ಬೆಂಗಳೂರು, (ಜ.04): ಹುಡುಗಿಯರು ಮದುವೆಯಾದ ಮೇಲೆ ವಿಳಾಸ ಬದಲಾಗುವುದು ಸಹಜ. ಹೊಸ ವಿಳಾಸವು ಮತದಾರರ ಪಟ್ಟಿಯಲ್ಲಿ ಬರುವುದು ಸಹಜವಾಗಲಿ. ನಿಮ್ಮ ವಿಳಾಸವು ಒಂದು ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ಬದಲಾಗಿದ್ದಲ್ಲಿ ಈ ಕೂಡಲೇ ಮತದಾರರ ಪಟ್ಟಿಯಲ್ಲಿ ತಿದ್ದುಪಡಿ ಮಾಡಿಕೊಳ್ಳಿ .

ಅಷ್ಟೇ  ಅಲ್ಲದೇ ಹುಟ್ಟೂರು ಬೇರೆಯಾದರೂ ಕೆಲಸದ ಮೇಲೆ ನೀವು ಬೇರೆಯೂರಿನಲ್ಲಿ ವಾಸವಾಗಿದ್ದಲ್ಲಿ ನಿಮ್ಮ ವಾಸಸ್ಥಳಕ್ಕೆ ನಿಮ್ಮ ಮತದಾರರ ಚೀಟಿ ಮಾಡಿಸುವುದು ಬಹಳ ಸುಲಭ. 

Form 7 ಬಳಸಿ ಹಳೆ ಮತದಾರ ಚೀಟಿಯನ್ನು ಅಳಿಸಿ. ನಂತರ Form 6 ಬಳಸಿ ಹೊಸ ವಿಳಾಸಕ್ಕೆ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ.

ಕೊನೆಯ ದಿನಾಂಕ 15 ಜನವರಿ 2020. nvsp.in ಅಥವಾ Voter Helpline App ಮೂಲಕ ನೋಂದಣಿ ಮಾಡಬಹುದು

ಯುವ ಮತದಾರರಿಗೆ ಸದವಕಾಶ
ಜನತಂತ್ರಗಳ ಚುನಾವಣೆಗಳಲ್ಲಿ ಮತದಾನ ಪ್ರಮುಖ ಅಂಗ. ಮತದಾನ ಮಾಡುವುದು ಪ್ರತಿಯೊಬ್ಬ ಭಾರತೀಯರ ಹಕ್ಕು ಮತ್ತು ಕರ್ತವ್ಯ. ಮತದಾನ ಮಾಡಲು ಭಾರತೀಯ ಪ್ರಜೆ ಕನಿಷ್ಠ 18 ವಯಸ್ಸಿಗಿರಬೇಕು. 

18 ವರ್ಷದವರಾಗಿದ್ದು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ವಾ? ಈ ಕೂಡಲೇ ಕಳಗೆ ತಿಳಿಸಿರುವ ದಾಖಲೆಗಳೊಂದಿಗೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ನೊಂದಾಯಿಸಿಕೊಳ್ಳಿ.

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಚುನಾವಣಾ ಆಯೋಗವು ನಿಮಗೋಸ್ಕರ  'ಮಿಂಚಿನ ನೋಂದಣಿ' ಆಯೋಜಿಸಿದೆ.

ಈ ಹಿನ್ನೆಲೆಯಲ್ಲಿ ಕೂಡಲೇ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ. 06-08ನೇ ಜನವರಿ 2020 ವರೆಗೆ ಮಾತ್ರ.

ಬೇಕಾದ ದಾಖಲೆಗಳು :
* ಹುಟ್ಟಿದ ದಿನಾಂಕ/ವಯಸ್ಸಿನ ದೃಢೀಕರಣ
* ವಿಳಾಸದ ದೃಢೀಕರಣ
* ಪಾಸ್ ಪೋರ್ಟ್ ಅಳತೆಯ ಫೋಟೋ ಗಳು