HD Devegowda: ನನ್ನನ್ನು ಪ್ರಧಾನಿಯಾಗಿಸಿದ ಜಿಲ್ಲೆಯನ್ನು ಎಂದಿಗೂ ಮರೆಯುವುದಿಲ್ಲ

ನನ್ನನ್ನು ಪ್ರಧಾನಿಯಾಗಲು ಆಶೀರ್ವದಿಸಿದ ಹಾಸನ ಜಿಲ್ಲೆಯ ಜನರನ್ನು ನಾನು ಮರೆಯುವಂತಿಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ತಿಳಿಸಿದರು.
 

I will never forget the district that made me Prime Minister says HD Devegowda gvd

ಹಾಸನ (ಮಾ.27): ನನ್ನನ್ನು ಪ್ರಧಾನಿಯಾಗಲು ಆಶೀರ್ವದಿಸಿದ ಹಾಸನ (Hassan) ಜಿಲ್ಲೆಯ ಜನರನ್ನು ನಾನು ಮರೆಯುವಂತಿಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು (HD Devegowda) ತಿಳಿಸಿದರು. ನಗರದ ಎಂ.ಜಿ. ರಸ್ತೆಯ ರಾಮಕೃಷ್ಣ ನರ್ಸಿಂಗ್‌ ಹೋಮ್‌ ಎದುರು ಶನಿವಾರ ಭಗವಾನ್‌ 1008 ಶ್ರೀಪಾಶ್ರ್ವನಾಥಸ್ವಾಮಿ ತೀರ್ಥಂಕರರ ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾ ಕಲ್ಯಾಣ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡುತ್ತಾ, ದೇಶದ ಕಲ್ಯಾಣಕ್ಕಾಗಿ ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕು ಎಂದರು. 

ಜಿಲ್ಲೆಯ ಜನತೆ ಹಿಂದೆ ನನ್ನನ್ನು ಆರಿಸಿ ಪಾರ್ಲಿಮೆಂಟ್‌ಗೆ ಕಳುಹಿಸಿದರು. ನಂತರ ಪ್ರಧಾನಿಯಾಗಿ ಕಳುಹಿಸಿದ್ದು, ನಾನು ನನ್ನ ಅವ​ಧಿಯಲ್ಲಿ ಕಿಂಚಿತ್ತಾದರೂ ಗಮನ ಸೆಳೆಯುವ ಕೆಲಸ ಮಾಡಲು ಅವಕಾಶ ನೀಡಿದ್ದೀರಿ ಎಂದರು. 5 ದಿನದ ಕಾರ್ಯಕ್ರಮದ ಮಧ್ಯೆ ಬರುವುದಾಗಿ ಹೇಳಿದಂತೆ ಇಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ನನಗೆ ಸಂತೋಷ ತಂದಿದೆ. ಭಗವಾನ್‌ 1008 ಶ್ರೀಪಾಶ್ರ್ವನಾಥಸ್ವಾಮಿ ತೀರ್ಥಂಕರರ ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾ ಕಲ್ಯಾಣ ಮಹೋತ್ಸವ ನಡೆಯುತ್ತಿದ್ದು, ಭಾಗವಹಿಸಿ ಆಶೀರ್ವಾದ ಪಡೆದಿದ್ದೇನೆ. ಸಮಾಜಕ್ಕೆ ತೀರ್ಥಂಕರರ ಕೊಡುಗೆ ಅಪಾರವಾಗಿದೆ. ಅವರ ಮಾರ್ಗದರ್ಶನದಲ್ಲಿ ನಾವು ಶಾಂತಿಯಿಂದ ಮುಂದೆ ಸಾಗೋಣ ಎಂದು ಹೇಳಿದರು.

ದೇವೇಗೌಡರ ಪುತ್ರಿ ಒಡೆತನದ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

ಶ್ರವಣಬೆಳಗೊಳದ ಸ್ವಸ್ತ್ರಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿಯವರು ಮಾತನಾಡಿ, ಕೊರೋನಾವು ಇನ್ನೊಂದು ವರ್ಷ ಇರುತ್ತದೆ. ಮುನ್ನೆಚ್ಚರಿಕೆಯಾಗಿ ಮಾಸ್ಕ್‌ ಹಾಕುವುದನ್ನು ಬಿಡಬೇಡಿ ಎಂದು ತಿಳಿಸಿದರು. ಈ ಐದು ದಿನಗಳ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬರುತ್ತಿದ್ದು, ಪ್ರತಿನಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುತ್ತವೆ. ಮನುಷ್ಯನ ಜೀವನದಲ್ಲಿ ಅನ್ನ, ನೀರು ಎಷ್ಟುಮುಖ್ಯವೊ ಧರ್ಮವು ಅಷ್ಟೆಮುಖ್ಯ, ಧರ್ಮವನ್ನು ಮರೆಯಬಾರದು. ದೇವರ ಪೂಜೆ ಮತ್ತು ದಾನ ಎರಡೂ ಮುಖ್ಯ. ಸತ್ಕಾರ್ಯ ನಡೆಸಿ ಜೀವನ ಸಾರ್ಥಕಪಡಿಸಬೇಕಾಗಿದೆ. ಜ್ಞಾನಕ್ಕೆ ಹೆಚ್ವಿನ ಮಹತ್ವ ಕೊಡಬೇಕು. ದುಃಖವು ಹೆಚ್ಚು ಸಮಯ ಇರುವುದಿಲ್ಲ. ಸಂತೋಷ ಬಂದ ಕೂಡಲೇ ಹೊರಟು ಹೋಗುತ್ತದೆ. ನಾವೆಲ್ಲರೂ ಪುಣ್ಯದ ಕೆಲಸ ಮಾಡಿ ಮೋಕ್ಷ ಪಡೆಯಬೇಕು ಎಂದು ಕರೆ ನೀಡಿದರು.

