IAS vs IPS Fight:ಡಿಕೆ ರವಿ, ರೋಹಿಣಿ ಸಿಂಧೂರಿ ಪ್ರೇಮ ಸಲ್ಲಾಪ ಸಿಬಿಐ ವರದಿಯಲ್ಲಿದೆ: ಮತ್ತೆ ಕೆದಕಿದ ಡಿ ರೂಪಾ

ಡಿ.ಕೆ. ರವಿ ಮಾನಸಿಕ ಸಮಸ್ಯೆಯಿಂದ ಸತ್ತದ್ದು ಎಂದು ಹೇಳುತ್ತಿರುವ ರೋಹಿಣಿ ಸಿಂಧೂರಿ, ಅವರ ಖಾತೆಯನ್ನು ಯಾಕೆ ಬ್ಲಾಕ್‌ ಮಾಡಲಿಲ್ಲ. ಅವರಿಬ್ಬರ ಪ್ರೇಮ ಸಲ್ಲಾಪವು ಸಿಬಿಐ ಕೊಟ್ಟ ಅಂತಿಮ ವರದಿಯಲ್ಲಿ ಎಲ್ಲರ ಕೈ ಸೇರಿವೆ.

IAS vs IPS Fight DK Ravi and Rohini sindhuri love ode is in CBI report D Roopa sat

ಬೆಂಗಳೂರು (ಫೆ.19): ಕೋಲಾರ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು ಮಾನಸಿಕ ಸಮಸ್ಯೆಯಿಂದ ಸತ್ತದ್ದು ಎಂದು ಹೇಳುತ್ತಿರುವ ರೋಹಿಣಿ ಸಿಂಧೂರಿ, ಅವರ ಖಾತೆಯನ್ನು ಯಾಕೆ ಬ್ಲಾಕ್‌ ಮಾಡಲಿಲ್ಲ. ಅವರಿಬ್ಬರ ಪ್ರೇಮ ಸಲ್ಲಾಪವು ಸಿಬಿಐ ಕೊಟ್ಟ ಅಂತಿಮ ವರದಿಯಲ್ಲಿ ಎಲ್ಲರ ಕೈ ಸೇರಿವೆ. ಐಎಎಸ್‌ ಅಧಿಕಾರಿಗೆ ಕಳಿಸಿರುವ ಫೋಟೋಗಳು ಉತ್ತೇಜನ ಕೊಡುವುದಿಲ್ಲವೇ ಎಂದು ರೋಹಿಣಿ ಸಿಂಧೂರಿ ಪ್ರತಿಕ್ರಿಯೆಗೆ ಐಪಿಎಸ್‌ ಅಧಿಕಾರಿ ಡಿ. ರೂಪಾ ಮತ್ತೆ ತಿರುಗೇಟು ನೀಡಿದ್ದಾರೆ. 

ಐಪಿಎಸ್‌ ಅಧಿಕಾರಿ ಡಿ. ರೂಪಾ ಅವರು ಬೆಳಗ್ಗೆಯಿಂದ ರೋಹಿಣಿ ಸಿಂಧೂರಿ ಅವರ ಖಾಸಗಿ ಫೋಟೋಗಳನ್ನು ಹಂಚಿಕೊಂಡು ಇವುಗಳನ್ನು ಕೆಲ ಐಎಎಸ್‌ ಅಧಿಕಾರಿಗಳಿಗೆ ಕಳುಹಿಸಲಾಗುತ್ತಿದೆ ಎಂದು ಆರೋಪ ಮಾಡಿದ್ದರು. ಈ ಆರೋಪಕ್ಕೆ ಮೊದಲ ಬಾರಿಗೆ ಮಾಧ್ಯಮ ಪ್ರಕಟಣೆಯ ಮೂಲಕ ಪ್ರತಿಕ್ರಿಯೆ ನೀಡಿದ್ದ ರೋಹಿಣಿ ಸಿಂಧೂರಿ ಅವರು, ರೂಪಾ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುವುದಾಗಿ ತಿಳಿಸಿದ್ದರು. 

