ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಹಿಳೆ ಸಲ್ಲಿಸಿ ಮೇಲ್ಮನವಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರ ನೇತೃತ್ವದ ವಿಭಾಗೀಯ ಪೀಠ ಆದೇಶಿಸಿದೆ.
ಬೆಂಗಳೂರು(ಏ.15): ಮದುವೆಯಾದ ಐದು ತಿಂಗಳಲ್ಲಿಯೇ ಪತಿಯನ್ನು ತ್ಯಜಿಸಿ ತವರು ಸೇರಿದ ಪತ್ನಿ ಮೂರು ವಷರ್ವಾದರೂ ಹಿಂದಿರುಗದ ಹಿನ್ನಲೆಯಲ್ಲಿ ‘ಪರಿತ್ಯಾಗ’ ಅಂಶದ ಆಧಾರದ ಮೇಲೆ ದಂಪತಿಗೆ ವಿಚ್ಛೇದನ ಮಂಜೂರು ಮಾಡಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಪುರಸ್ಕರಿಸಿದೆ. ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಹಿಳೆ ಸಲ್ಲಿಸಿ ಮೇಲ್ಮನವಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರ ನೇತೃತ್ವದ ವಿಭಾಗೀಯ ಪೀಠ ಆದೇಶಿಸಿದೆ.
ಪ್ರಕರಣದ ವಿವರ: ಕೋಲಾರದ ರಾಜು ಮತ್ತು ಬೆಂಗಳೂರಿನ ನಿತಾ್ಯ (ಇಬ್ಬರ ಹೆಸರು ಬದಲಿಸಲಾಗಿದೆ) 2010ರ ಜೂ.18ರಂದು ಮದುವೆಯಾಗಿದ್ದರು. ಮದುವೆಯಾದ ಐದೇ ತಿಂಗಳಿಗೆ ಪತಿಯನು್ನ ತ್ಯಜಿಸಿ ಪತಿ್ನ ತವರು ಮನೆ ಸೇರಿದ್ದರು. ದಂಪತಿಗೆ 2011ರ ಜೂ.9ರಂದು ಗಂಡು ಜನಿಸಿತ್ತು.
ಮದ್ವೆಯಾಗಿ 4 ತಿಂಗಳಿಗೆ ನಟಿ ಖುಷ್ಬೂ ಡಿವೋರ್ಸ್?; ಪ್ರಭು ಜೊತೆಗಿನ ಸಂಬಂಧ, ಸತ್ಯ ತೆರೆದಿಟ್ಟ ನಟಿ ಕಾಕಿನಾಡ ಶ್ಯಾಮಲಾ
ಆದರೆ, ರಾಜು 2014ರ ಅ.29ರಂದು ಕೋಲಾರದ ಕೌಟುಂಬಿಕ ಅಜಿರ್ ಸಲ್ಲಿಸಿ, ಮದುವೆಯಾದ ಐದು ತಿಂಗಳಿಗೆ ಪತಿ್ನ ತನ್ನನು್ನ ತೊರೆದು ತವರು ಮನೆಗೆ ಸೇರಿದಾ್ದರೆ. ನಾವು ಸತತ ಮೂರು ವಷರ್ಗಳಿಂದ ಪ್ರತೆ್ಯೕಕವಾಗಿ ವಾಸ ಮಾಡುತಿ್ತದೆ್ದೕವೆ. 2014ರ ಸೆ.2ರಂದು ಪತಿ್ನಗೆ ನೋಟಿಸ್ ನೀಡಿ, ವಿಚ್ಛೇದನಕ್ಕೆ ಒಪ್ಪಿಗೆ ನೀಡುವಂತೆ ಸೂಚಿಸಲಾಗಿತ್ತು. ಆ ನೋಟಿಸ್‌ಗೂ ಪತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದ್ದರಿಂದ ‘ಪರಿತಾ್ಯಗ’ ಆಧಾರದ ಮೇಲೆ ನಮ್ಮ ವಿವಾಹವನು್ನ ಅನೂಜಿರ್ತಗೊಳಿಸಿ, ವಿಚ್ಛೇದನ ಮಂಜೂರು ಮಾಡಬೇಕು ಎಂದು ಕೋರಿದ್ದರು.
