ರಾಮನಗರ ಪಟ್ಟಣದ ಗೌಸಿಯಾ ನಗರ ನಿವಾಸಿಯಾದ ವಕೀಲ ಚಾನ್ ಪಾಷಾ ಐಜೂರ್ ಸಲ್ಲಿಸಿದ್ದ ಅರ್ಜಿ ವಿಚಾ ರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಆರೋ ಪಗಳನ್ನು ಕೈ ಬಿಡಲು ಕೋರಿ ಅರ್ಜಿ ವಿಚಾರಣಾ ನ್ಯಾಯಾ ಲಯದ ಮುಂದೆ ಅರ್ಜಿ ಸಲ್ಲಿಸಿ. ಎಫ್‌ಐಆರ್ ರದ್ದುಪಡಿಸಲ್ಲ. ತಡೆಯಾಜ್ಞೆಯೂ ನೀಡಲ್ಲ ಎಂದು ಮೌಖಿಕವಾಗಿ ತಿಳಿಸಿ ಅರ್ಜಿ ಇತ್ಯರ್ಥಪಡಿಸಿದರು. 

ಬೆಂಗಳೂರು(ನ.13): ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ಕಲ್ಪಿಸಿ ತೀರ್ಪು ಹೊರಡಿಸಿದ ಉ.ಪ್ರದೇಶದ ಜಿಲ್ಲಾ ನ್ಯಾಯಾಧೀಶರ ಬಗ್ಗೆ ಫೇಸ್‌ಬುಕ್‌ನಲ್ಲಿ ಅವ ಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ರಾಮನಗರದ ವಕೀಲ ಚಾನ್ ಪಾಷಾ ಐಜೂ‌ರ್ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದು ಪಡಿಸಲು ಹೈಕೋರ್ಟ್ ನಿರಾಕರಿಸಿದೆ. 

ರಾಮನಗರ ಪಟ್ಟಣದ ಗೌಸಿಯಾ ನಗರ ನಿವಾಸಿಯಾದ ವಕೀಲ ಚಾನ್ ಪಾಷಾ ಐಜೂರ್ ಸಲ್ಲಿಸಿದ್ದ ಅರ್ಜಿ ವಿಚಾ ರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಆರೋ ಪಗಳನ್ನು ಕೈ ಬಿಡಲು ಕೋರಿ ಅರ್ಜಿ ವಿಚಾರಣಾ ನ್ಯಾಯಾ ಲಯದ ಮುಂದೆ ಅರ್ಜಿ ಸಲ್ಲಿಸಿ. ಎಫ್‌ಐಆರ್ ರದ್ದುಪಡಿಸಲ್ಲ. ತಡೆಯಾಜ್ಞೆಯೂ ನೀಡಲ್ಲ ಎಂದು ಮೌಖಿಕವಾಗಿ ತಿಳಿಸಿ ಅರ್ಜಿ ಇತ್ಯರ್ಥಪಡಿಸಿದರು. 

ಪತ್ನಿಯ ಅಕ್ರಮ ಸಂಬಂಧ ಪತಿ ಸಾಯುವುದಕ್ಕೆ ಪ್ರಚೋದನೆಯಲ್ಲ: ಹೈಕೋರ್ಟ್ ಆದೇಶ

ಅರ್ಜಿದಾರರ ಪರ ವಕೀಲರು ಎಫ್‌ಐಆರ್ ತಡೆ ನೀಡಲು ಕೋರಿದಾಗ ಪ್ರತಿಕ್ರಿಯಿಸಿದ ನ್ಯಾಯ ಮೂರ್ತಿಗಳು, ನಾನು ಅರ್ಜಿದಾರರ ವಿರು ದ್ಧದ ಎಫ್‌ಐಆ‌ರ್ ತಡೆ ನೀಡಲ್ಲ. ಪೋಸ್ಟ್‌ನಲ್ಲಿ ಭಯಾನಕ ಪದಗಳನ್ನು ಬಳಸಿದ್ದಾರೆ ಎಂದು ಗರಂ ಆದರು. ಅರ್ಜಿದಾರನ ಪರ ವಕೀಲರು, ಚಾನ್ ಪಾಷಾ ರಾಮನಗರದಲ್ಲಿ ವಕೀಲ ರಾಗಿದ್ದಾರೆ. ಪ್ರಕರಣ ಕುರಿತಂತೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. 

ತಮ್ಮ ಫೇಸ್ ಬುಕ್ ಹ್ಯಾಕ್ ಆಗಿದೆ. ಖಾತೆ ದುರ್ಬಳಕೆ ಮಾಡಿದ್ದಾರೆ ಎಂಬುದಾಗಿ ದೂರಿನಲ್ಲಿ ತಿಳಿಸಿದ್ದಾರೆ ಎಂದರು. ವಾದ ಒಪ್ಪದ ನ್ಯಾಯಮೂರ್ತಿಗಳು, ಆದರೂ ಪರವಾಗಿಲ್ಲ. ನಾನು ಮಾತ್ರ ಎಫ್‌ಐಆರ್ ತಡೆ ನೀಡಲ್ಲ. ಹೇಳಿಕೆ ನೀಡು ವುದಕ್ಕೂ ಇತಿ-ಮಿತಿ ಇರುತ್ತದೆ. ಈ ರೀತಿ ಹೇಳಿಕೆ ನೀಡಬಹುದೇ? ಏನ್ರಿ ಮೂತ್ರ ಅದು-ಇದು ಎಂದು ಹೇಳುವುದು? ನಿಜವಾಗಿಯೂ ಇದು ದುರ್ವತನೆ. ಪ್ರಕರಣದಲ್ಲಿ ನಾನು ಮಧ್ಯಪ್ರವೇಶಿಸುವುದಿಲ್ಲ. ನೀವು ವಿಚಾರಣಾ ನ್ಯಾಯಾಲಯದ ಮುಂದೆಯೇ ಆರೋಪ ಗಳನ್ನು ಕೈ ಬಿಡಲು ಕೋರಿ ಅರ್ಜಿ ಸಲ್ಲಿಸಿಕೊಳ್ಳಿ ಎಂದು ಅರ್ಜಿದಾರ ಪರ ವಕೀಲರಿಗೆ ಸೂಚಿಸಿತು.