ಪರಮಪೂಜ್ಯ ಮುನಿಶ್ರೀ 108 ಪುಣ್ಯಸಾಗರ ಮಹಾರಾಜರು ಮಾತನಾಡಿ, ಮಾನವ ಧರ್ಮವನ್ನು ಮರೆಯಬಾರದು. ಅನಾದಿ ಕಾಲದಿಂದಲೂ ಕೂಡ ಜೈನ ಧರ್ಮ ಬೆಳೆದು ಬಂದಿದೆ. ಜ್ಞಾನ ಎಂಬುದು ಮನಸ್ಸಿನ ಶುದ್ಧಿಯನ್ನು ಮಾಡಲಿದೆ. ಬದುಕಿನಲ್ಲಿ ಸಲ್ಪವಾದರೂ ಸೇವಾ ಕಾರ್ಯವನ್ನು ಬೆಳೆಸಿಕೊಂಡು ಮೋಕ್ಷವನ್ನು ಪಡೆಯಬಹುದಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುನಿಶ್ರೀ 108 ವೀರಸಾಗರ ಮಹಾರಾಜರು, ಭಾರತೀಯ ಜೈನ ಮಿಲನ್‌ ರಾಷ್ಟ್ರೀಯ ಅಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್‌, ಮಾಧ್ಯಮ ಪ್ರಶಸ್ತಿ ಪುರಸ್ಕೃತರಾದ ಎಸ್‌.ಎನ್‌. ಅಶೋಕ್‌ ಕುಮಾರ್‌, ಐಪಿಎಸ್‌ ಅಧಿಕಾರಿ ಜಿನೇಂದ್ರ ಖನಗಾವಿ, ಡೀನ್‌ ವಾಸುದೇವನ್‌, ಹಾಸನ ಜೈನ ಸಂಘದ ಅಧ್ಯಕ್ಷ ಎಂ. ಅಜಿತ್‌ ಕುಮಾರ್‌ ಇತರರು ಉಪಸ್ಥಿತರಿದ್ದರು.

Karnataka Hijab Verdict ಹಿಜಾಬ್ ತೀರ್ಪಿನ ಬಗ್ಗೆ ದೇವೇಗೌಡ, ಕುಮಾರಸ್ವಾಮಿ ಅಭಿಪ್ರಾಯ

ನಾನೇನು ಮತ್ತೆ ಪ್ರಧಾನಿ ಆಗಬೇಕಿಲ್ಲ: ಬೆಂಗಳೂರಿನಲ್ಲಿರುವ ಜೆಡಿಎಸ್ (JDS) ಮುಖ್ಯ ಕಚೇರಿಯಲ್ಲಿ ಶನಿವಾರ ಮಾಜಿ ಪ್ರಧಾನಿ ದೇವೇಗೌಡ (HD devegowda) ಸುದ್ದಿಗೋಷ್ಠಿ ನಡೆಸಿದ್ದು, ನಾನೇನು ಮತ್ತೆ ಪ್ರಧಾನಿ ಆಗಬೇಕಿಲ್ಲ. ಈ ಪಕ್ಷ ಉಳಿಸಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಸದ್ಯದ ರಾಜಕೀಯ (Politics) ಬೆಳವಣಿಗೆಗಳ ಬಗ್ಗೆ  ಮಾತನಾಡಿರುವ ಹೆಚ್‌ಡಿಡಿ, ಐದು ರಾಜ್ಯಗಳ ಚುನಾವಣಾ ಫಲಿತಾಂಶ ಎಲ್ಲರಿಗೂ ಗೊತ್ತಿದೆ. ನಮ್ಮದು ಪ್ರಾದೇಶಿಕ ಪಕ್ಷ , ಉಳಿಸಿ ಕೊಳ್ಳಬೇಕಾದ ಅನಿವಾರ್ಯತೆ ಇದೆ. ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಕಾಂಗ್ರೆಸ್ (Congress), ಅದನ್ನು ಹೀಯಾಳಿಸಲು ಈ ಸುದ್ದಿಗೋಷ್ಟಿ ಕರೆದಿಲ್ಲ.  ಬಿಜೆಪಿ (BJP) ಮೊದಲ ಬಾರಿಗೆ ಮೋದಿ ನೇತೃತ್ವದಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಇಲ್ಲಿವರೆಗೂ ಆ ಸರ್ಕಾರವನ್ನು ಏನೂ ಮಾಡಲು ಆಗಲಿಲ್ಲ ಎಂಬುವುದು ವಾಸ್ತವ ಎಂದಿದ್ದಾರೆ.

Latest Videos
Follow Us:
Download App:
  • android
  • ios