'ಆ' ಫೋಟೋಗಳನ್ನ ಬಳಸಬೇಡಿ, ಮಾಧ್ಯಮಕ್ಕೆ ರೋಹಿಣಿ ಸಿಂಧೂರಿ ಮನವಿ!

ಮಾಜಿ ಐಪಿಎಸ್‌ ಅಧಿಕಾರಿ ರೂಪಾ ಮೌದ್ಗಿಲ್‌ ಅವರು, ಐಎಎಸ್‌ ಅಧಿಕಾರಿಯಾಗಿರುವ ರೋಹಿಣಿ ಸಿಂಧೂರಿ ಅವರ ಕೆಲವು ಖಾಸಗಿ ಪೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ನಡುವೆ ರೂಪಾ ಅವರಿಗೆ ಈ ಫೋಟೋ ಎಲ್ಲಿ ಸಿಕ್ಕವು ಎನ್ನುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
 

IAS rohini sindhuri request to Media Houses not to use her Private Photo IPS D Roopa san

ಬೆಂಗಳೂರು (ಫೆ.19): ಸೋಶಿಯಲ್‌ ಮೀಡಿಯಾದಲ್ಲಿ ಮಾಜಿ ಐಪಿಎಸ್‌ ಅಧಿಕಾರಿ ರೂಪಾ ಮೌದ್ಗಿಲ್‌ ಹಂಚಿಕೊಂಡಿರುವ 'ಖಾಸಗಿ' ಫೋಟೋಗಳ ಬಗ್ಗೆ ರೋಹಿಣಿ ಸಿಂಧೂರಿ ಮಾಧ್ಯಮ ಹೇಳಿಕೆಗಳ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಅದರೊಂದಿಗೆ ಇದು ನನ್ನ ವೈಯಕ್ತಿಕ ಚಿತ್ರಗಳಾಗಿದ್ದು ಯಾವುದೇ ಕಾರಣಕ್ಕೂ ಇವುಗಳನ್ನು ಬಳಸದಂತೆ ಮಾಧ್ಯಮಗಳಿವೆ ಮನವಿ ಮಾಡಿದ್ದಾರೆ. ನನ್ನ ಸಾಮಾಜಿಕ ಮಾಧ್ಯಮ ಪೇಜ್‌ಗಳಿಂದ ಹಾಗೂ ವಾಟ್ಸ್‌ಅಪ್‌ ಸ್ಟೇಟಸ್‌ಗಳ ಸ್ಕ್ರೀನ್‌ ಶಾಟ್‌ಗಳ ಮೂಲಕ ರೂಪಾ ಅವರು ಫೋಟೋಗಳನ್ನು ತೆಗೆದುಕೊಂಡಿದ್ದಾರೆ. ಈ ಚಿತ್ರಗಳನ್ನು ನನ್ನ ಚಾರಿತ್ರ್ಯ ವಧೆ ಮಾಡಲು ತೋಜೋವಧೆ ಮಾಡಲು ರೂಪಾ ಬಳಸಿಕೊಂಡಿದ್ದಾರೆ ಎಂದು ಮಾಧ್ಯಮ ಸಂಸ್ಥೆಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ ಒಬ್ಬ ಹಿರಿಯ  ಪೊಲೀಸ್ ಅಧಿಕಾರಿಯಾಗಿ ಅದರಲ್ಲೂ ಒಬ್ಬ ಮಹಿಳೆಯಾಗಿ ಇನ್ನೊಬ್ಬ ಮಹಿಳೆಯ ಖಾಸಗಿ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಕಾನೂನು ಉಲ್ಲಂಘನೆಯನ್ನು ಮಾಡಿದ್ದಾರೆ. ರೂಪಾ ಅವರ ವಿರುದ್ಧ ನಾನು ಶೀಘ್ರದಲ್ಲಿಯೇ ಕಾನೂನು ಕ್ರಮ ಕೈಗೊಳ್ಳಲಿದ್ದೇನೆ ಎಂದು ಅವರು ಬರೆದಿದ್ದಾರೆ.

IAS rohini sindhuri request to Media Houses not to use her Private Photo IPS D Roopa san

 

IAS vs IPS Fight:ಡಿಕೆ ರವಿ, ರೋಹಿಣಿ ಸಿಂಧೂರಿ ಪ್ರೇಮ ಸಲ್ಲಾಪ ಸಿಬಿಐ ವರದಿಯಲ್ಲಿದೆ: ಮತ್ತೆ ಕೆದಕಿದ ಡಿ ರೂಪಾ

ಈ ಫೋಟೋಗಳನ್ನ ಮಾಧ್ಯಮಗಳಲ್ಲಿ ಬಳಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ.  ಒಬ್ಬರು ತಮ್ಮ ವೈಯಕ್ತಿಕ ಹಗೆತನಕ್ಕೆ ನನ್ನ ವೈಯಕ್ತಿಕ ಫೋಟೋಗಳನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದನ್ನ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವುದು ಬಹಳ ನೋವಿನ ಸಂಗತಿ.

IAS vs IPS Fight: ರೋಹಿಣಿ ಸಿಂಧೂರಿ-ರೂಪಾ ಮೌದ್ಗಿಲ್‌ ಫೈಟ್‌ಗೆ ಡಿಕೆ ರವಿ ಪತ್ನಿ ಎಂಟ್ರಿ!

ಈ ಹಿನ್ನಲೆಯಲ್ಲಿ, ನನ್ನ ವೈಯಕ್ತಿಕ ಫೋಟೋಗಳನ್ನ ತಮ್ಮ ಮಾಧ್ಯಮಗಳಲ್ಲಿ ಬಳಸದಂತೆ ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ರೋಹಿಣಿ ಸಿಂಧೂರಿಯವರು ಬರೆದಿದ್ದಾರೆ.

 

 

Latest Videos
Follow Us:
Download App:
  • android
  • ios