Asianet Suvarna News Asianet Suvarna News

Haveri: ಸಿಎಂ ಕ್ಷೇತ್ರದಲ್ಲಿ ಕಂದಾಯ ಸಚಿವರ ಗ್ರಾಮ ವಾಸ್ತವ್ಯಕ್ಕೆ ಭರ್ಜರಿ ರೆಸ್ಪಾನ್ಸ್

ಸಿಎಂ ಬಸವರಾಜ್ ಬೊಮ್ಮಾಯಿಯವರ ತವರು ಕ್ಷೇತ್ರ ಶಿಗ್ಗಾವಿ ತಾಲೂಕು ಬಾಡ ಗ್ರಾಮದಲ್ಲಿ ಕಂದಾಯ ಸಚಿವ ಅಶೋಕ್ ಗ್ರಾಮ ವಾಸ್ತವ್ಯ ಅಂತ್ಯವಾಗಿದೆ. 

Huge response to revenue minister village stay in CM Basavaraj Bommai constituency in Haveri gow
Author
First Published Dec 18, 2022, 7:52 PM IST

ವರದಿ: ಪವನ್ ಕುಮಾರ್ , ಏಷ್ಯಾನೆಟ್ ಸುವರ್ಣ ನ್ಯೂಸ್ 

ಹಾವೇರಿ (ಡಿ.18): ಸಿಎಂ ಬಸವರಾಜ್ ಬೊಮ್ಮಾಯಿಯವರ ತವರು ಕ್ಷೇತ್ರ ಶಿಗ್ಗಾವಿ ತಾಲೂಕು ಬಾಡ ಗ್ರಾಮದಲ್ಲಿ ಕಂದಾಯ ಸಚಿವ ಅಶೋಕ್ ಗ್ರಾಮ ವಾಸ್ತವ್ಯ ಅಂತ್ಯವಾಗಿದೆ. ಇಂದು ಬೆಳಿಗ್ಗೆ ಬಾಡದ ಅಟಲ್ ಬಿಹಾರಿ ವಾಜಪೇಯಿ ಶಾಲೆಯಲ್ಲಿ ಬೆಳಗಿನ ವಿಹಾರ ಮುಗಿಸಿದ ಸಚಿವ ಅಶೋಕ್ ಬಳಿಕ ದಲಿತರ ಮನೆಯಲ್ಲಿ ಉಪಹಾರ ಸೇವನೆ ಮಾಡಿದ್ರು. ಬಾಡ ಗ್ರಾಮದ ಫಕ್ಕೀರಪ್ಪ ಯಲ್ಲಪ್ಪ ಹರಿಜನ ಅವರ ಮನೆಗೆ ಉಪಹಾರ ಸೇವನೆಗೆ ಬಂದ ಆರ್ ಅಶೋಕ್, ಬಿಸಿ ಬಿಸಿ ರೊಟ್ಟಿ, ಚಟ್ನಿ, ಕಾಳು ಪಲ್ಯ, ಸೌತೇ ಕಾಯಿ, ಗಜ್ಜರಿ, ಸೇವಿಸಿದರು. ಇನ್ನು, ಉಪಹಾರ ಸೇವನೆಗೆ ಆಗಮಿಸಿದ ಸಚಿವ ಆರ್. ಅಶೋಕ್ ಕೈಗೆ ಕಂಕಣ ಕಟ್ಟಿ ಆರತಿ ಬೆಳಗಿ ಮನೆಯೊಳಗೆ ಕುಟುಂಬಸ್ಥರು ಬರಮಾಡಿಕೊಂಡರು. ಈ ವೇಳೆ ಸಚಿವ ಅಶೋಕ, ಆರತಿ ಬೆಳಗಿದ ಮಹಿಳೆಯರಿಗೆ 2,000 ರೂಪಾಯಿಯನ್ನು ಆರತಿ ತಟ್ಟೆಗೆ ಹಾಕಿದರು.

