Asianet Suvarna News Asianet Suvarna News

ಮುಸ್ಲಿಮರು ಹಿಂದುಳಿದವರು ಅವರಿಗೆ ಹೆಚ್ಚು ಅವಕಾಶ ಸಿಗಬೇಕು, ಅದೇ ಕಾಂಗ್ರೆಸ್ ನೀತಿ: ಗೃಹ ಸಚಿವ ಪರಮೇಶ್ವರ್

ರಾಮಮಂದಿರ ವಿಚಾರವಾಗಿ ಸಂತೋಷ್ ಲಾಡ್ ವಸ್ತುಸ್ಥಿತಿ ಹೇಳಿದ್ದಾರೆ. ಅವರ ಹೇಳಿಕೆಯನ್ನು ಆರೋಪ ಅಂತಾ ಯಾಕೆ ಅಂತೀರಿ ಎಂದು ಗೃಹ ಸಚಿವ ಪರಮೇಶ್ವರ್ ಸಚಿವ ಸಂತೋಷ್ ಲಾಡ್ ಹೇಳಿಕೆಯನ್ನು ಸಮರ್ಥಿಸಿಕೊಂಡರು.

Home Minister Dr G Parameshwar statement at Haveri rav
Author
First Published Feb 18, 2024, 6:08 PM IST

ಹಾವೇರಿ (ಫೆ.18): ರಾಮಮಂದಿರ ವಿಚಾರವಾಗಿ ಸಂತೋಷ್ ಲಾಡ್ ವಸ್ತುಸ್ಥಿತಿ ಹೇಳಿದ್ದಾರೆ. ಅವರ ಹೇಳಿಕೆಯನ್ನು ಆರೋಪ ಅಂತಾ ಯಾಕೆ ಅಂತೀರಿ ಎಂದು ಗೃಹ ಸಚಿವ ಪರಮೇಶ್ವರ್ ಸಚಿವ ಸಂತೋಷ್ ಲಾಡ್ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಕೋರ್ಟ್ ಆದೇಶ ಮಾಡಿದ ಜಾಗ ಬಿಟ್ಟು ಬೇರೆ ಕಡೆ ರಾಮಮಂದಿರ ನಿರ್ಮಾಣ ಮಾಡಿದ್ದಾರೆ ಎಂಬ ಸಚಿವ ಆರೋಪ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹಸಚಿವ ಪರಮೇಶ್ವರ. ಅವರ ಹೇಳಿಕೆಯನ್ನು ಆರೋಪ ಅಂತಾ ಯಾಕೆ ಹೇಳ್ತೀರಿ ವಸ್ಥುಸ್ಥಿತಿ ಹೇಳಿದ್ದಾರೆ. ಅನೇಕ ಜನ ಈ ದೇಶದ ಮೂಲ ನಿವಾಸಿಗಳ ಬಗ್ಗೆ ಮಾತನಾಡಿದ್ದಾರೆ. ದಲಿತರು, ಹಿಂದುಳಿದವರು, ಮೂಲನಿವಾಸಿಗಳು ಅಂತಾ ವ್ಯಾಖ್ಯಾನ ಮಾಡಿದ್ದಾರೆ. ಯಾವ ಸಮುದಾಯಗಳು ಹಿಂದೆ ಉಳಿದಿವೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದೆ ಇರುವವರನ್ನು ಹಿಂದುಳಿದವರು ಎಂದು ಕರೆಯುತ್ತೇವೆ. ಈ ದೇಶದಲ್ಲಿ 16% ರಿಂದ 18% ಅಲ್ಪಸಂಖ್ಯಾತರಿದ್ದಾರೆ. ಅವರಿಗೆ ಹಿಂದುಳಿದವರು ಅಂತೀವಿ.  ಸಂವಿಧಾನದ ಆಶಯಗಳಂತೆ ಅವರಿಗೆ ಅವಕಾಶಗಳು ಸಿಗಬೇಕು. ಅದೇ ಕಾಂಗ್ರೆಸ್ ಪಕ್ಷದ ನೀತಿ. 1885 ರಲ್ಲಿ ಮಾಡಿದ ನಮ್ಮ ನೀತಿಗಳು ಇನ್ನೂ ಬದಲಾಗಿಲ್ಲ. ಅಲ್ಪ ಸಂಖ್ಯಾತರಿಗೆ ನಾವು ಕಾಂಗ್ರೆಸ್ ಪಕ್ಷದವರು ಹೆಚ್ಚಿನ ಪ್ರೋತ್ಸಾಹ ಕೊಡ್ತೀವಿ. ಪ್ರಧಾನಿ ನರೇಂದ್ರ ಮೋದಿ ಅದನ್ನೇ ಮಾಡಿದ್ರೆ ಒಳ್ಳೆಯದೇ ಎಂದರು.

