ಬೆಂಗಳೂರು(ಜು.28): ಖಾಸಗಿ ಆಸ್ಪತ್ರೆಗಳು ಯಾವುದೇ ರೋಗಿಗೆ ಕೊರೋನಾ ಲಕ್ಷಣಗಳಿದ್ದರೂ ಅಥವಾ ಇಲ್ಲದಿದ್ದರೂ ತಮ್ಮಲ್ಲಿ ಹಾಸಿಗೆ ಲಭ್ಯವಿದ್ದು ರೋಗಿಯು ಚಿಕಿತ್ಸಾ ಶುಲ್ಕ ಭರಿಸಲು ಸಿದ್ಧವಿದ್ದಲ್ಲಿ ದಾಖಲಾತಿ ನಿರಾಕರಿಸುವಂತಿಲ್ಲ ಎಂದು ಸರ್ಕಾರ ಖಡಕ್‌ ಆದೇಶ ನೀಡಿದೆ.

ಅಲ್ಲದೆ, ಕೋವಿಡ್‌ ಪಾಸಿಟಿವ್‌ ಇರುವ ಅಥವಾ ಇಲ್ಲದಿರುವ ರೋಗಿಗಳಿಗೆ ಪ್ರಯೋಗಾಲಯದಿಂದ ವರದಿ ತರುವಂತೆ ಆಸ್ಪತ್ರೆಗಳು ಒತ್ತಾಯಿಸುವಂತಿಲ್ಲ. ರೋಗಿಗಳು ನೀಡುವ ಮೊಬೈಲ್‌ ಎಸ್‌ಎಂಎಸ್‌, ವಾಟ್ಸಾಪ್‌ ಅಥವಾ ಆರೋಗ್ಯ ಸೇತು ವರದಿ ಇತ್ಯಾದಿಗಳ ಆಧಾರದ ಮೇಲೆ ರೋಗಿಗಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಬೇಕು.

ಬೆಂಗಳೂರು: 50 ವರ್ಷದ ಹಳೆಯ ಪ್ರತಿಷ್ಠಿತ ಬೇಕರಿ ಮಾಲೀಕ ಕೊರೋನಾಗೆ ಬಲಿ

ಒಂದೊಮ್ಮೆ ಇದನ್ನು ಉಲ್ಲಂಘಿಸಿದಲ್ಲಿ ಅಂತಹ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‌ ಭಾಸ್ಕರ್‌ ಆದೇಶ ಹೊರಡಿಸಿದ್ದಾರೆ.