ಶಿಗ್ಗಾಂವಿ: ಸಿಎಂ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ 50 ಸಾವಿರ ಜನ..!

ಇದೇ ವೇಳೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ, “ಫಕ್ಕೀರಪ್ಪ ಪವಿತ್ರಾ ಮನೆಯಲ್ಲಿ ಉಪಾಹಾರ ಸೇವನೆ ಮಾಡಿದ್ದೇನೆ. ಜೋಳದ ರೊಟ್ಟಿ, ಚಟ್ನಿ, ತಿನ್ನೋದು ಹೊಸದು, ಬೆಂಗಳೂರಿನಲ್ಲಿ ದೋಸೆ ಇಡ್ಲಿ ತಿನ್ನುತ್ತಿದ್ವಿ, ಅದರೆ ಜೋಳದ ರೊಟ್ಟಿ ಹೊಸದು. ಕನಕದಾಸರ ಜನ್ಮಸ್ಥಳಕ್ಕೆ ಬಂದಿದ್ದೇನೆ. ಜಾತಿ ಮೇಲು ಕೀಳು ಭಾವನೆ ತೆಗೆದು ಹಾಕಬೇಕು. ಎಲ್ಲರೂ ಮುಖ್ಯವಾಹಿನಿಗೆ ಬರಬೇಕು. ದಲಿತರ ಮನೆಯಲ್ಲಿ ಏನು ಮಾಡಿದ್ದಾರೊ ಅದನ್ನೇ ಉಪಹಾರ ಮಾಡಿದ್ದೇನೆ’’ ಎಂದರು.

Haveri: ತೇನ್‌ಸಿಂಗ್‌ ಕತೆ ಹೇಳಿ ಮಕ್ಕಳಿಗೆ ದೃಢಸಂಕಲ್ಪದ ಪಾಠ ಮಾಡಿದ ಸಿಎಂ ಬೊಮ್ಮಾಯಿ

“ಜನರಿಗೋಸ್ಕರ ಗ್ರಾಮ ವ್ಯಾಸ್ತವ್ಯ ಕಾರ್ಯಕ್ರಮ ಮಾಡಿದ್ದೆನೆ. ಜಮೀನು ಖಾತಾ ಪೋತಿ ಖಾತೆ ಯೋಜನೆ ಮಾಡಿದ್ದೇನೆ. ಬೊಮ್ಮಾಯಿ ಅವರು ಸಹ ಈ ಕ್ಷೇತ್ರದಲ್ಲಿ ಜನರ ಪ್ರೀತಿ ನೋಡಿ ಸಿ.ಎಂ. ಕಣ್ಣೀರು ಹಾಕಿದ್ದು ನೋಡಿದರೆ ಅವರು ಜನರ ಮೇಲೆ ಅಭಿಮಾನ ಇಟ್ಟಿದ್ದಾರೆ ಎಂದರ್ಥ. ಎಸ್ಸಿ, ಎಸ್ಟಿ ಭೂಮಿ ಖರೀದಿಗೆ ಅವಕಾಶ ನೀಡಲಾಗಿದೆ‌. ಗ್ರಾಮ ವಾಸ್ತವ್ಯದಿಂದ ಸಾಕಷ್ಟು ಕಲಿಯುತ್ತಿದ್ದೇನೆ. ಬಡವರಪರವಾಗಿ ಕೆಲಸ ಮಾಡುತ್ತೇನೆ’’ ಎಂದರು. ಬಳಿಕ ಬಾಡ ಗ್ರಾಮದಲ್ಲಿ ಪೌತಿ ಖಾತೆ ಆಂದೋಲನ ನಡೆಸಿ ಬಾಡ ಗ್ರಾಮದಿಂದ ನಿರ್ಗಮಿಸಿದರು.ನಾಳೆ ಅಧಿವೇಶನದ ಹಿನ್ನೆಲೆಯಲ್ಲಿ ಬೆಳಗಾವಿಗೆ ತೆರಳಿದರು.

Follow Us:
Download App:
  • android
  • ios