ನಾಯಿ ಸಾಕುವ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಬಾಡಿಗೆದಾರರು ಹಾಗೂ ಮಾಲೀಕರ ನಡುವೆ ಗಲಾಟೆ ಪರಸ್ಪರ ಬಡಿದಾಡಿಕೊಂಡ ಘಟನೆ ಜೀವನಭೀಮಾನಗರದಲ್ಲಿ ನಡೆದಿದೆ.

ಬೆಂಗಳೂರು (ಫೆ.4):ನಾಯಿ ಸಾಕುವ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಬಾಡಿಗೆದಾರರು ಹಾಗೂ ಮಾಲೀಕರ ನಡುವೆ ಗಲಾಟೆ ಪರಸ್ಪರ ಬಡಿದಾಡಿಕೊಂಡ ಘಟನೆ ಜೀವನಭೀಮಾನಗರದಲ್ಲಿ ನಡೆದಿದೆ.

ಘಟನೆಯಲ್ಲಿ ಮಹಿಳೆ ಮೇಲೆ ಮನೆ ಮಾಲೀಕರು ಹಲ್ಲೆ ನಡೆಸಿದ್ದಾರೆ. ಹಲ್ಲೆ ಬಳಿಕ ಮಹಿಳೆ ಜೀವನಭೀಮಾನಗರ ಠಾಣೆಗೆ ದೂರು ನೀಡಲು ಹೋದರೆ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿಲ್ಲ ಎಂದು ಹಲ್ಲೆಗೊಳಗಾದ ಮಹಿಳೆ ಆರೋಪಿಸಿದ್ದಾರೆ.

ಘಟನೆ ಹಿನ್ನೆಲೆ:

ನಾಯಿ ಸಾಕುವಂತಿಲ್ಲ ಎಂದು ಮನೆ ಮಾಲೀಕರು ಮಹಿಳೆಗೆ ತಿಳಿಸಿದ್ದಾರೆ. ಆದರೆ ಇದಕ್ಕೊಪ್ಪದ ಮಹಿಳೆ ನಾನು ನಾಯಿ ಸಾಕುತ್ತೇನೆ ಎಂದಿದ್ದಾಳೆ. ಮನೆ ಮಾಲೀಕರು ಬೇಡ ಎಂದರೂ ಮಹಿಳೆ ನಾನು ಸಾಕುತ್ತೇನೆ ಎಂದು ವಾದಿಸಿದ್ದಾಳೆ. ಈ ಹಿನ್ನೆಲೆ ಮನೆ ಖಾಲಿ ಮಾಡುವಂತೆ ಮಹಿಳೆಗೆ ಸೂಚಿಸಿರುವ ಮನೆ ಮಾಲೀಕರು. ಆದರೆ ಮನೆ ಖಾಲಿ ಮಾಡದೇ ನಾಯಿ ಸಾಕುತ್ತೇನೆ ಎಂದಿದ್ದಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ.

ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣ: ಆರೋಪಿ ಸಂತೋಷ್‌ ರಾವ್‌ಗೆ ಹೈಕೋರ್ಟ್ ನೋಟಿಸ್

ಕಳೆದ ಜನೆವರಿ 2ನೇ ತಾರೀಕು ಮಧ್ಯೆರಾತ್ರಿ ಬಾಡಿಗೆದಾರರು, ಮನೆ ಮಾಲೀಕರ ನಡುವೆ ಜಗಳವಾಗಿದೆ. ಈ ವೇಳೆ ಮನೆಮಾಲೀಕರು ನಾಲ್ಕೈದು ಜನರು ಮಹಿಳೆಗೆ ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ನಡೆಸಲಾಗಿದೆ. ಘಟನೆ ಬಳಿಕ ಪೊಲೀಸರಿಗೆ ದೂರು ನೀಡಿದ್ರೂ ಎಫ್‌ಐಆರ್ ದಾಖಲಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿರುವ ಮಹಿಳೆ. ಜೀವನ ಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