Asianet Suvarna News Asianet Suvarna News

ದೈಹಿಕ ಅಂತರ ಕಾಪಾಡುತ್ತೆ ‘ಡಿಸ್ಟೋಸಿಟ್‌’ ಉಪಕರಣ!

ದೈಹಿಕ ಅಂತರ ಕಾಪಾಡುತ್ತೆ  ‘ಡಿಸ್ಟೋಸಿಟ್‌’ ಉಪಕರಣ| ಮೀಟರ್‌ ದೂರ ಯಾರೇ ಬಂದರೂ ಅಲರ್ಟ್‌

Hubballi Techie Invents disposit machine which alerts the people
Author
Bangalore, First Published Jul 27, 2020, 8:14 AM IST

ಹುಬ್ಬಳ್ಳಿ(ಜು.27): ದೈಹಿಕ ಅಂತರ ಕಾಪಾಡಿಕೊಳ್ಳುವ ದೃಷ್ಟಿಯಿಂದ ಹುಬ್ಬಳ್ಳಿಯ ಟೆಕ್ಕಿಯೊಬ್ಬರು ‘ಡಿಸ್ಟೋಸಿಟ್‌’ ಎಂಬ ಉಪಕರಣವನ್ನು ರೂಪಿಸಿದ್ದಾರೆ! ಒಂದು ಮೀಟರ್‌ ಅಂತರಕ್ಕಿಂತಲೂ ಸಮೀಪ ಬಂದು ಕುಳಿತರೆ ಇದು ಶಬ್ದ ಮಾಡುವ ಮೂಲಕ ಎಚ್ಚರಿಸುತ್ತದೆ.

ಇಂಜಿನಿಯರ್‌ ಆಗಿರುವ ಶ್ರೀರಾಮ ಕಲಬುರ್ಗಿ ‘ಡಿಸ್ಟೋಸಿಟ್‌’ ರೂಪಿಸಿದವರು. ಕೊರೋನಾ ಹರಡುವಿಕೆಯನ್ನು ತಡೆಗಟ್ಟಲು ಈ ಉಪಕರಣವನ್ನು ಇವರು ನಿರ್ಮಿಸಿದ್ದಾರೆ. ಇಂತಹ ಉಪಕರಣ ಈ ಮೊದಲು ಎಲ್ಲಿಯೂ ರೂಪಿಸಲಾಗಿಲ್ಲ ಎನ್ನುತ್ತಾರೆ. ದೈಹಿಕ ಅಂತರವನ್ನು ಕಾಪಾಡಿಕೊಳ್ಳಲು ಈ ಉಪಕರಣ ಸಹಕಾರಿಯಾಗಿದ್ದು, ವೈರಸ್‌ ನಮಗೆ ತಗುಲದಂತೆ ಕಾಪಾಡುತ್ತದೆ. ಸಾರ್ವಜನಿಕ ಪ್ರದೇಶಗಳಲ್ಲಿ ಇದನ್ನು ಅಳವಡಿಸಿದಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ.

ಕೇರಳದಲ್ಲಿ ಮಾಸ್ಕ್‌, ಸಾಮಾಜಿಕ ಅಂತರ ಇನ್ನೂ 1 ವರ್ಷ ಕಡ್ಡಾಯ!

ಮೈಕ್ರೋ ಕಂಟ್ರೋಲರ್‌, ಹಸಿರು-ಕೆಂಪು ದೀಪ ಮತ್ತು ಶಬ್ದ ಹೊರಸೂಸುವ ಉಪಕರಣ ಬಳಸಿ ತಯಾರಿಸಲಾಗಿದೆ. ಒಂದು ಮೀಟರ್‌ ಅಂತರದೊಳಗೆ ಯಾರಾದರೂ ಬಂದರೆ ಕೆಂಪು ದೀಪ ಬೆಳಗಿ ಶಬ್ದವಾಗುತ್ತದೆ. ಒಂದು ಮೀಟರ್‌ ಅಂತರದಾಚೆ ಇದ್ದರೆ ಹಸಿರು ದೀಪಗಳು ಕುಳಿತುಕೊಳ್ಳುವ ಅವಕಾಶ ತೋರಿಸುತ್ತವೆ. ಇದನ್ನು ಯಾವುದೇ ಆಸನಗಳಲ್ಲಿ ಅಳವಡಿಕೆ ಮಾಡಬಹುದು. ಅಳವಡಿಕೆಗೆ .40 ವೆಚ್ಚ ಆಗಲಿದೆ. ನಾವು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡಲಿದ್ದು ಇದರಿಂದಾಗಿ ಕಡಿಮೆ ವೆಚ್ಚದಲ್ಲಿ ಜನತೆಗೆ ಇದು ದೊರೆಯಲಿದೆ ಎಂದು ಶ್ರೀರಾಮ ಕಲಬುರ್ಗಿ ಹೇಳಿದ್ದಾರೆ.

Follow Us:
Download App:
  • android
  • ios