Asianet Suvarna News Asianet Suvarna News

ಗಣಿಗಾರಿಕೆಯಿಂದ KRSಗೂ ಕಾದಿದೆ ಮಹಾ ಆಪತ್ತು : ಸಿಎಂ ಖಡಕ್ ಸೂಚನೆ

ಅಕ್ರಮವಾಗಿ ನಡೆಯುವ ಗಣಿಗಾರಿಕೆಯಿಂದ ಹಲವು ತೊಂದರೆಗಳಾಗುತ್ತಿದೆ. ಅಕ್ರಮವಾಗಿ ನಡೆಯುವ ಎಲ್ಲಾ ಗಣಿಗಾರಿಕೆ ವಿರುದ್ಧ ಕಠಿಣ ಕ್ರ ಕೈಗೊಳ್ಳಬೇಕು ಎಂದು ಸಿಎಂ ಹೇಳಿದ್ದಾರೆ. 

CM BS Yediyurappa Warning About illegal Mining snr
Author
Bengaluru, First Published Jan 24, 2021, 10:44 AM IST

 ಶಿವಮೊಗ್ಗ(ಜ.24):  ಅನೇಕ ಕಡೆ ಆಕ್ರಮ ಗಣಿಗಾರಿಕೆ ನಡೆಯುತ್ತಿದ್ದು ತಕ್ಷಣವೇ ಅಕ್ರಮ ಗಣಿಗಾರಿಕೆ ನಿಲ್ಲಿಸುವಂತೆ ಜಿಲ್ಲಾಧಿಕಾರಿ ಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಸಿಎಂ ಅಕ್ರಮ ಗಣಿಗಾರಿಕೆ ನಡೆಸುವವರು ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಯಾವುದೇ ತೊಂದರೆ ಇಲ್ಲ ಎಂದು ವರದಿ ನೀಡಿದರೇ ಅನುಮತಿ ನೀಡೋಣ.  ಪರವಾನಗಿ ಇಲ್ಲದೆ ಆಕ್ರಮ ಗಣಿಗಾರಿಕೆ ಮಾಡುವವರು ತಕ್ಷಣವೇ ನಿಲ್ಲಿಸ ಬೇಕು.  ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದೆಲ್ಲೆಡೆ ಈ ಸಮಸ್ಯೆ ಇದೆ ಎಂದರು.

ಶಿವಮೊಗ್ಗ : ಲಾರಿ ಚಾಲಕನ ಎಡವಟ್ಟಿಂದ ಸ್ಫೋಟ? .

ಇನ್ನು ಮಂಡ್ಯದ ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆ ಆರ್ ಎಸ್ ಗೆ ಅಪಾಯ ಇದೆ. ಅದರಿಂದ ತಕ್ಷಣವೇ ಅಲ್ಲಿ ಗಣಿಗಾರಿಕೆ ನಿಲ್ಲಿಸಲು ಸೂಚನೆ ನೀಡಿದ್ದೇನೆ.  ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು ಅಗತ್ಯ ಜಲ್ಲಿ ಪೂರೈಕೆ ಮಾಡಬೇಕು ಆದರೆ ಆಕ್ರಮ ಗಣಿಗಾರಿಕೆ ಮೂಲಕ ಮಾತ್ರ ಅಲ್ಲ.  ಬೋವಿ ಸಮಾಜದವರು ಕಲ್ಲು, ಜಲ್ಲಿ ಸುತ್ತಿಗೆಯಿಂದ ಹೊಡೆದು ಕೆಲಸ ಮಾಡುತ್ತಾರೆ ಅವರಿಗೆ ಯಾವುದೇ ತೊಂದರೆ ಆಗಬಾರದು ಎಂದು ಸಿಎಂ ಹೇಳಿದರು. 

ನಾನು ಅಕ್ರಮ ಗಣಿಗಾರಿಕೆ ಮಾಡುತ್ತಿರುವವರನ್ನು ಸಕ್ರಮ ಮಾಡಿ ಎಂದು ಹೇಳಿಲ್ಲ. ಕೆಲವು ಕಡೆ ಹೇಳಿಕೆ ಅಪಾರ್ಥ ಮಾಡಲಾಗಿದೆ. ಅಕ್ರಮ ಗಣಿಗಾರಿಕೆ ನಡೆಸುವವರು ಅರ್ಜಿ ಸಲ್ಲಿಸಬೇಕು ಕಾನೂನಿನ ಚೌಕಟ್ಟಿನಲ್ಲಿ ಅವಕಾಶ ಇದ್ದರೆ ಮಾತ್ರ ಅನುಮತಿ ನೀಡಬೇಕು ಎಂದು ಹೇಳಿದ್ದಾಗಿ ಸಿಎಂ ಹೇಳಿದರು.
 
ಅಕ್ರಮ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟರೆ ಆಯಾ ಅಧಿಕಾರಿಗಳೇ ಜವಾಬ್ದಾರಿ ಆಗುತ್ತಾರೆ ಎಂದು ಸಿಎಂ ಯಡಿಯೂರಪ್ಪ ಈ ವೇಳೆ ಎಚ್ಚರಿಕೆ ನೀಡಿದರು.

ಪ್ರಶ್ನೆ ಪತ್ರಿಕೆ ಲೀಕ್ :   ಎಫ್ ಡಿಎ ಪ್ರಶ್ನೆ ಪತ್ರಿಕೆ ಲೀಕ್ ಸಂಬಂಧಿಸಿದಂತೆ ಅಧಿಕಾರಿಗಳ ಅಮಾನತು ಮಾಡಲಾಗಿದೆ.  ಬೆಂಗಳೂರು ನಲ್ಲಿ ಈ ಕುರಿತು ಅಧಿಕಾರಿಗಳ ಜೊತೆಗೆ ಚರ್ಚಿಸಿ ಇಂತಹ ಅಕ್ಷಮ್ಯ ಕೃತ್ಯದಲ್ಲಿ ತೊಡಗಿದವರನ್ನು ಅಮಾನತು ಅಷ್ಟೇ ಅಲ್ಲ ವಜಾ ಕೂಡ ಮಾಡುತ್ತೇವೆ ಎಂದರು.

ಇನ್ನು ರೈತರ ಹೋರಾಟದ ಬಗ್ಗೆಯೂ ಮಾತನಾಡಿದ ಸಿಎಂ ಇದಕ್ಕೆ ನನ್ನ ಅಭ್ಯಂತರವಿಲ್ಲ, ಬಿಜೆಪಿ ಸರ್ಕಾರ ರೈತರ ಪರ ಇದೆ. ಅಪಾರ್ಥ ಮಾಡಿಕೊಂಡು ಹೋರಾಟ ಮಾಡಬೇಡಿ ಎಂದರು.

ಹುಣಸೋಡು ಸ್ಫೋಟ ಪ್ರಕರಣ ದಲ್ಲಿ ಆರು ಸಾವಾಗಿದೆ . ಕೆಲವರ ಬಂಧನವಾಗಿದೆ. ತಲಾ ಐದು ಲಕ್ಷ ಪರಿಹಾರ ನೀಡಿದ್ದೇವೆ ಎಂದು ಸಿಎಂ ಈ ವೇಳೆ ಹೇಳಿದರು.

Follow Us:
Download App:
  • android
  • ios