9 ತಿಂಗಳಲ್ಲಿ ಮದ್ಯ ಮಾರಾಟದಲ್ಲಿ ಭಾರೀ ಕುಸಿತ!
2023ರ ಡಿಸೆಂಬರ್ ತಿಂಗಳಿನಲ್ಲಿ 30ನೇ ತಾರೀಖುವರೆಗೂ 61.27 ಲಕ್ಷ ಬಾಕ್ಸ್ ಮದ್ಯ, 39.81 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದ್ದರೆ 2024 ರಲ್ಲಿ 56.35 ಲಕ್ಷ ಬಾಕ್ಸ್ ಮದ್ಯ, 34.49 ಲಕ್ಷ ಬಾಕ್ಸ್ ಬಿಯರ್ ಏರ್ ಮಾತ್ರ ಮಾರಾಟವಾಗಿದೆ.
ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು(ಜ.01): 2023ಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನ ಕಳೆದ 9 ತಿಂಗಳಲ್ಲಿ ಮದ್ಯ ಮಾರಾಟದಲ್ಲಿ ಭಾರೀ ಕುಸಿತ ಕಂಡುಬಂದಿದೆ. ಐಎಂಎಲ್ ಮದ್ಯ ಮತ್ತು ಬಿಯರ್ ಮಾರಾಟದಲ್ಲೂ ಇಳಿಕೆಯಾಗಿರುವುದು ವಿಶೇಷ.
2023 ರ ಏಪ್ರಿಲ್ 1 ರಿಂದ ಡಿಸೆಂಬರ್ 30 ರವರೆಗೂ ವಿಸ್ಕಿ, ಬ್ರಾಂಡಿ ಸೇರಿ 705 ಲಕ್ಷ ಬಾಕ್ಸ್ ಐಎಂಎಲ್ ಮದ್ಯ (ಒಂದು ಬಾಕ್ಸ್‌ಗೆ 8.64 ಲೀಟರ್) ಮತ್ತು 444 ಲಕ್ಷ ಬಾಕ್ಸ್ ಬಿಯರ್ (1 ಬಾಕ್ಸ್‌ಗೆ 7.8 ಲೀಟರ್) ಮಾರಾಟವಾಗಿದೆ. ಪ್ರಸಕ್ತ ಸಾಲಿನ ಇದೇ ಅವಧಿಯಲ್ಲಿ 522 ಲಕ್ಷ ಬಾಕ್ಸ್ ಐಎಂಎಲ್ ಮದ್ಯ, 347 ಲಕ್ಷ ಬಾಕ್ಸ್ ಬಿಯರ್ ಮಾತ್ರ ಮಾರಾಟವಾಗಿದ್ದು, ಭಾರೀ ಕುಸಿತ ಕಂಡಿದೆ. ಇದಷ್ಟೇ ಅಲ್ಲ, 2023ರ ಡಿಸೆಂಬರ್‌ಗೆ ಹೋಲಿಸಿದರೂ ಪ್ರಸಕ್ತ ಡಿಸೆಂಬರ್ ತಿಂಗಳಿನಲ್ಲೂ ಮದ್ಯ ಮಾರಾಟ ಇಳಿಕೆಯಾಗಿದೆ.
3 ಮದ್ಯದ ಬಾಟಲ್ ಖರೀದಿಸಿದ್ರೆ 1 ಫ್ರೀ, ಹೊಸ ವರ್ಷದ ಆಫರ್: ಯಾರಿಗುಂಟು ಯಾರಿಗಿಲ್ಲ!
2023ರ ಡಿಸೆಂಬರ್ ತಿಂಗಳಿನಲ್ಲಿ 30ನೇ ತಾರೀಖುವರೆಗೂ 61.27 ಲಕ್ಷ ಬಾಕ್ಸ್ ಮದ್ಯ, 39.81 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದ್ದರೆ 2024 ರಲ್ಲಿ 56.35 ಲಕ್ಷ ಬಾಕ್ಸ್ ಮದ್ಯ, 34.49 ಲಕ್ಷ ಬಾಕ್ಸ್ ಬಿಯರ್ ಏರ್ ಮಾತ್ರ ಮಾರಾಟವಾಗಿದೆ.
