Asianet Suvarna News Asianet Suvarna News

ಬೆಂಗಳೂರು: ಮಹಾರಾಣಿ ಕ್ಲಸ್ಟರ್‌ ವಿವಿ ಕುಲಪತಿಗೆ ಹೈಕೋರ್ಟ್‌ ತರಾಟೆ

ಸೇವೆಯಿಂದ ನಿವೃತ್ತರಾಗುವ ಹೆಸರನ್ನು ಸೂಚಿಸಿ 2022ರ ಜ.14ರಂದು ಸರ್ಕಾರ ಬಿಡುಗಡೆ ಮಾಡಿದ ಪಟ್ಟಿ ಮತ್ತು ವೇತನ ತಡೆ ಹಿಡಿದಿರುವ ಕ್ರಮ ಆಕ್ಷೇಪಿಸಿ ಡಾ। ಜಿ.ಕೃಷ್ಣ ರೆಡ್ಡಿ ಮತ್ತು ಡಾ। ಎಚ್‌.ಪ್ರಕಾಶ್‌ ಅವರು ಸಲ್ಲಿಸಿದ್ದ ಪ್ರತ್ಯೇಕ ತಕರಾರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್‌ ಗೌಡ ಅವರ ಪೀಠ, ಅ.13ರಂದು ಈ ನಿರ್ದೇಶನ ನೀಡಿದೆ.

High Court of Karnataka Slams Maharani Cluster University Chancellor grg
Author
First Published Oct 19, 2023, 3:00 AM IST | Last Updated Oct 19, 2023, 3:00 AM IST

ಬೆಂಗಳೂರು(ಅ.19):  ಸರ್ಕಾರದ ಆದೇಶಿಸಿದ್ದರೂ ಮಹಾರಾಣಿ ಕ್ಲಸ್ಟರ್‌ ವಿಶ್ವ ವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ। ಜಿ.ಕೃಷ್ಣ ರೆಡ್ಡಿ ಮತ್ತು ಪ್ರಾಂಶುಪಾಲರಾಗಿದ್ದ ಡಾ। ಎಚ್‌.ಪ್ರಕಾಶ್‌ ಅವರಿಗೆ 15 ತಿಂಗಳಿಂದ ವೇತನ ಬಿಡುಗಡೆ ಮಾಡದ ವಿಶ್ವವಿದ್ಯಾಲಯದ ಕುಲಪತಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಹೈಕೋರ್ಟ್‌, ಕೂಡಲೇ ವೇತನ ಬಿಡುಗಡೆ ಮಾಡದಿದ್ದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಸೇವೆಯಿಂದ ನಿವೃತ್ತರಾಗುವ ಹೆಸರನ್ನು ಸೂಚಿಸಿ 2022ರ ಜ.14ರಂದು ಸರ್ಕಾರ ಬಿಡುಗಡೆ ಮಾಡಿದ ಪಟ್ಟಿ ಮತ್ತು ವೇತನ ತಡೆ ಹಿಡಿದಿರುವ ಕ್ರಮ ಆಕ್ಷೇಪಿಸಿ ಡಾ। ಜಿ.ಕೃಷ್ಣ ರೆಡ್ಡಿ ಮತ್ತು ಡಾ। ಎಚ್‌.ಪ್ರಕಾಶ್‌ ಅವರು ಸಲ್ಲಿಸಿದ್ದ ಪ್ರತ್ಯೇಕ ತಕರಾರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್‌ ಗೌಡ ಅವರ ಪೀಠ, ಅ.13ರಂದು ಈ ನಿರ್ದೇಶನ ನೀಡಿದೆ.

ಬೀದಿ ನಾಯಿಗಳ ಸಂತಾನಹರಣ ವರದಿ ಕೊಡದ ಸರ್ಕಾರ: ಹೈಕೋರ್ಟ್‌ ತರಾಟೆ

ಅರ್ಜಿದಾರರಿಗೆ ವೇತನ ಪಾವತಿ ಮಾಡಲು 2023ರ ಮಾ.2 ಮತ್ತು ಜು.27ರಂದು ರಾಜ್ಯ ಸರ್ಕಾರ ಆದೇಶಿಸಿತ್ತು. ಅರ್ಜಿದಾರರನ್ನು ಮಹಾರಾಣಿ ಕಸ್ಟರ್‌ ವಿಶ್ವವಿದ್ಯಾಲಯದ ಉದ್ಯೋಗಿಗಳಾಗಿ ವಿಲೀನ ಮಾಡಿ 2022ರ ಜೂ.30ರಂದು ಸರ್ಕಾರ ಆದೇಶಿಸಿದೆ. ಹೀಗಿದ್ದರೂ ಅರ್ಜಿದಾರರ ವೇತನವನ್ನು ಬಿಡುಗಡೆ ಮಾಡಿಲ್ಲ. ಇನ್ನೂ ಎಚ್‌ಆರ್‌ಎಂಎಸ್‌ ಮಾದರಿಯಲ್ಲಿ ಬಿಲ್‌ಗಳನ್ನು ಸಲ್ಲಿಸುವಲ್ಲಿ ಕೆಲವು ತೊಂದರೆಯಾಗಿರುವ ಮತ್ತು ಕೆಲವೊಂದು ಪರಿಶೀಲನೆ ನಡೆಯಬೇಕಿರುವ ಕಾರಣದಿಂದ ವೇತನ ಬಿಡುಗಡೆ ಮಾಡಲಾಗುತ್ತಿಲ್ಲ ಎಂಬ ವಿಶ್ವ ವಿದ್ಯಾಲಯ ಕುಲಪತಿ ಅವರ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ..

