ಬೆಂಗಳೂರು (ಅ.02): ಕೇಂದ್ರ ಸರ್ಕಾರದ ಅನ್‌ಲಾಕ್‌ 5 ಮಾರ್ಗಸೂಚಿ ಪ್ರಕಾರ ಈಜುಕೊಳವನ್ನು ಕ್ರೀಡಾಪಟುಗಳಿಗೆ ಬಳಸಿಕೊಳ್ಳಲು ಅವಕಾಶ ನೀಡಿದ್ದು, ಕೊರೋನಾ ಸೋಂಕಿನ ಲಕ್ಷಣ ಇರುವವರು ತೆರಳಬಾರದು ಎಂದು ಪ್ರವಾಸೋದ್ಯಮ ಮತ್ತು ಕ್ರೀಡಾ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅನ್‌ಲಾಕ್‌ 5ರಲ್ಲಿ ಮತ್ತಷ್ಟುನಿರ್ಬಂಧವನ್ನು ಸಡಿಲಗೊಳಿಸಲಾಗಿದೆ. ಈಜುಕೊಳ ಮತ್ತು ಚಿತ್ರಮಂದಿರ ಪ್ರಾರಂಭಿಸಲು ಅವಕಾಶ ನೀಡಲಾಗಿದ್ದು, ಸುರಕ್ಷಿತ ಕ್ರಮಗಳನ್ನು ಅನುಸರಿಸಬೇಕು. ಈಜುಕೊಳ ಆಗಮಿಸುವ ಕ್ರೀಡಾಪಟುಗಳು ಸುರಕ್ಷಿತಾ ಕ್ರಮಗಳನ್ನು ಕೈಗೊಳ್ಳಬೇಕು. ಕೊರೋನಾ ಲಕ್ಷಣ ಇರುವವರು ಈಜುಕೊಳಕ್ಕೆ ತೆರಳಬಾರದು ಎಂದು ಹೇಳಿದರು.

ಸಾರ್ವಜನಿಕರೇ ಎಚ್ಚರ: ಮಾಸ್ಕ್‌ ಧರಿಸದಿದ್ರೆ ಕ್ರಿಮಿನಲ್‌ ಕೇಸ್‌..!

ಈಜುಕೊಳಕ್ಕೆ ಬರುವವರು ಪರೀಕ್ಷೆ ಮಾಡಿಸಿಕೊಳ್ಳಬೇಕು. ಸಿನಿಮಾ ಪ್ರದರ್ಶನಕ್ಕೆ ಅನುಮತಿಸಲಾಗಿದ್ದು, ಶೇ.50ರಷ್ಟುಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಬಹುದಿನಗಳಿಂದ ಈಜುಕೊಳ ಮತ್ತು ಸಿನಿಮಾ ಮಂದಿರ ಪ್ರಾರಂಭಿಸುವಂತೆ ಬೇಡಿಕೆ ಇತ್ತು. ಅದನ್ನು ಗಮನಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕೊರೋನಾ ವ್ಯಾಪಕವಾಗಿ ಹರಡುತ್ತಿದ್ದ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್‌ ಮಾಡಲಾಯಿತು. ಬಳಿಕ ಹಂತಹಂತವಾಗಿ ಅನ್‌ಲಾಕ್‌ ಮಾಡಿ ಆರ್ಥಿಕ ಚಟುವಟಿಕೆಗೆ ಅವಕಾಶ ಮಾಡಿಕೊಡಲಾಯಿತು. ಆದರೆ, ಸಿನಿಮಾ ಮಂದಿರ ಮತ್ತು ಈಜುಕೊಳ ಪ್ರಾರಂಭಕ್ಕೆ ಅನುಮತಿ ನೀಡಿರಲಿಲ್ಲ. ಏಳು ತಿಂಗಳ ಬಳಿಕ ಸಿನಿಮಾ ಮಂದಿರ ಮತ್ತು ಈಜುಕೊಳ ಆರಂಭಕ್ಕೆ ಅನುಮತಿ ನೀಡಲಾಗಿದೆ.