ಬೆಂಗಳೂರು, (ಜುಲೈ.27): ನಗರದ ಶೇಷಾದ್ರಿಪುರಂದಲ್ಲಿರುವ ಸುಮಾರು 50 ವರ್ಷಗಳ ಹಳೆಯ ಬೇಕರಿಯ ಮಾಲೀಕ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ. 

16 ಅಂಗಡಿ ಬೇಕರಿ ಅಂತಲೇ ಫೇಮಸ್‌ ಆಗಿದ್ದ  ಪ್ರತಿಷ್ಠಿತ ಬೇಕರಿಯ ಮಾಲೀಕ ಕೊರೋನಾಗೆ ಬಲಿಯಾಗಿದ್ದು, ಇದೀಗ ಈ ಬೇಕರಿಯಲ್ಲಿ ಖರೀದಿ ಮಾಡಿದ್ದ ಗ್ರಾಹಕರಲ್ಲಿ ಕೊರೋನಾ ಭೀತಿ ಶುರುವಾಗಿದೆ.

ಕೊರೋನಾ ಸೋಂಕಿನಿಂದ ಕರ್ನಾಟಕದ ಮಾಜಿ ಸಚಿವ ಸಾವು

 ಜುಲೈ 18ರಂದು ಕೊರೋನಾ ದೃಢಪಟ್ಟ ಹಿನ್ನೆಲೆ ಬೇಕರಿ ಮಾಲೀಕ ಆಸ್ಪತ್ರೆಗೆ ದಾಖಲಾಗಿದ್ದರು. ಸೋಂಕು ಗಂಭೀರವಾದ ನಂತರ ಅವರನ್ನ ಎಂಎಸ್‌ ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. 

ಕಳೆದ 50 ವರ್ಷಗಳಿಂದಲೂ ನಡೆಯುತ್ತಿದ್ದ ಈ ಬೇಕರಿ ತನ್ನ ವೆಜ್ ಪಪ್ಸ್, ಬ್ರೆಡ್, ಬಿಸ್ಕೆಟ್ಸ್ ಸೇರಿದಂತೆ ಇತರೆ ತಿನಿಸುಗಳಿಗೆ ಹೆಸರುವಾಸಿಯಾಗಿತ್ತು, ಆ ಕಾರಕ್ಕಾಗಿ  ಈ ಬೇಕರಿಗೆ ಯಲಹಂಕ, ನೆಲಮಂಗಲ ಸೇರಿದಂತೆ ಇನ್ನಿತರ ಏರಿಯಾಗಳಿಂದ ಗ್ರಾಹಕರು ಬಂದು ತಿನಿಸುಗಳನ್ನ ತೆಗೆದುಕೊಂಡು ಹೋಗುತ್ತಿದ್ದರು.

ಅಷ್ಟೇ ಅಲ್ಲ ಇಲ್ಲಿ ಸರತಿ ಸಾಲಿನಲ್ಲಿ ನಿಂತು ಬೇಕರಿ ತಿನಿಸುಗಳನ್ನ ಗ್ರಾಹಕರು ಖರೀದಿಸ್ತಿದ್ರು. ಇದೀಗ ಈ ಬೇಕರಿ ತಿನಿಸು ಖರೀದಿಸಿದವರು ಆತಂಕದಲ್ಲಿದ್ದಾರೆ.