ಮಹಿಳೆಯೊಬ್ಬರು ಬುಧ​ವಾರ ತ್ರಿವಳಿ ಗಂಡು ಮಕ್ಕಳಿಗೆ ಜನ್ಮ ನೀಡಿರುವ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

ಹುಬ್ಬಳ್ಳಿ : ನಗರದ ಕಿಮ್ಸ್‌ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಬುಧ​ವಾರ ತ್ರಿವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಉಣಕಲ್‌ ಗ್ರಾಮದ ವರ್ಷಿಣಿ (22) ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದವರು. ವರ್ಷಿಣಿ ಆರೋಗ್ಯದಿಂದ ಇದ್ದು, ಮೂರು ಮಕ್ಕಳ ಪೈಕಿ ತೂಕ ಕಡಿಮೆಯಿರುವ ಕಾರಣ ಒಂದು ಮಗುವನ್ನು ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ.

ಕಿಮ್ಸ್‌ನ ಡಾ. ಶ್ಯಾಮಸುಂದರ, ಡಾ. ನಿಖಿತಾ, ಡಾ. ವೀಣಾ ಅವರು ವರ್ಷಿಣಿ ಅವರಿಗೆ ಹೆರಿಗೆ ಮಾಡಿಸಿದ ವೈದ್ಯರಾಗಿದ್ದಾರೆ.