ಮಂಡ್ಯ :  ನಾನು ನನ್ನ ಗಂಡನ ಆಸೆ ಈಡೇರಿಸಬೇಕು. ನಾನು ಸೇನೆಗೆ ಸೇರಿ ದೇಶ ಸೇವೆ ಮಾಡಬೇಕು ಎನ್ನುವುದು ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಗುರು ಅವರ ಪತ್ನಿ ಕಲಾವತಿಯ ಮನದಾಳದ ಮಾತಿದು. 

ಹುತಾತ್ಮ ಯೋಧರ ಕುಟುಂಬಗಳ ನೆರವಿಗೆ ಬಂದ ಇನ್ಫೋಸಿಸ್​ ಫೌಂಡೇಶನ್

ಸುವರ್ಣ ನ್ಯೂಸ್.ಕಾಂ ಬಳಿ ಮಾತನಾಡಿದ ಹುತಾತ್ಮ ಯೋಧ ಗುರು ಪತ್ನಿ ಕಲಾವತಿ ನನ್ನನ್ನು ನನ್ನ ಗಂಡನೇ ಇಷ್ಟ ಪಟ್ಟು ಓದಲು ಸೇರಿಸಿದ್ದರು.  ನೀನು ಏನು ಓದುತ್ತೀಯಾ, ಓದು. ನಾನು ಓದಿಸುತ್ತೇನೆ ಎಂದು ಹೇಳುತ್ತಿದ್ದರು. ಇನ್ನು ವರ್ಷ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತೇನೆ ಎಂದೂ ತಮ್ಮ ಬಳಿ ಹೇಳಿಕೊಂಡಿದ್ದರು ಎಂದು ಕಲಾವತಿ ಹೇಳಿದರು. 

ಈಗ ನನಗೆ ಅವರ ಆಸೆ ಪೂರೈಸಬೇಕು ಎನ್ನಿಸುತ್ತಿದೆ. ಅವರ ಆಸೆ ಪೂರೈಸುವ ಸಲುವಾಗಿ ನಾನು ಸೈನ್ಯಕ್ಕೆ ಸೇರುತ್ತೇನೆ.  ಇನ್ನು ಹತ್ತು ವರ್ಷ ಯಾರೇ ಏನೇ ಹೇಳಿದರೂ ನಾನು ಸೈನ್ಯದಲ್ಲಿ ಸೇವೆ ಸಲ್ಲಿಸುತ್ತೇನೆ ಎಂದು ಭಾವುಕರಾಗಿ ನುಡಿದಿದ್ದಾರೆ. 

ಪುಲ್ವಾಮ ದಾಳಿ : ಸೇನೆಯನ್ನೇ ಹೊಣೆ ಮಾಡಿದ ಮಾಜಿ ಕಾಂಗ್ರೆಸ್ ಸಂಸದೆ

ಇನ್ನು ಹಲವೆಡೆ ಯೋಧರ ಮೇಲಿನ ದಾಳಿಯನ್ನು ಸಂಭ್ರಮಿಸುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಕಲಾವತಿ, ಅಂತವರು ತಮ್ಮ ಮನಃಸಾಕ್ಷಿಯನ್ನೇ ಪ್ರಶ್ನೆ ಮಾಡಿಕೊಳ್ಳಲಿ. ತಾವು ಮಾಡುತ್ತಿರುವುದು ಎಷ್ಟು ಸರಿ ಎನ್ನುವುದು ಅರಿವಿಗೆ ಬರುತ್ತದೆ ಎಂದು ಹೇಳಿದ್ದಾರೆ.