ಎಚ್‌ಆರ್‌ಎಂಎಸ್‌ ಮಾದರಿಯಲ್ಲಿ ಬಿಲ್‌ ಸಲ್ಲಿಸಲು ಸಾಧ್ಯವಿದೆ. ಈ ವಿಚಾರದಲ್ಲಿ ಕುಲಪತಿ ಮತ್ತು ರಿಜಿಸ್ಟ್ರಾರ್‌ ಅವರು ಯಾವುದೇ ಕ್ರಮ ಜರುಗಿಸಿಲ್ಲ ಎಂದು 2023ರ ಅ.11ರಂದು ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ತಿಳಿಸಿದ್ದಾರೆ. ಎಚ್‌ಆರ್‌ಎಂಎಸ್‌ ಮಾದರಿಯಲ್ಲಿ ಬಿಲ್‌ ಸಲ್ಲಿಸಲು ಅಂತಿಮ ಕ್ರಮ ಜರುಗಿಸಲು ಕುಲಪತಿ ನಿರಾಕರಿಸುತ್ತಿರುವುದು ಖಂಡನೀಯ. ಉದ್ದೇಶಪೂರ್ವಕವಾಗಿ ವೇತನ ತಡೆಹಿಡಿಯುವ ಕ್ರಮ ಎಂಬುದಾಗಿ ಇದು ತೋರುತ್ತಿದೆ. ಮೇಲಾಗಿ ಅರ್ಜಿದಾರರಿಗೆ ಕುಲಪತಿ ವೇತನ ಪಾವತಿಸುತ್ತಿಲ್ಲ. ಸರ್ಕಾರ ಹಣ ಬಿಡುಗಡೆ ಮಾಡಿದ ಪರಿಣಾಮ ವೇತನ ಪಾವತಿ ಮಾಡಲಾಗುತ್ತಿದೆ ಎಂದು ನ್ಯಾಯಪೀಠ ಖಾರವಾಗಿ ನುಡಿದಿದೆ.

ಹೆಂಡತಿ ಅನೈತಿಕ ಸಂಬಂಧವಿಟ್ಟುಕೊಂಡು ಜೀವನಾಂಶ ಕೇಳುವಂತಿಲ್ಲ: ಹೈಕೋರ್ಟ್

ಅಂತಿಮವಾಗಿ, ಅರ್ಜಿದಾರರ ವೇತನ ಬಿಡುಗಡೆಗೆ ಸಂಬಂಧಿಸಿದಂತೆ ಬಿಲ್‌ಗಳನ್ನು ಪರಿಷ್ಕೃತ ಎಚ್‌ಆರ್‌ಎಂಎಸ್‌ ಮಾದರಿಯಲ್ಲಿ ವಿಶ್ವವಿದ್ಯಾಲಯ ಮತ್ತು ಮಹಾರಾಣಿ ಮಹಿಳೆಯರ ವಿಜ್ಞಾನ ಕಾಲೇಜು ಪ್ರಾಂಶುಪಾಲರು ಸಲ್ಲಿಸಬೇಕು. ವೇತನ ಬಿಡುಗಡೆಗೆ ಕ್ರಮ ಜರುಗಿಸಬೇಕು. ತಪ್ಪಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ ಪೀಠ ವಿಚಾರಣೆಯನ್ನು ಅ.27ಕ್ಕೆ ಮುಂದೂಡಿದೆ.

ಹಿನ್ನೆಲೆ

ಮಹಾರಾಣಿ ಕಾಲೇಜು ಅನ್ನು ಕ್ಲಸ್ಟರ್‌ ವಿಶ್ವ ವಿದ್ಯಾಲಯಯನ್ನಾಗಿ ಪರಿವರ್ತಿಸಿ 2019ರಲ್ಲಿ ಆದೇಶಿಸಿದ್ದ ಸರ್ಕಾರ, ಅಲ್ಲಿನ 64 ಸಿಬ್ಬಂದಿಯನ್ನು ವಿಶ್ವವಿದ್ಯಾಲಯದ ಸಿಬ್ಬಂದಿಯಾಗಿ ವಿಲೀನಗೊಳಿಸಿ 2022ರ ಜೂ.30ರಂದು ಆದೇಶಿಸಿದೆ. ಇದಕ್ಕೂ ಮುನ್ನ 2022ರ ಜ.14ರಂದು ಆ ವರ್ಷ ಸೇವೆಯಿಂದ ಬಿಡುಗಡೆಯಾಗುವ ಸಿಬ್ಬಂದಿಯ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಆ ಪಟ್ಟಿಯಲ್ಲಿ ಅರ್ಜಿದಾರರ ಹೆಸರಿತ್ತು. ಆ ಪಟ್ಟಿಯನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಅರ್ಜಿದಾರರು, ಕಾಲೇಜು ಸಿಬ್ಬಂದಿಯಾಗಿದ್ದರೆ 60 ವರ್ಷಕ್ಕೆ ಸೇವೆಯಿಂದ ನಿವೃತ್ತರಾಗುತ್ತಿದ್ದೇವು. ಆದರೆ, ಕ್ಲಸ್ಟರ್‌ ವಿಶ್ವವಿದ್ಯಾಲಯ ಸಿಬ್ಬಂದಿಯಾಗಿ ವಿಲೀನವಾದ ನಂತರ ನಿವೃತ್ತಿ ವಯಸ್ಸು 62 ಆಗಿದೆ. ಇದೇ ಕಾರಣ ಮುಂದಿಟ್ಟುಕೊಂಡು 2022ರ ಜಲೈನಿಂದ ತಮಗೆ ವೇತನ ಪಾವತಿಸದೆ ತಡೆಹಿಡಿಯಲಾಗಿದೆ ಎಂದು ಆಕ್ಷೇಪಿಸಿದ್ದರು.

Latest Videos
Follow Us:
Download App:
  • android
  • ios