ರಾಮನಗರ ಹೆಸರು ಬದಲಾವಣೆ: ಕುಮಾರಸ್ವಾಮಿಗೆ ಸಚಿವ ಪರಮೇಶ್ವರ್‌ ತಿರುಗೇಟು

ರಾಮನಗರ ಹೆಸರು ಬದಲಾವಣೆ ಮಾಡುವ ಸಂಬಂಧ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಈ ಕುರಿತು ಪ್ರಸ್ತಾಪ ಮಾಡಿದ್ದರು. ರಾಮನಗರ ಹಾಗೇ ಇರುತ್ತೆ ರಾಮನಗರ ಡಿಸ್ಟಿಕ್ ಅನ್ನೋದರ ಬದಲಿಗೆ ಬೆಂಗಳೂರು ದಕ್ಷಿಣ ಅಂತ ಬರುತ್ತೆ ಎಂದ ಸಚಿವ ಜಿ. ಪರಮೇಶ್ವರ್‌
 

home minister dr g parameshwar react to union minister hd kumaraswamy statement grg

ಬೆಂಗಳೂರು(ಜು.26):  ರಾಮನಗರ ಹೆಸರು ಬದಲಾವಣೆ ಮಾಡಲ್ಲ ರಾಮನಗರವನ್ನ ಬೆಂಗಳೂರು ವ್ಯಾಪ್ತಿಗೆ ತರ್ತೀವಿ. ರಾಮನಗರ ಹೆಸರಿಡೋಕು ಮುಂಚೆ ಬೆಂಗಳೂರು ರೂರಲ್ ಅಂತಾನೆ ಇತ್ತು. ಬೆಂಗಳೂರಿಗೆ ಒಂದು ಬ್ರಾಂಡ್ ನೇಮ್ ಇದೆ. ಹೀಗಾಗಿಯೇ ಬೆಂಗಳೂರು ವ್ಯಾಪ್ತಿಗೆ ಸೇರಿಸಿದ್ರೆ ಸಾಧಾರಣವಾಗಿ ಅಭಿವೃದ್ಧಿಯಾಗುತ್ತೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ಗೃಹ ಸಚಿವ ಜಿ. ಪರಮೇಶ್ವರ್‌ ತಿರುಗೇಟು ನೀಡಿದ್ದಾರೆ.

ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಜಿ. ಪರಮೇಶ್ವರ್‌ ಅವರು, ರಾಮನಗರ ಹೆಸರು ಬದಲಾವಣೆ ಮಾಡುವ ಸಂಬಂಧ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಈ ಕುರಿತು ಪ್ರಸ್ತಾಪ ಮಾಡಿದ್ದರು. ರಾಮನಗರ ಹಾಗೇ ಇರುತ್ತೆ ರಾಮನಗರ ಡಿಸ್ಟಿಕ್ ಅನ್ನೋದರ ಬದಲಿಗೆ ಬೆಂಗಳೂರು ದಕ್ಷಿಣ ಅಂತ ಬರುತ್ತೆ ಎಂದು ಹೇಳಿದ್ದಾರೆ. 

ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡಲು ಸಚಿವ ಸಂಪುಟ ಒಪ್ಪಿಗೆ!

ರಾಮನಗರ ಹೆಸರು ಬದಲಿಸಿದ್ರೆ ಸರ್ಕಾರ ಪತನ ಅನ್ನೋ ಹೆಚ್‌ಡಿಕೆ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಪರಮೇಶ್ವರ್‌, ರಾಮನಗರ ಕೂಡ ಬೆಂಗಳೂರಿಗೆ ಸೇರಿದಾಗ ಸ್ವಾಭಾವಿಕವಾಗಿ ಬೆಳವಣಿಗೆ ಆಗುತ್ತೆ ಅಂತ ಡಿಸಿಎಂ ಪ್ರಸ್ತಾಪ ಮಾಡಿದ್ದಾರೆ. ಇದರಲ್ಲಿ ಪೊಲಿಟಿಕಲ್ ಆ್ಯಂಗಲ್ ಏನಿಲ್ಲ. ಸರ್ಕಾರ ಅದನ್ನೆಲ್ಲ ಎದುರಿಸುತ್ತೆ. ರಾಮನಗರ ಹೆಸ್ರು ಬದಲಾವಣೆ ಮಾಡ್ತಿಲ್ಲ. ಬದಲಾಗಿ ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸಲಾಗ್ತಿದೆ. ರಾಮನಗರ ಅಲ್ಲೇ ಇರುತ್ತೆ ಎಲ್ಲಿಯೂ ಹೋಗಲ್ಲ. ರಾಮನ ಹೆಸರು ನಾವು ತೆಗೀತಿಲ್ಲ. ರಾಮ ಅಲ್ಲೇ ಇರ್ತಾರೆ. ರಾಮನಗರನೂ ಅಲ್ಲೇ ಇರುತ್ತೆ. ಕುಮಾರಸ್ವಾಮಿಯರು ಹೇಳಿಕೆ ಕೊಡ್ತಾರೆ, ಏನು ಮಾಡೋಕೆ ಆಗಲ್ಲ. ಇದನ್ನೆಲ್ಲಾ ಸರ್ಕಾರ ಎದುರಿಸ್ಬೇಕು ಎದರಿಸುತ್ತೆ. ಇದ್ರಲ್ಲಿ ರಾಜಕೀಯದ ಪ್ರಶ್ನೆಯೇ ಇಲ್ಲ ಅಂತ ಹೇಳಿದ್ದಾರೆ. 

ರಾಮನಗರವನ್ನ ಬದಲಾವಣೆ ಮಾಡ್ತಿಲ್ಲ. ರಾಮನಗರ ಜಿಲ್ಲೆ ಅನ್ನೋದನ್ನ ಬೆಂಗಳೂರಿಗೆ ಸೇರಿಸ್ತಿದ್ದೀವಿ ಅಷ್ಟೇ ಎಂದು ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios