ಕರ್ನಾಟಕದಲ್ಲಿ ಹಿಂದೂಗಳ ಹತ್ಯೆಗೆ ಖಂಡನೆ, ವಕ್ಫ್ ಬೋರ್ಡ್ ಕಾಯ್ದೆ ರದ್ದತಿಗೆ ಆಗ್ರಹ

ದೇಶದಾದ್ಯಂತ  ವಕ್ಫ್ ಬೋರ್ಡ್ ಕಾಯ್ದೆ  ರದ್ದುಗೊಳಿಸಲು ಹಿಂದೂ ರಾಷ್ಟ್ರ ಜಾಗೃತಿ ಆಂದೋಲನದಲ್ಲಿ ಬೇಡಿಕೆ ವ್ಯಕ್ತವಾಗಿದೆ.

Hindu Rashtra Jagruti Andolan Condemn killing of Hindus in Karnataka demand repeal of Waqf Board Act gow

ಉಡುಪಿ (ಜು.18): ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಬೆನ್ನಲ್ಲೇ ಹಿಂದೂ ಕಾರ್ಯಕರ್ತರ ಮೇಲೆ ವಿವಿಧ ರೀತಿಯ ಆಕ್ರಮಣಗಳು ಹೆಚ್ಚಾಗಿವೆ. ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ಅವರಿಗೆ ಥಳಿಸುವುದು ಮತ್ತು ಭಯ ನಿರ್ಮಾಣ ಮಾಡುವ ಪ್ರಕ್ರಿಯೆ ನಡೆಯುತ್ತಿವೆ, ಜೈನ ಮುನಿ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರು ಮತ್ತು ಯುವ ಬ್ರಿಗೇಡ್ ನ ಶ್ರೀ. ವೇಣುಗೋಪಾಲ ಇವರ ಹತ್ಯೆ, ಸೇರಿದಂತೆ ಇನ್ನೂ ಹಲವಾರು ಘಟನೆಗಳು ಹಿಂದೂ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ ಎಂದು ಉಡುಪಿಯಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಆಂದೋಲನದ ವೇಳೆ ಗಮನಸೆಳೆಯಲಾಯ್ತು.

ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಪ್ರತಿ ರವಿವಾರ ನಡೆಯುತ್ತಿದ್ದ ನಾಗರಕಟ್ಟೆಯ ಪೂಜೆಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಬಕ್ರೀದ್ ಸಮಯದಲ್ಲಿ ಬಾದಾಮಿ, ಶಿಕಾರಿಪುರ, ಶಿರಸಿ ಸೇರಿದಂತೆ ಹಲವೆಡೆ ಅಕ್ರಮವಾಗಿ ಗೋಹತ್ಯೆ ಮಾಡಿ, ಗೋವಿನ ಎಲಬುಗಳನ್ನು ದೇವಸ್ಥಾನ, ಹಿಂದೂ ಮನೆಗಳ ಎದುರು ಎಸೆದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ, ಹಾಗಾಗಿ ಹಿಂದೂ ಕಾರ್ಯಕರ್ತರಿಗೆ, ಹಿಂದೂ ಧರ್ಮಕ್ಕೆ ಹೋರಾಟ ಮಾಡುವವರಿಗೆ ರಕ್ಷಣೆ ನೀಡಬೇಕು, ಹಿಂದೂಗಳ ಮೇಲೆ ಆಕ್ರಮಣ ಮಾಡುವವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿ ಈ ಆಂಧೋಲನ ಹಮ್ಮಿಕೊಳ್ಳಲಾಗಿತ್ತು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಚಿಪ್ಪು ಗ್ಯಾರಂಟಿ, ಸಚಿವ ಶಿವರಾಜ್ ತಂಗಡಗಿ

ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ವೀಣಾ ಬಿ. ಎನ್. ಇವರ ಮೂಲಕ ಮಾನ್ಯ ರಾಜ್ಯಪಾಲರಿಗೆ ಮನವಿಯನ್ನೂ ಸಲ್ಲಿಸಲಾಯಿತು. ಈ ವೇಳೆ ಶ್ರೀ ರಾಮ ಸೇನೆಯ ಉಡುಪಿ ಜಿಲ್ಲಾಧ್ಯಕ್ಷ  ಜಯರಾಮ ಅಂಬೇಕಲ್ ಹಾಗೂ ಪ್ರಧಾನ ಕಾರ್ಯದರ್ಶಿ  ಶರತ್ ಮಣಿಪಾಲ, ಭಾರತೀಯ ಜೈನ್ ಮಿಲನ್ ಸಂಘಟನೆಯ ಕಾರ್ಯಧ್ಯಕ್ಷರಾದ  ಕೆ. ಪ್ರಸನ್ನ ಕುಮಾರ್, ಅಧ್ಯಕ್ಷರಾದ  ದೀಪಾರಾಣಿ, ಕಾರ್ಯದರ್ಶಿಗಳಾದ ಶ್ವೇತಾ, ಸದಸ್ಯರಾದ ಡಾಕ್ಟರ್ ಆಕಾಶ ರಾಜ್, ಡಾಕ್ಟರ್ ಮಾನಸ ಜೈನ್ ಮತ್ತು ವೈ ಸುಧೀರ್ ಎರ್ಮಾಳು ಇವರು ಮತ್ತು ಹಿಂದೂ ಜನಜಾಗೃತಿ ಸಮಿತಿಯ ವಿಶ್ವನಾಥ ನಾಯಕ್ ಉಪಸ್ಥಿತರಿದ್ದರು.

ಫ್ಲಾಟ್ ನೋಂದಣಿ ಮಾಡದೆ ಸತಾಯಿಸಿದ ಬಿಲ್ಡರ್‌ಗೆ ಬಿತ್ತು ಭರ್ಜರಿ ದಂಡ

ವಕ್ಫ್ ಬೋರ್ಡ್ ವಶಪಡಿಸಿಕೊಂಡ ಭೂಮಿಯನ್ನು ಮೂಲ ಮಾಲೀಕರಿಗೆ ಹಿಂತಿರುಗಿಸಿ!
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವಕ್ಫ್ ಬೋರ್ಡ್ ತನ್ನ ಕಾನೂನನ್ನು ದುರುಪಯೋಗ ಪಡಿಸಿಕೊಂಡು ಸರಕಾರಿ ಮತ್ತು ಖಾಸಗಿ ಜಮೀನುಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದೆ. ಆ ಮೂಲಕ ದೇಶದಲ್ಲಿ 8 ಲಕ್ಷ ಎಕರೆ ಜಮೀನನ್ನು ಕಬಳಿಸಿದೆ. ಇದೊಂದು ದೊಡ್ಡ 'ಲ್ಯಾಂಡ್ ಜಿಹಾದ್' ಆಗಿದೆ. ಹಾಗಾಗಿ ಈ ಕಾನೂನನ್ನು ರದ್ದುಗೊಳಿಸಿ ಜಮೀನಿನ ನಿಜವಾದ ಮಾಲೀಕರಿಗೆ ಅದರ ಅಧಿಕಾರವನ್ನು ನೀಡಬೇಕು.

ದೇಶದಲ್ಲಿ 'ಸಮಾನ ನಾಗರಿಕ ಕಾನೂನು' ಜಾರಿಗೆ ತರುವ ಮೂಲಕ ಅಲ್ಪಸಂಖ್ಯಾತರ ಹೆಸರಿನಲ್ಲಿ ಜಾರಿಯಲ್ಲಿರುವ ಎಲ್ಲಾ ವಿಶೇಷ ಸೌಲಭ್ಯಗಳು, ಕಾನೂನುಗಳು, ಆಯೋಗಗಳು, ಮಂಡಳಿಗಳು, ಸರಕಾರಿ ಇಲಾಖೆಗಳನ್ನು ರದ್ದುಪಡಿಸಬೇಕು ಮತ್ತು ಎಲ್ಲರಿಗೂ ಸಮಾನ ನಡವಳಿಕೆ ಸಿಗುವಂತಾಗಬೇಕು. ಈ ಬೇಡಿಕೆಗಳನ್ನು ಅಂಗೀಕರಿಸದಿದ್ದರೆ ‘ವಕ್ಫ್ ಕಾನೂನು’ ವಿರುದ್ಧ ಪ್ರಬಲ ಚಳವಳಿ ನಡೆಸಬೇಕಾಗುತ್ತದೆ ಎಂದು ಈ ಆಂದೋಲನದ ಮೂಲಕ ಎಚ್ಚರಿಸಲಾಯಿತು.

Latest Videos
Follow Us:
Download App:
  • android
  • ios