ರೋಹಿಣಿ ಸಿಂಧೂರಿ ಕೆಲ ಐಎಎಸ್‌ ಅಧಿಕಾರಿಗಳಿಗೆ ಫೋಟೋಗಳನ್ನು ಕಳುಹಿಸಿದ ಬಗ್ಗೆ ಯಾವುದೇ ಸಂಸ್ಥೆ ತನಿಖೆ ಮಾಡಿದರೆ ಅದಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳನ್ನು ಕೊಡುತ್ತೇನೆ ಎಂದು ಡಿ. ರೂಪಾ ತಿಳಿಸಿದ್ದಾರೆ. 

ಬೆಂಗಳೂರು (ಫೆ.20): ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ ಐಜಿಪಿ ಡಿ. ರೂಪಾ ಮೌದ್ಗಿಲ್‌ ಕೂಡ ದೂರು ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು ರೋಹಿಣಿ ಸಿಂಧೂರಿ ಕೆಲ ಐಎಎಸ್‌ ಅಧಿಕಾರಿಗಳಿಗೆ ಫೋಟೋಗಳನ್ನು ಕಳುಹಿಸಿದ ಬಗ್ಗೆ ಯಾವುದೇ ಸಂಸ್ಥೆ ತನಿಖೆ ಮಾಡಿದರೆ ಅದಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳನ್ನು ಕೊಡುತ್ತೇನೆ ಎಂದು ಡಿ. ರೂಪಾ ತಿಳಿಸಿದ್ದಾರೆ. 

ಐಜಿಪಿ ಡಿ. ರೂಪ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸೀಂಧೂರಿ ಅವರ ನಡುವೆ ನಡೆಯುತ್ತಿರುವ ಜಗಳದ ಕುರಿತು ರೋಹಿಣಿ ಸಿಂಧೂರಿ ಅವರು ಇಂದು ಬೆಳಗ್ಗೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ದೂರು ನೀಡಿದ್ದರು. ಇದರ ಬೆನ್ಲಲ್ಲೇ ಐಜಿಪಿ ಡಿ.ರೂಪ‌ ಅವರಿಂದಲೂ ಮುಖ್ಯ ಕಾರ್ಯದರ್ಶಿಗೆ ಲಿಖಿತ ದೂರು ನೀಡಲಾಗಿದೆ. ಈಗ ವಿಧಾನ ಸೌಧಕ್ಕೆ ಆಗಮಿಸಿದ ಐಜಿಪಿ ಡಿ.ರೂಪ ದೂರು ದಾಖಲಿಸಲು ಮುಖ್ಯ ಕಾರ್ಯದರ್ಶಿ ಕೊಠಡಿಗೆ ತೆರಳಿದ್ದಾರೆ.

IAS vs IPS: ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ ರೋಹಿಣಿ ಸಿಂಧೂರಿ: ಫೋಟೋ ಯಾರಿಗೆ ಕಳಿಸಿದ್ದೇನೆ ಬಹಿರಂಗಪಡಿಸಲಿ

ಭ್ರಷ್ಟಾಚಾರ ಪ್ರಕರಣ ಮರು ತನಿಖೆ ಮಾಡಲಿ: ರೋಹಿಣಿ ಸಿಂಧೂರಿ ವಿರುದ್ಧ ಭ್ರಷ್ಟಾಚಾರ ಪ್ರಕರಣ ತನಿಖೆಗೆ ಡಿ.ರೂಪ ಆಗ್ರಹ ಮಾಡುತ್ತಿದ್ದಾರೆ. ಈಗಾಗಲೇ ಲೋಕಾಯುಕ್ತದಲ್ಲಿ ಇರುವ ಪ್ರಕರಣದ ತನಿಖೆ ಚುರುಕುಗೊಳಿಸಲು ಮನವಿ ಮಾಡಲಾಗುವುದು. ಮೈಸೂರು ಜಿಲ್ಲಾಧಿಕಾರಿ ಆಗಿದ್ದಾಗ ಸ್ವಿಮ್ಮಿಂಗ್ ಪೂಲ್‌ ನಿರ್ಮಾಣ ಮಾಡಲಾಗಿತ್ತು. ಡಾ.ರವಿಶಂಕರ್ ವರದಿ ಆಧರಿಸಿ ರೋಹಿಣಿ ವಿರುದ್ದ ಕ್ರಮಕ್ಕೆ‌ ಆಗ್ರಹಿಸಿದ್ದಾರೆ. ಪ್ರಾಥಮಿಕ ವರದಿಯಲ್ಲಿ ರೋಹಿಣಿ ಸಿಂಧೂರಿ ಅವರ ತಪ್ಪು ಸಾಬೀತಾಗಿದೆ. ಆದರೂ ಅವರ ವಿರುದ್ಧ ಯಾವುದೇ ಕ್ರಗಳನ್ನು ಕೈಗೊಂಡಿಲ್ಲ ಎಮದು ಆರೋಪಿಸಿದ್ದಾರೆ. 

