'ರಾಜ್ಯದಲ್ಲಿ ಅತಿ ಹೆಚ್ಚು ಟೆಸ್ಟ್: WHO ಮಿತಿಗಿಂತ ಹೆಚ್ಚು ಪರೀಕ್ಷೆ!'
ರಾಜ್ಯದಲ್ಲಿ ಅತಿಹೆಚ್ಚು ಟೆಸ್ಟ್| ಡಬ್ಲ್ಯುಎಚ್‌ಒ ಮಿತಿಗಿಂತ ಹೆಚ್ಚು ಪರೀಕ್ಷೆ: ಸುಧಾಕರ್| ಮುಂದಿನ ಒಂದು ವಾರದಲ್ಲಿ ಇನ್ನೂ 25 ಲ್ಯಾಬ್‌ಗಳು ಲಭ್ಯ
ಬೆಂಗಳೂರು(ಜು.18): ರಾಜ್ಯದಲ್ಲಿ ಕೊರೋನಾ ಸೋಂಕು ಪರೀಕ್ಷೆಯಲ್ಲಿ ಈಗಾಗಲೇ 9.25 ಲಕ್ಷ ಮಂದಿಗೆ ಸೋಂಕು ಪರೀಕ್ಷೆ ನಡೆಸಿದ್ದು ವಿಶ್ವ ಆರೋಗ್ಯ ಸಂಸ್ಥೆ ನಿಗದಿ ಪಡಿಸಿರುವ ಮಿತಿಗಿಂತಲೂ ಹೆಚ್ಚು ಪರೀಕ್ಷೆಗಳನ್ನು ರಾಜ್ಯ ಮಾಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ರಾಜ್ಯದಲ್ಲಿ ಶೇ.68 ಸೋಂಕಿತರ ಸೋಂಕಿನ ಮೂಲವೇ ಗೊತ್ತಿಲ್ಲ!
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಈ ಮೂಲಕ ದೇಶದಲ್ಲಿ ಅತಿ ಹೆಚ್ಚು ಆರ್‌ಟಿ-ಪಿಸಿಆರ್ ಕೊರೋನಾ ಸೋಂಕು ಪರೀಕ್ಷೆ ನಡೆಸಿದ ರಾಜ್ಯಗಳ ಪಟ್ಟಿಯಲ್ಲಿ ಪ್ರಥಮ ಹತ್ತು ರಾಜ್ಯಗಳಲ್ಲಿ ಸ್ಥಾನ ಪಡೆದಿದೆ ಎಂದರು.
ಪ್ರಸ್ತುತ ರಾಜ್ಯದಲ್ಲಿ ಸಾಕಷ್ಟುಪ್ರಯೋಗಾಲಯಗಳಿವೆ. ಮುಂದಿನ ಒಂದು ವಾರದಲ್ಲಿ ಇನ್ನೂ 25 ಲ್ಯಾಬ್‌ಗಳು ಲಭ್ಯವಾಗಲಿದ್ದು. ನಿತ್ಯ 45 ರಿಂದ 50 ಸಾವಿರ ಪರೀಕ್ಷೆ ನಡೆಸುವ ಗುರಿ ಹೊಂದ್ದೇವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ ದಿನ ಪ್ರತಿ 10 ಲಕ್ಷ ಜನಸಂಖ್ಯೆಗೆ 140 ಪರೀಕ್ಷೆಗಳನ್ನು ಮಾಡಬೇಕು ಎಂದು ಶಿಫಾರಸ್ಸು ಮಾಡಿದೆ. ಆದರೆ, ಕರ್ನಾಟಕ 297 ಪರೀಕ್ಷೆಗಳನ್ನು ಮಾಡುವ ಗುರಿ ತಲುಪಿದೆ.
ಚಾಲಕನ ಬದುಕಿಸಲು ಉಸಿರು ಕೊಟ್ಟ 10 ಮಂದಿಗೆ ಕೊರೋನಾ!
ಈವರೆಗೂ ರಾಜ್ಯದಲ್ಲಿ 9.25 ಲಕ್ಷಕ್ಕೂ ಹೆಚ್ಚು ಪರೀಕ್ಷೆ ನಡೆಸಲಾಗಿದ್ದು, ಅವೆಲ್ಲವೂ ನಿಖರವಾದ ವರದಿ ನೀಡುವ ಆರ್‌ಟಿ-ಪಿಸಿಆರ್ ಪರೀಕ್ಷೆಗಳಾಗಿರುವುದು ಮತ್ತೊಂದು ಹೆಗ್ಗಳಿಕೆ ಎಂದು ಹೇಳಿದರು.