ನಕ್ಸಲರ ಶಸ್ತ್ರಾಸ್ತ್ರಗಳ ರಹಸ್ಯ, ಮತ್ತೊಬ್ಬ ನಕ್ಸಲ್ ರವೀಂದ್ರನ ಮಾಹಿತಿ ಬಿಚ್ಚಿಟ್ಟ ಗೃಹ ಸಚಿವ ಪರಮೇಶ್ವರ!

ರಾಜ್ಯ ಸರ್ಕಾರಕ್ಕೆ 6 ನಕ್ಸಲರು ಶರಣಾದ ಬಳಿಕ ಅವರ ಶಸ್ತ್ರಾಸ್ತ್ರಗಳು ಎಲ್ಲಿವೆ? ಮತ್ತು ನಕ್ಸಲ ರವೀಂದ್ರ ನಾಪತ್ತೆಯ ಬಗ್ಗೆ ಗೃಹ ಸಚಿವ ಪರಮೇಶ್ವರ ಉತ್ತರಿಸಿದ್ದಾರೆ.

Home Minister reveal Naxals weapons secret and information about another Naxal Ravindra sat

ಬೆಂಗಳೂರು (ಜ.10): ರಾಜ್ಯದಲ್ಲಿ ಕಳೆದ ಎರಡು ದಿನಗಳ ಹಿಂದೆ 6 ಜನ ನಕ್ಸಲರು ಸರ್ಕಾರಕ್ಕೆ ಶರಣಾಗತಿ ಆಗಿರುವ ಹಿನ್ನೆಲೆಯಲ್ಲಿಯೇ ಕರ್ನಾಟಕವನ್ನು ನಕ್ಸಲ್‌ಮುಕ್ತ ರಾಜ್ಯ ಎಂದು ಘೋಷಣೆ ಮಾಡಲಾಗಿದೆ. ಆದರೆ, 6 ಜನ ನಕ್ಸಲರ ಶಸ್ತ್ರಾಸ್ತ್ರಗಳು ಎಲ್ಲಿವೆ? ಹಾಗೂ ಮತ್ತೊಬ್ಬ ನಕ್ಸಲ್ ರವೀಂದ್ರ ಎಲ್ಲಿ ಹೋದ ಎಂಬುದರ ಬಗ್ಗೆ ಸ್ವತಃ ಗೃಹ ಸಚಿವ ಪರಮೇಶ್ವರ ಅವರೇ ಉತ್ತರ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ವರದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಇತ್ತೀಚೆಗೆ ಶರಣಾಗತರಾದ 6 ನಕ್ಸಲರು ಶಸ್ತ್ರಾಸ್ತ್ರಗಳನ್ನು ಕಾಡಿನಲ್ಲಿ ಎಲ್ಲಿ ಬಿಸಾಕಿದ್ದಾರೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಲಿದ್ದಾರೆ. ನಕ್ಸಲರಿಗೆ ಪರಿಹಾರ‌ ಮತ್ತು ಪುನರ್ ವಸತಿ ಕಲ್ಪಿಸುವ ವಿಚಾರದಲ್ಲಿ ತೋರಿದ ಮುತುವರ್ಜಿಯನ್ನು ಶಸ್ತ್ತಾಸ್ತ್ರ ಹುಡುಕುವುದರಲ್ಲಿ ಸರ್ಕಾರ ತೋರುತ್ತಿಲ್ಲ ಎಂಬ ಬಿಜೆಪಿ ಆರೋಪದ ಕುರಿತು‌ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ಮಾಡುವ ಕೆಲಸ ಮಾಡುತ್ತೇವೆ. ಕಾಡಲ್ಲಿ ಎಲ್ಲಿ ಇಟ್ಟಿದ್ದಾರೆ ಎಂಬುದನ್ನು ನೆರವು ಪಡೆದು ಹುಡುಕುತ್ತಾರೆ. ಇದಕ್ಕೆಲ್ಲ ಪ್ರಕ್ರಿಯೆ ಇದೆ. ಅದರ ಅನುಸಾರ ಪೊಲೀಸರು ಕೆಲಸ‌ ಮಾಡುತ್ತಾರೆ. ಇದೆಲ್ಲ ಬಿಜೆಪಿಯವರಿಗೆ ಗೊತ್ತಿಲ್ಲವೇ? ಅವರು ಕೂಡ ಸರ್ಕಾರ ನಡೆಸಿದ್ದಾರೆ. ಆಗಲೂ ಇದೇ ಪೊಲೀಸ್ ಇಲಾಖೆ ಇತ್ತಲ್ಲವೇ? ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: ನಕ್ಸಲರ ಶರಣಾಗತಿ ಬಗ್ಗೆ ಸರ್ಕಾರ ಬೀಗುತ್ತಿದ್ದರೂ ಇನ್ನೂ ಓರ್ವ ಕುಖ್ಯಾತ ನಕ್ಸಲ್ ಸುಳಿವಿಲ್ಲ!

ಇನ್ನು ಮತ್ತೊಬ್ಬ ನಕ್ಸಲ್ ರವೀಂದ್ರ ಎಂಬಾತ ನಾಪತ್ತೆ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವೆರು, ಈಗ ಶರಣಾಗತರಾಗಿರುವ ಗುಂಪಿನವರು ಆತನನ್ನು ತಮ್ಮ ಗುಂಪಿನಿಂದ ಹೊರ ಹಾಕಿದ್ದರು ಎನ್ನುವ ಮಾಹಿತಿ ನೀಡಿದ್ದಾರೆ. ಆದರೆ, ಯಾವ ಕಾರಣಕ್ಕೆ ಹೊರಹಾಕಿದ್ದರು ಎಂಬುದು ಗೊತ್ತಿಲ್ಲ. ಈ ಬಗ್ಗೆ ಪೊಲೀಸರಿಂದ ತನಿಖೆ ಮಾಡಲಾಗುತ್ತಿದೆ. ನಕ್ಸಲ್ ಚಟುವಟಿಕೆ ಬಗ್ಗೆ ನಮಗೆ ಈವರೆಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಶರಣಾಗತರಾಗಿರುವ 6 ಜನರೇ ಕೊನೆ ಎಂಬುದಾಗಿದೆ. ಹೊರಗಡೆಯಿಂದ ಬಂದರೆ ನಿಗಾವಹಿಸಲಿದ್ದಾರೆ ಎಂದು ಹೇಳಿದರು.

ಇನ್ನು ಎನ್‌ಕೌಂಟರ್‌ನಲ್ಲಿ‌ ಮೃತಪಟ್ಟ ನಕ್ಸಲ್ ವಿಕ್ರಮ್ ಗೌಡ ಅವರ ಕುಟುಂಬಕ್ಕೆ ಪರಿಹಾರ ಕಲ್ಪಿಸುವ ಬೇಡಿಕೆಯನ್ನು ಪರಿಶೀಲಿಸಲಿದ್ದಾರೆ. ನಕ್ಸಲರು ಶರಣಾಗತರಾಗಿರುವ ಪ್ರಕರಣ ಮತ್ತು ವಿಕ್ರಮ್ ಗೌಡ ಪ್ರಕರಣ ಬೇರೆ ಎಂದರು. ಜೊತೆಗೆ, ರಾಜಕೀಯದ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಶಾಸಕಾಂಗ ಪಕ್ಷದ ಕಾರ್ಯಸೂಚಿ ಏನೆಂಬುದು ಗೊತ್ತಿಲ್ಲ. ಶಾಸಕಾಂಗ ಪಕ್ಷದಿಂದ ಈವರೆಗೆ ಯಾವುದೇ ಮಾಹಿತಿ ಬಂದಿಲ್ಲ. ಬಜೆಟ್ ಅಧಿವೇಶನ ಸಮೀಪಿಸುತ್ತಿದೆ. ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಕೆಲಸಗಳ ಬಗ್ಗೆ ಹಾಗೂ ಜಾತಿಗಣತಿ ವರದಿ ಜಾರಿಗೆ ತರುವ ವಿಚಾರಗಳನ್ನು ಚರ್ಚೆ ಮಾಡುವ ಸಾಧ್ಯತೆ ಇದೆ ಎಂದು ಹೇಳಿದರು.

ಇದನ್ನೂ ಓದಿ: ಕಾಡಲ್ಲೇ ಪ್ರೇಮ, ಮದುವೆಯಾದ್ರೂ ತಾಳಿ ಕಟ್ಟಲ್ಲ, ನಕ್ಸಲರ ವಿವಾಹ ರಹಸ್ಯ ಬಯಲು, ಇಲ್ಲಿದೆ ಇಂಟರೆಸ್ಟಿಂಗ್ ಲವ್ ಸ್ಟೋರಿ!!

Latest Videos
Follow Us:
Download App:
  • android
  • ios