Asianet Suvarna News Asianet Suvarna News

ಧಾರ್ಮಿಕ ಗತ್ತಿ ವಿಧೇಯಕ ಅಂಗೀಕಾರ, ದೇವಸ್ಥಾನದ ಆದಾಯದ ಶೇ.10 ರಷ್ಟು ಹಣ ಸರ್ಕಾರಕ್ಕೆ!

ವಿಧಾನಸಭೆಯಲ್ಲಿಂದು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮದಾಯ ದತ್ತಿಗಳ ವಿಧೇಯಕ ಅಂಗೀಕಾರಗೊಂಡಿದೆ.  ಸರ್ಕಾರಕ್ಕೆ ದೇವಸ್ಥಾನಗಳು ಕೊಡುತ್ತಿದ್ದ ಹಣವನ್ನು ದ್ವಿಗುಣಗೊಳಿಸಲಾಗಿದೆ. ಜೊತೆಗೆ ಕೆಲ ಪ್ರಮುಖ ತಿದ್ದುಪಡಿಗಳನ್ನು ತರಲಾಗಿದೆ.
 

Hindu Religious Institutions and Charitable Endowments Amendment Act was passed in the Karnataka Legislative Assembly ckm
Author
First Published Feb 21, 2024, 11:29 PM IST

ಬೆಂಗಳೂರು(ಫೆ.21) ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮದಾಯ ದತ್ತಿಗಳ ವಿಧೇಯಕದಲ್ಲಿ ಕೆಲ ಮಹತ್ತರ ಬದಲಾವಣೆ ಮಾಡಲಾಗಿದೆ. ಇಂದು ವಿಧಾನಸಭೆಯಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮದಾಯ ದತ್ತಿಗಳ ವಿಧೇಯಕ ಅಂಗೀಕಾರ ಗೊಂಡಿದೆ. ಪ್ರಮುಖವಾಗಿ 10 ಲಕ್ಷದಿಂದ 1 ಕೋಟಿ ರೂಪಾಯಿ  ಹಾಗೂ ಅದಕ್ಕೂ ಮೀರಿದ ಆದಾಯದ ದೇವಸ್ಥಾನಗಳು ಸರ್ಕಾರಕ್ಕೆ ನೀಡುತ್ತಿದ್ದ ಹಣವನ್ನು ದುಪ್ಪಟ್ಟು ಮಾಡಲಾಗಿದೆ. ಜೊತೆಗೆ ಕೆಲ ಪ್ರಮುಖ ತಿದ್ದುಪಡಿಯನ್ನು ತರಲಾಗಿದೆ. ಆದರೆ ಈ ವಿಧೇಯಕದ ವಿರುದ್ಧ ಬಿಜೆಪಿ ಆಕ್ರೋಶ ಹೊರಹಾಕಿದೆ.

ವಿಧೇಯಕದಲ್ಲಿ ಸರ್ಕಾರದ ಮುಜರಾಯಿ ಇಲಾಖೆಗೆ ದೇವಸ್ಥಾನಗಳು ನೀಡುತ್ತಿದ್ದ ಆದಾಯದ ಹಣವನ್ನು ಇದೀಗ ದ್ವಿಗುಣಗೊಳಿಸಲಾಗಿದೆ. ಇನ್ನು ಮುಂದೆ  10 ಲಕ್ಷದಿಂದ 1 ಕೋಟಿ ಆದಾಯದ ದೇವಸ್ಥಾನಗಳು ತಮ್ಮ ಆದಾಯದ ಶೇ.5 ರಷ್ಟು ಹಣವನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಇನ್ನೂ  1 ಕೋಟಿಗೂ‌ ಆದಾಯ ಮೀರಿದ ದೇವಸ್ಥಾನಗಳು ಆದಾಯದ ಶೇ.10 ರಷ್ಟು ಹಣ ಸಲ್ಲಿಕೆ ಮಾಡಬೇಕು ಎಂದು ತಿದ್ದುಪಡಿ ತಂದಿದೆ.

 

ಪುರಾತತ್ವ ಇಲಾಖೆ ಅನುಮತಿ ಪಡೆಯದೇ ಹಂಪಿ ವಿರೂಪಾಕ್ಷೇಶ್ವರ ದೇಗುಲ ಕಂಬಕ್ಕೆ ಮೊಳೆ ಹೊಡೆದ ಧಾರ್ಮಿಕ ದತ್ತಿ ಇಲಾಖೆ!
 