ರಾಜುವಿನ ಆ ಅಜಿರ್ಯನ್ನು ವಿಚಾರಣೆಗೆ ಪರಿಗಣಿಸಿದ್ದ ಕೌಟುಂಬಿಕ ನ್ಯಾಯಾಲಯ, ನಿತಾಯಗೆ ನೋಟಿಸ್ ಜಾರಿಗೊಳಿಸಿತ್ತು. ನಿತಾಯ ತನ್ನ ಪರ ವಾದ ಮಂಡಿಸಲು ವಕೀಲರನು್ನ ನಿಯೋಜಿಸಿಕೊಂಡಿದ್ದರು. ಆದರೆ, ಪತಿಯ ಅಜಿರ್ ಹಾಗೂ ಹೇಳಿಕೆಗೆ ಪತ್ನಿಯಿಂದ ಯಾವುದೇ ಆಕ್ಷೇಪಣೆ ಅಥವಾ ಹೇಳಿಕೆ, ತನ್ನ ಪರವಾದ ಸಾಕ್ಷ್ಯಧಾರ ಒದಗಿಸಿರಲಿಲ್ಲ. ಇದರಿಂದ ಕೌಟುಂಬಿಕ ನ್ಯಾಯಲಯ ದಂಪತಿಯ ವಿವಾಹ ಅನೂಜಿರ್ತಗೊಳಿಸಿ ವಿಚ್ಛೇದನ ಮಂಜೂರು ಮಾಡಿ 2016ರ ಏ.18ರಂದು ಆದೇಶಿಸಿತ್ತು. ಈ ಆದೇಶ ರದು್ದ ಕೋರಿ ನಿತಾ್ಯ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಹೈಕೋರ್ಟ್, ಪತ್ನಿಯು ಪತಿಯ ಅಜಿರ್ಗೆ ಉತ್ತರ ನೀಡಿದ ಸಂದಭರ್ದಲ್ಲಿ ಪತಿಯ ಹೇಳಿಕೆ ಪರಿಗಣಿಸಿಯೇ ನ್ಯಾಯಾಲಯ ತೀಮಾರ್ನ ಕೈಗೊಳ್ಳಬೇಕಾಗುತ್ತದೆ. ಪ್ರಕರಣದಲ್ಲಿ ಕೌಟುಂಬಿಕ ನ್ಯಾಯಾಲಯದಿಂದ ನಿತಾ್ಯಗೆ ನೋಟಿಸ್ ಜಾರಿಗೊಳಿಸಲಾಗಿದೆ. ಆ ಅರ್ಜಿ ಸಂಬಂಧ ಅಜಿರ್ದಾರೆ ತನ್ನ ಪರ ವಕೀಲರನ್ನು ನಿಯೋಜಿಸಿಕೊಂಡಿದ್ದರೂ ಯಾವುದೇ ಆಕ್ಷೇಪಣೆ ಸಲ್ಲಿಸಿಲ್ಲ. ಇದರಿಂದ ಪತ್ನಿ ಸತತವಾಗಿ ಎರಡು ವಷರ್ ಹೆಚ್ಚು ಸಮಯದಿಂದ ಪತಿಯಿಂದ ದೂರ ಇರುವ ಕಾರಣಕ್ಕೆ ಪತಿಯನ್ನು ಪರಿತ್ಯಾಗ ಮಾಡಿರುವುದು ಸಾಬೀತಾಗುತ್ತದೆ. ಅದರಂತೆ ಕೌಟುಂಬಿಕ ನ್ಯಾಯಾಲಯ ಆದೇಶ ಸೂಕ್ತವಾಗಿದ್ದು, ಅದರಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯತೆ ಕಂಡು ಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟು ಮೇಲ್ಮನವಿ ವಜಾಗೊಳಿಸಿದೆ.
