ್ಥಾನವನ್ನು ಧರ್ಮೇಗೌಡ ಅವರಿಗೆ ನೀಡಲು ನನಗೆ ಅನ್ಯಾಯ ಮಾಡಲಾಯಿತು ಎಂದು ಅಳಲು ತೋಡಿಕೊಂಡಿದ್ದಾರೆ.

ಖಟ್ಟರ್ ಕರೆಸಿಕೊಂಡ ಶಾ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸುಭಾಷ್ ಭರಾಲಾ ರಾಜೀನಾಮೆ!

Follow Us:
Download App:
  • android
  • ios