ಲೋಕಸಭಾ ಚುನಾವಣೆ: ಕಾಂಗ್ರೆಸ್ ಪಕ್ಷಕ್ಕೆ 20 ಕ್ಷೇತ್ರಗಳಲ್ಲಿ ಗೆಲುವು ನಿಶ್ಚಿತ -ಡಿಕೆ ಶಿವಕುಮಾರ

ಇನ್ನು ಶಿರಾಳಕೊಪ್ಪದ ಬಸ್‌ ನಿಲ್ದಾಣದ ಸಮೀಪದ ಫುಟ್ಪಾತ್‌ನಲ್ಲಿ ಸ್ಫೋಟ ಪ್ರಕರಣ ಸಂಬಂಧ ಮಾತನಾಡಿದ ಸಚಿವರು, ಇನ್ನು ಶಿರಾಳಕೊಪ್ಪದ ಬಸ್‌ ನಿಲ್ದಾಣದ ಸಮೀಪದ ಫುಟ್ಪಾತ್‌ನಲ್ಲಿ ಸ್ಫೋಟ ಪ್ರಕರಣ ಸಂಬಂಧ ಮಾತನಾಡಿದ ಸಚಿವರು, ಆ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ. ಪ್ರಕರಣದ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ತಪ್ಪಿಸ್ಥರ ಕ್ರಮ ತಗೊಳ್ತಾರೆ ಎಂದರು. 

ಹಾನಗಲ್ ಗ್ಯಾಂಗ್ ರೇಪ್ ವಿಚಾರದ ಬಗ್ಗೆಯೂ ಸಾಕಷ್ಟು ಚರ್ಚೆ ಆಗಿದೆ. ಸದನದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ನಮ್ಮ ಪೊಲೀಸರು ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮ ತಗೊಳ್ತಾರೆ ಎಂದರು. ಇದೇ ವೇಳೆ ಕಾಂಗ್ರೆಸ್‌ನಲ್ಲಿ ಡಿಸಿಎಂ ಹುದ್ದೆಗೆ ಪೈಪೋಟಿ ಇದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅದೆಲ್ಲ ಹೈಕಮಾಂಡ್‌ಗೆ ಗೊತ್ತಿದೆ. ಹೈಕಮಾಂಡ್ ತಗೊಳೋ ನಿರ್ಧಾರಕ್ಕೆ ಎಲ್ಲರೂ ಬದ್ದರಿರಬೇಕು ಎಂದರು.

ಸಿಬಿಐ, ಇಡಿ ದಾಳಿ ಮಾಡಿಸೋದು ಬಿಜೆಪಿ ಹುಟ್ಟುಗುಣ; ಮೋದಿ, ಶಾಗೆ ಇದೊಂದು ಕಸುಬು: ವಿಜಯಾನಂದ ಕಾಶಪ್ಪನವರ್ ಕಿಡಿ

ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗುತ್ತಂತಲ್ಲ ಸರ್ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಹಗಲುಗನಸು ಅಂತಾ ಕೇಳಿದ್ದೀರಾ? ಡೇ ಡ್ರೀಮ್ ಅಂತಾರೆ. ಅವರು ಕನಸು ಕಾಣಲಿ ನಾವು ಆಡಳಿತ ಮಾಡ್ತಾ ಇರ್ತೇವೆ. ಕಾಂಗ್ರೆಸ್‌ನಲ್ಲಿ ಬೇಕಾದಷ್ಟು ಜನ ಅಭ್ಯರ್ಥಿಗಳಿದ್ದಾರೆ. ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳಿಗೆ ಕೊರತೆ ಇಲ್ಲ. ಲೋಕಸಭಾ ಚುನಾವಣೆ ಸ್ಪರ್ಧೆಗೆ ಯಾರೂ ಹಿಂದೇಟು ಹಾಕೊಲ್ಲ. ಈ ಬಾರಿ ರಾಜ್ಯದ ಜನರು ಕಾಂಗ್ರೆಸ್ ಕೈಹಿಡಿಯುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.

Follow Us:
Download App:
  • android
  • ios