ಆದಾಯ, ಸರ್ಕಾರದ ಬೊಕ್ಕಸಕ್ಕೆ ಹಣ ಸಲ್ಲಿಕೆ ಜೊತೆಗೆ ಇತರ ಕೆಲ ಪ್ರಮುಖ ತಿದ್ದುಪಡಿಗಳನ್ನು ಮಾಡಲಾಗಿದೆ. ಸಿ ಗ್ರೇಡ್ ದೇಗುಲದ ಅರ್ಚಕರು, ಸಿಬ್ಬಂದಿಗೆ ವಿಮೆ ಸೌಕರ್ಯ ಒದಗಿಸಲು ವಿಧೇಯಕದಲ್ಲಿ ಅವಕಾಶ ಒದಗಿಸಲಾಗಿದೆ. ಅರ್ಚಕರು, ದೇಗುಲ ಸಿಬ್ಬಂದಿ ಮೃತಪಟ್ಟಾಗ 5 ಲಕ್ಷ ಪರಿಹಾರ ಕೊಡಲು ಅವಕಾಶ ನೀಡಲಾಗಿದೆ. ಈ ಮುಂಚೆ ಮೃತಪಟ್ಟವರಿಗೆ ಕೇವಲ 35 ಸಾವಿರ ರೂ ಕೊಡಲಾಗುತ್ತಿತ್ತು. ಜೊತೆಗೆ ಅರ್ಚಕರು, ದೇಗುಲ ಸಿಬ್ಬಂದಿ ಮಕ್ಕಳ ವಿದ್ಯಾಭ್ಯಾಸಕ್ಕೆ 5 ಸಾವಿರ ರೂಪಾಯಿಯಿಂದ 5೦ ಸಾವಿರ ರೂ ವರೆಗೆ ಸ್ಕಾಲರ್ ಶಿಪ್ ನೀಡಲು ಅವಕಾಶ ಮಾಡಿಕೊಡಲಾಗಿದೆ.

ಆದರೆ ಕಾಂಗ್ರೆಸ್ ತಂದಿರುವ ಈ ಬಿಲ್‌ಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಅಂದು ಘಜ್ನಿ, ಘೋರಿ, ಔರಂಗಜೇಬ, ಟಿಪ್ಪು, ಇಂದು ಕಾಂಗ್ರೆಸ್, ಸಿದ್ದರಾಮಯ್ಯ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ . ಕಾಂಗ್ರೆಸ್ ಕರ್ನಾಟಕವನ್ನು ಕೆಟ್ಟ ತುಷ್ಠೀಕರಣದ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ. ಪಂಚ ರಾಜ್ಯಗಳ ಚುನಾವಣೆಗಾಗಿ ಲೂಟಿ ಹೊಡೆದು ಖಜಾನೆಯನ್ನು ಖಾಲಿ ಮಾಡಿದೆ.ಈಗ ಕಾಂಗ್ರೆಸ್'ನ ದುಷ್ಟ ಕಣ್ಣು ಹಿಂದೂ ದೇವಾಲಯಗಳ ಮೇಲೆ ಬಿದ್ದಿದೆ ಎಂದು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.

 

ಧಾರ್ಮಿಕ ದತ್ತಿ ದೇವಾಲಯದಲ್ಲಿ ಮುದ್ರಾಧಾರಣೆ ನಿಷೇಧ, ಸರ್ಕಾರದ ಆದೇಶಕ್ಕೆ ಮಾಧ್ವರ ವಿರೋಧ

ಹಿಂದೂ ದೇವಾಲಯದ ಆಡಳಿತ ಸಮಿತಿಗೆ ಅನ್ಯ ಧರ್ಮೀಯರು ಸಹ ಸದಸ್ಯರಾಗಬಹುದು ಎನ್ನುವ ನಿಯಮಕ್ಕೆ ಬಿಜೆಪಿ ಕೆಂಡಾಮಂಡಲವಾಗಿದೆ. ಕರ್ನಾಟಕದ ಖಜಾನೆಯನ್ನು ಖಾಲಿ ಮಾಡಿದಂತೆ, ಹಿಂದೂ ದೇವಾಲಯಗಳನ್ನು ಅನ್ಯ ಧರ್ಮೀಯ ಸದಸ್ಯರ ಸಹಾಯದಿಂದ ದೇವಾಲಯದ ಬೊಕ್ಕಸವನ್ನು ಬರಿದು ಮಾಡುವ ದುರಾಲೋಚನೆ ಸಿಎಂ ಸಿದ್ದರಾಮಯ್ಯರವರ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದೆ. 

ಹಿಂದೂ ದೇವಾಲಯಗಳಿಗೆ ಅನ್ಯ ಧರ್ಮೀಯರನ್ನು ಆಡಳಿತ ಮಂಡಳಿ ಸದಸ್ಯರನ್ನಾಗಿಸುವ ಆದೇಶವನ್ನು ಹಿಂಪಡೆಯಬೇಕು.  ಘಜ್ನಿ-ಘೋರಿಯನ್ನೇ ಹಿಂದೂ ಧರ್ಮ ಬಿಟ್ಟಿಲ್ಲ, ಇನ್ನು ನೀವ್ಯಾವ ಲೆಕ್ಕ ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.  

Follow Us:
Download App:
  • android
  • ios