IAS vs IPS Fight: ರೋಹಿಣಿ ಸಿಂಧೂರಿ-ರೂಪಾ ಮೌದ್ಗಿಲ್‌ ಫೈಟ್‌ಗೆ ಡಿಕೆ ರವಿ ಪತ್ನಿ ಎಂಟ್ರಿ!

ಸತ್ಯ ಮಣಿಸಲು ಸಾಧ್ಯವಿಲ್ಲ: ಇದಕ್ಕೆ ಪುನಃ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿದ ರೂಪಾ ಮೌದ್ಗಿಲ್‌ ಅವರು, "ಅದರಲ್ಲಿ ಆಕೆ ಹೇಳುತ್ತಾರೆ, ಡಿಕೆ ರವಿ ಸತ್ತದ್ದು mental illness ಇಂದ ಅಂತ. ರವಿಯನ್ನು ಇಷ್ಟು ನಿಕೃಷ್ಟವಾಗಿ ಹೀಯಾಳಿಸಿದರೆ? ನನ್ನ ಪ್ರಶ್ನೆ ಇಷ್ಟೇ.. ರೋಹಿಣಿ ಸಿಂಧೂರಿ ಯಾಕೆ ರವಿಯನ್ನು ಬ್ಲಾಕ್ ಮಾಡಲಿಲ್ಲ. ಅವರಿಬ್ಬರ ಪ್ರೇಮ ಸಲ್ಲಾಪ ಸಿಬಿಐ ಕೊಟ್ಟ ಫೈನಲ್ ರಿಪೋರ್ಟ್ ನಲ್ಲಿ ಎಲ್ಲರ ಕೈ ಸೇರಿದೆ. ಒಬ್ಬ ಪುರುಷ ಎಲ್ಲೆ ಮೀರಿ ನಡೆದಾಗ ಈಕೆ ಜವಾಬ್ದಾರಿಯುತ ಹೆಣ್ಣು ಮಗಳಾಗಿ ಯಾಕೆ ಬ್ಲಾಕ್ ಮಾಡಲಿಲ್ಲ. ಅಂದರೆ ಉತ್ತೇಜನ ಕೊಟ್ಟಂತೆ ಅಲ್ಲವೇ? ಅದೇ ರೀತಿ ias ಅಧಿಕಾರಿಗಳಿಗೆ ಕಳಿಸಿದ ಆ ರೀತಿಯ ಚಿತ್ರಗಳು ಉತ್ತೇಜನ ಕೊಡುವುದು ಎಂದು ಅರ್ಥ ಆಗುವುದಿಲ್ಲವೇ? ಅವರು ಯಾವ forum ಹೋದರೂ, ಸತ್ಯ ಸತ್ಯವೇ. ಸತ್ಯ ಮಣಿಸಲು ಸಾಧ್ಯವಿಲ್ಲ. ಈ ಬಾರಿ ಸಾಧ್ಯವಿಲ್ಲ. ಎಂದು ಹೇಳಿದ್ದಾರೆ.

ಫೋಟೋ ಹಾಕಿದ್ದ ಬಗ್ಗೆ ರೂಪ‌ಮೌದ್ಗಿಲ್ ಉತ್ತರ:  ಈ ಪಿಕ್ಸ್ ಈಗ ಯಾಕೆ ಹಾಕಿದ್ದೀರಿ ಅಂತ ಕೇಳುವವರಿಗೆ ಹೇಳುವುದು ಇಷ್ಟೇ. ಈ ಚಿತ್ರಗಳು ನನ್ನ ಕೈ ಸೇರಿದ್ದು ಕೇವಲ ಇತ್ತೀಚೆಗೆ. ವಿಷಯ ತಿಳಿದ ತಕ್ಷಣ ಸರ್ಕಾರ ಮಟ್ಟದಲ್ಲಿ ವಿಷಯ ಎಲ್ಲೆಲ್ಲಿ ತಿಳಿಸಬೇಕು ಅಲ್ಲಿ ತಿಳಿಸಿದ್ದೇನೆ. ನಾನು ಹಾಕಿದ 20 ಅಂಶಗಳ ಪೋಸ್ಟ್‌ನಲ್ಲಿ ಒಂದಂಶ ಈ ಚಿತ್ರಗಳ ಬಗ್ಗೆ ಹೇಳಿದ್ದೇನೆ. ಅದಕ್ಕಾಗಿ ಈ ಚಿತ್ರಗಳನ್ನು ( ಅದರಲ್ಲೂ ಆದಷ್ಟು ಗಂಭೀರ ಚಿತ್ರಗಳನ್ನು) ಹಾಕಿದ್ದೇನೆ. 20 ಅಂಶಗಳ ಬಗ್ಗೆ , ಅಂದರೆ ಕೆಲವು ಹಿಂದಿನವು, ಈಗ ಯಾಕೆ ಪ್ರಸ್ತಾಪ ಮಾಡಿದ್ದೀರಿ ಅಂತ ಕೇಳುವವರಿಗೆ ಹೇಳುವುದು ಇಷ್ಟೇ...ಅನೇಕ ವಿಷಯಗಳು ನನಗೆ ಇತ್ತೀಚೆಗೆ ಒಂದು ವರ್ಷದೊಳಗೆ ಗೊತ್ತಾಗಿದ್ದು. 

IAS vs IPS Fight: ಈ ಪಿಕ್ಸ್ ಕೇವಲ ಸ್ಯಾಂಪಲ್ ಅಷ್ಟೆ: ಆಕೆ ಬಿಹೇವಿಯರ್‌ ಸರಿಯಿಲ್ಲ..! ಎಂದ ಡಿ ರೂಪಾ

ಶಾಸಕರ ಬಳಿ ಸಂಧಾನ ಯಾವ ನಿಯಮದಲ್ಲಿದೆ: ಒಬ್ಬ Mla ಒಬ್ಬರ ಹತ್ರ ಡಿಸಿ ಆಗಿದ್ದ ಐಎಎಸ್ ಅಧಿಕಾರಿ ಸಂಧಾನಕ್ಕೆ ಹೋಗಿದ್ದಾರೆ ಎಂಬ ವಿಷಯ ಮಾಧ್ಯಮದಲ್ಲಿ ಬಂದಿದ್ದರಿಂದ ಈ ಐಎಎಸ್ ಅಧಿಕಾರಿಯ( ರೋಹಿಣಿ ಸಿಂಧೂರಿ) ಅವರ ನಡವಳಿಕೆ ಅರ್ಥ ಮಾಡಿಕೊಳ್ಳಲು ಅನುಕೂಲವಾಗುವ ಹಳೆಯ ವಿಷಯಗಳನ್ನು ಪ್ರಸ್ತಾಪ ಮಾಡಿದ್ದೇನೆ.  ಯಾಕೆ ಇವರು ಎಂಎಲ್ಎ ಬಳಿ ಸಂಧಾನಕ್ಕೆ ಹೋಗುತ್ತಾರೆ. ಸರ್ಕಾರದ ಯಾವ ನಿಯಮದಲ್ಲಿ ಈ ರೀತಿಯ ಸಂಧಾನಕ್ಕೆ ಅವಕಾಶ ಇದೆ. ಅಂದರೆ, ಇವರು ಏನನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಾ ಇದ್ದಾರೆ. ಈಕೆ ಮಾಡಿದ ಭ್ರಷ್ಟಾಚಾರ ವೋ, ಅನೈತಿಕ ನಡತೆಯೋ, ಆಕೆಯೇ ಉತ್ತರಿಸಬೇಕು.

 

ಡಿ.ಕೆ. ರವಿ ಬಗ್ಗೆ ಆವತ್ತೂ ಇದೇ ಅಭಿಪ್ರಾಯ ಇತ್ತು: ನಾನು ಹಿಂದೆ ಕೂಡ ಇವರಿಗೆ ನಾನು ಹಾಗೂ ನನ್ನ ಪತಿ ಐಎಎಸ್ ಅಧಿಕಾರಿಯಾದ ಮೌದ್ಗಿಲ್ ಅವರು ತುಂಬಾ ಸಹಾಯ ಮಾಡಿದ್ದು ಆಕೆಗೂ ಗೊತ್ತಿದೆ ಎಂದು ಫೇಸ್ಬುಕ್ನಲ್ಲಿ ಬರೆದಿದ್ದೆ.  ಆದರೆ ಬರಬರುತ್ತಾ ಆಕೆ ಯ ಅನೇಕ ವಿಷಯಗಳು ಬಯಲಾಗಿ ನನಗೆ ಗೊತ್ತಾಗಿ, ಸಂಧಾನ ಎಂದು ಮಾಧ್ಯಮದಲ್ಲಿ ಬಂದಾಗ ಈ ಪೋಸ್ಟ್ ಹಾಕಿರುತ್ತೆನೆ. ಮಾನ್ಯ ಡಿಕೆ ರವಿ ವಿಚಾರದಲ್ಲಿ ಈಕೆ ನಡೆದುಕೊಂಡ ರೀತಿ ಬಗ್ಗೆ ಅವತ್ತೂ ನನ್ನ ಅಭಿಪ್ರಾಯ ಅದೇ ಇತ್ತು, ಈಗಲೂ ಅದೇ ಇದೆ. ಅವತ್ತಿಗೂ ನಾನು ಇದೆ ವಿಷಯ ಅನೇಕೆ ಐಎಎಸ್ ಅಧಿಕಾರಿಗಳಿಗೆ ಹೇಳಿದ್ದೆ, ಏನೆಂದರೆ, ಯಾಕೆ ಇವರು ಡಿಕೆ ರವಿ ಅವರನ್ನು ಸಂಪೂರ್ಣ block ಮಾಡಲಿಲ್ಲ? ರವಿ ಅವರು ಈಕೆಯ ಬಗ್ಗೆ ಭಾವಾನುರಾಗಕ್ಕೆ ಒಳಗಾದಾಗ ಐಎಎಸ್ ಸ್ಥಾನದಲ್ಲಿ ಇದ್ದ ಜವಾಬ್ದಾರಿಯುತ ಮಾದರಿ ಮಹಿಳೆ ಏನು ಮಾಡಬೇಕು? ಅದನ್ನು ಮುಂದು ವರೆಸದೆ ಬ್ಲಾಕ್ ಮಾಡಬೇಕು. ಅದನ್ನು ಯಾಕೆ ಮಾಡಲಿಲ್ಲ.

IAS vs IPS Fight: ಖಾಸಗಿ ಫೋಟೋ ಹಂಚಿಕೆ ಬಗ್ಗೆ ಪ್ರತಿಕ್ರಿಯೆ: ರೂಪಾಗೆ ಮಾನಸಿಕ ಸ್ಥಿಮಿತವಿಲ್ಲ ಎಂದ ರೋಹಿಣಿ ಸಿಂಧೂರಿ

ಒಂದು ಅಂಶದಲ್ಲಾರೂ ಶಿಕ್ಷೆ ಆಗಬೇಕು: ಹಾಗಾಗಿ ನನ್ನ ಪ್ರಶ್ನೆ ಮಾಡುವವರಿಗೆ ನಾನು ಹೇಳುವುದು ಇಷ್ಟೇ..  ನಾನು ಬರೆದ 20 ಅಂಶಗಳಿಗೆ ಒಂದರಲ್ಲಿ ಆದರೂ ಆಕೆಗೆ ಶಿಕ್ಷೆ ಆಗಿದೆಯೇ. ಯಾಕೆ. ಶಿಕ್ಷೆ ಆಗದಂತೆ ಈಕೆ ಏನು ಮಾಡುತ್ತಾರೆ. ಅದಕ್ಕಾಗಿಯೇ ಸಂಧಾನಕ್ಕೆ ಹೋದರೆ ಎಂಎಲ್ಎ ಬಳಿ.  ಈಗೂ ಕೂಡ ಪ್ರೂವ್ ಆಗಿರುವ ಅಂಶಗಳ ಮೇಲೆ ಆಕೆಗೆ ಶಿಕ್ಷೆ ಆಗುತ್ತದೆಯೇ ಎಂದು ಪೋಸ್ಟ್‌ ಮಾಡಿದ್ದಾರೆ.

Latest Videos
Follow Us:
Download App:
  • android
  • ios