ಜಾಲಹಳ್ಳಿ ಮನೆ ಬಗ್ಗೆ ತನಿಖೆ ಮಾಡಬೇಕು: ಜಾಲಹಳ್ಳಿಯಲ್ಲಿ ನಿರ್ಮಾಣ ಆಗುತ್ತಿರುವ ಮನೆಯ ಬಗ್ಗೆ ತನಿಖೆ ಆಗಬೇಕು.. ಮನೆ‌ ನಿರ್ಮಾದ ಬಗ್ಗೆ ಇಮ್ಮೂವಬೆಲ್ ಪ್ರಾಪರ್ಟಿ ರಿಟನ್ ಫೈಲ್‌ನಲ್ಲಿ ಉಲ್ಲೇಖಿಸಿಲ್ಲ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಮನೆ ನಿರ್ಮಾಣ ಮಾಡಲಾಗುತ್ತಿದೆ. ಅಕ್ರಮ‌ಆಸ್ತಿ ಗಳಿಕೆ ಆರೋಪದ ಅಡಿ ತನಿಖೆ ಮಾಡುವಂತೆ ಮನವಿ ಮಾಡಲಾಗುತ್ತಿದೆ. ಜಾಲಹಳ್ಳಿಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಮನೆಗೆ ಸುಮಾರು 2 ಕೋಟಿ ರೂ. ಮೌಲ್ಯದ ಪೀಠೋಪಕರಣಗಳನ್ನು ಇಟಲಿಯಿಂದ ತರಿಸಿಕೊಳ್ಳಲಾಗಿದೆ. ಬಾಗಿಲಿನ ಹಿಂಜಸ್‌ ಒಂದಕ್ಕೇ ಬರೋಬ್ಬರು 6 ಲಕ್ಷ ರೂ. ವೆಚ್ಚ ಮಾಡಲಾಗಿದೆ. ರೋಹಿಣಿ ಸಂಧೂರಿ ಅವರು ನೀಡಿದ ದೂರಿನಲ್ಲಿ 26 ಲಕ್ಷ ಜರ್ಮನ್‌ ಅಪ್ಲೈಯನ್ಸಸ್‌ ಬಳಸಿದ್ದಾರೆ. ಅವರದ್ದಲ್ಲದ ಮನೆಗೆ ಅವರು ಯಾಕೆ ಇಷ್ಟೊಂದು ಯಾಕೆ ಖರ್ಚು ಮಾಡುತ್ತಾರೆ. ಈ ಬಗ್ಗೆ ಸಾಕ್ಷಿ ಸಮೇತ ದೂರು ನೀಡಲಾಗುತ್ತದೆ ಎಂದರು.

ಮುಖ್ಯ ಕಾರ್ಯದರ್ಶಿ ಅಂಗಳ ತಲುಪಿದ IAS vs IPS ಅಧಿಕಾರಿಗಳ ಜಗಳ: ಸಿಎಸ್‌ ಭೇಟಿಯಾದ ರೋಹಿಣಿ ಸಿಂಧೂರಿ

ಟಿಟಿಡಿ ಟೆಂಡರ್‌ನಲ್ಲಿ ಅಕ್ರಮ: ಲೋಕಾಯುಕ್ತ ದೂರು ರಿಜೆಕ್ಟ್‌ ಆಗಿದ್ದು, ಅದನ್ನು ರಿ ಕನ್ಸಿಡರ್‌ ಮಾಡಿ ತನಿಖೆಗೆ ವಹಿಸಬೇಕು. ಟಿಟಿಡಿ (ತಿರುಪತಿ)ಯಲ್ಲಿ ಭವನ ನಿರ್ಮಾಣ ಮಾಡುವ ವಿಚಾರವಾಗಿ ಕೆಟಿಪಿಪಿ ಅನ್ವಯ ಟೆಂಡರ್‌ ಕರೆಯದೇ ಒಂದು ಖಾಸಗಿ ಸಂಸ್ಥೆಗೆ ಟೆಂಡರ್‌ ನೀಡಲಾಗಿದೆ. ಹರ್ಷ ಗುಪ್ತಾ ಅವರು 2 ಕೋಟಿ ರೂ. ಮೊತ್ತದ ಭ್ರಷ್ಟಾಚಾರ ದೂರು ನೀಡಿದ್ದರು. ಈ ಬಗ್ಗೆ ಪುನಃ ತನಿಖೆ ಮಾಡಬೇಕು. ಶಾಸಕರ ಬಳಿ ಇವರು ಸಂಧಾನಕ್ಕೆ ಹೋಗಿದ್ದಾರೆ. ಅವರು ಯಾವ ನಿಯಮಾವಳಿಗಳ ಅನ್ವಯ ಸಂಧಾನಕ್ಕೆ ಹೋಗಿದ್ದಾರೆ ಗೊತ್ತಾಗುತ್ತಿಲ್ಲ. 

ತನಿಖಾ ಸಂಸ್ಥೆಗೆ ಸಾಕ್ಷಿ ಕೊಡುತ್ತೇನೆ: ಆಕೆ ಸೋಷಿಯಲ್‌ ಮೀಡಿಯಾಗಳಲ್ಲಿ ಇಲ್ಲ ಎನ್ನುವುದು ಗೊತ್ತು. ಯಾವುದೇ ಸಂಸ್ಥೆಯು ತನಿಖೆ ಮಾಡಿದರೂ ಅವರಿಗೆ ರೋಹಿಣಿ ಸಿಂಧೂರಿ ಅವರ ಚಾಟಿಂಗ್‌ ಮಾಡಿರುವ ಬಗ್ಗೆ ಸಾಕ್ಷಿಗಳನ್ನು ಒದಗಿಸುತ್ತೇನೆ. ಅವರು ಸರ್ವಿಸ್‌ ಕಂಡಕ್ಟ್‌ ರೂಲ್‌ ವೈಲೇಷನ್‌ ಮಾಡಿದ್ದಾರೆ ಎಂಬ ಹಿನ್ನೆಲೆಯಲ್ಲಿಯೇ ದೂರು ನೀಡಲಾಗುತ್ತಿದೆ. ಇದರಲ್ಲಿ ಯಾವುದೇ ವೈಯಕ್ತಿಕ ವಿಚಾರಗಳು ಇಲ್ಲ.