ರಾಜಸ್ವದ 'ಕಿಕ್' ಕಡಿಮೆಯಿಲ್ಲ:
ಮದ್ಯ ಮಾರಾಟ ಕಡಿಮೆಯಾದರೂ ಅಬಕಾರಿ ಇಲಾಖೆಯ ರಾಜಸ್ವ ಸಂಗ್ರಹದಲ್ಲಿ ಮಾತ್ರ ಇಳಿಕೆಯಾಗಿಲ್ಲ. 2023ರ ಏಪ್ರಿಲ್ 1 ರಿಂದ ಡಿಸೆಂಬರ್ 30 ರವರೆಗೂ ಅಬಕಾರಿ ಇಲಾಖೆಗೆ 25,168 ಕೋಟಿ ರು. ರಾಜಸ್ವ ಸಂಗ್ರಹವಾಗಿದ್ದರೆ 2024ರ ಇದೇ ಅವಧಿಯಲ್ಲಿ 26,406 ಕೋಟಿ ರು. ರಾಜಸ್ವ ಸಂಗ್ರಹವಾಗಿದೆ. ಮದ್ಯ ಮಾರಾಟ ಕಡಿಮೆಯಾದರೂ ರಾಜಸ್ವಕ್ಕೆ ಏಕೆ ಕೊರತೆಯಾಗಿಲ್ಲ ಎಂದರೆ, ಇತ್ತೀಚೆಗೆ ಕಡಿಮೆ ಬೆಲೆಯ ಮದ್ಯದ ದರಗಳನ್ನು ಹೆಚ್ಚಳ ಮಾಡಲಾಗಿತ್ತು.
ಪ್ರೀಮಿಯಂ, ಸೆಮಿ ಪ್ರೀಮಿಯಂನಂಥ ದುಬಾರಿ ದರದ ಮದ್ಯಗಳಿಗಿಂತ ಕಡಿಮೆ ಬೆಲೆಯ ಮದ್ಯದ ಬ್ರಾಂಡ್ ಗಳೇ ರಾಜ್ಯದಲ್ಲಿ ಹೆಚ್ಚಾಗಿ ಮಾರಾಟ ಆಗುವುದು. ಆದ್ದರಿಂದ ಇದು ರಾಜಸ್ವಕ್ಕೆ 'ಕಿಕ್' ನೀಡಿದೆ.
ಹೊಸ ವರ್ಷಕ್ಕೆ ಬರ್ತಿದೆ ನಕಲಿ ಮದ್ಯ: ಕುಡಿದವರ ಕರುಳು ಸುಡುತ್ತೆ!
ವ್ಯಾಪಾರಿಗಳಿಂದ ಒಂದೇ ದಿನ 408 ಕೋಟಿ ಮದ್ಯ ಖರೀದಿ!
ಬೆಂಗಳೂರು: ಕರ್ನಾಟಕ ರಾಜ್ಯ ಪಾನೀಯ ನಿಗಮದಿಂದ ಶನಿವಾರ ಮದ್ಯ ಮಾರಾಟಗಾರರು ₹408. 08 ಕೋಟಿ ಮೊತ್ತದ ಮದ್ಯ ಖರೀದಿಸಿದ್ದು, ಒಂದೇ ದಿನದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಖರೀದಿಸಿರುವುದು ದಾಖಲೆಯಾಗಿದೆ. ₹327.50 ಕೋಟಿ ಮೊತ್ತದ 6.22 ಲಕ್ಷ ಬಾಕ್ಸ್ ಮದ್ಯ ಮತ್ತು ₹80.58 ಕೋಟಿ ಮೊತ್ತದ 4.04 ಲಕ್ಷ ಬಾಕ್ಸ್ ಬಿಯರ್ ಸೇರಿದಂತೆ ಒಟ್ಟಾರೆ ₹408.08 ಕೋಟಿ ಮೊತ್ತದ ಮದ್ಯವನ್ನು ನಿಗಮದಿಂದ ಖರೀದಿಸಿದ್ದು, ಇದು ದಾಖಲೆಯ ಖರೀದಿಯಾಗಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ್ ಹೆಗ್ಡೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದಿಂದಾಗಿ ಡಿ.27 ರಂದು ರಜೆ ಘೋಷಿಸಲಾಗಿದ್ದು, ನಿಗಮದಿಂದ ಮದ್ಯ ಖರೀದಿ ಮಾಡಲು ಸಾಧ್ಯವಾಗಿರಲಿಲ್ಲ. ಡಿ.28ರಂದು ನಾಲ್ಕನೇ ಶನಿವಾರ ರಜಾ ದಿನವಾದರೂ ಒಕ್ಕೂಟದ ಮನವಿ ಮೇರೆಗೆ ಡಿಪೋಗಳನ್ನು ತೆಗೆಯಲಾಗಿತ್ತು. ಅಷ್ಟೇ ಅಲ್ಲ. ಸನ್ನದುದಾರರರಿಗೆ ₹150 ಕೋಟಿ ರುಪಾಯಿಗೂ ಅಧಿಕ ಸಾಲ ಸೌಲಭ್ಯವನ್ನೂ ನೀಡಿದ್ದಾರೆ. ಇದಕ್ಕಾಗಿ ನಿಗಮ ಮತ್ತು ಅಬಕಾರಿ ಇಲಾಖೆಗೆ ಧನ್ಯವಾದ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.