ಹೈ ಕಮಾಂಡ್‌ ನಿರ್ಧಾರಕ್ಕೆ ಎಲ್ಲರೂ ತಲೆ ಬಾಗಬೇಕೆಂದ ಗೃಹ ಸಚಿವ ತಾಂಬೂಲ ಪ್ರಶ್ನೆ  ನಾನು ಅಲ್ಲಗೆಳೆಯುವುದಿಲ್ಲ  ಎಂದ ಆರಗ ಜ್ಞಾನೇಂದ್ರ ತುಮಕೂರು ಪೊಲೀಸ್‌ ಸಿಬ್ಬಂದಿಗಳ ಕರ್ತವ್ಯ ನಿಷ್ಠೆ ಶ್ಲಾಘನೀಯ  

ವರದಿ : ಮಹಂತೇಶ್‌ ಕುಮಾರ್‌, ಏಷ್ಯನೆಟ್‌ ಸುವರ್ಣ ನ್ಯೂಸ್‌ 

ತುಮಕೂರು (ಮೇ.25): ಟಿಕೆಟ್ ತಪ್ಪಿದ ವಿಚಾರವಾಗಿ ವಿಜಯೇಂದ್ರ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಅಲ್ಲದೆ ಇದು ಪಕ್ಷದ ಆದೇಶ, ಪಕ್ಷದ ನಿರ್ಣಯ ನಾವೆಲ್ಲರೂ ತಲೆಬಾಗಲೇ ಬೇಕು. ಇನ್ನು ತಾಂಬೂಲ ಪ್ರಶ್ನೆ (Tambula Prashne) ವಿಚಾರ ಅದು ಆ ಭಾಗದ ಜನರ ನಂಬಿಕೆ ವಿಚಾರ ಇದನ್ನು ನಾನು ಅಲ್ಲಗೆಳೆಯುವುದಿಲ್ಲ ಎಂದು ತುಮಕೂರಿನಲ್ಲಿ (Tumakuru) ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ವಿಜಯೇಂದ್ರ (BY Vijayendra) ನಮ್ಮ ಪಕ್ಷದ ಯುವನಾಯಕರು, ರಾಜ್ಯದ ಉಪಾಧ್ಯಕ್ಷರು, ಸದ್ಯ ವಿಧಾನ ಪರಿಷತ್ (vidhan parishad ) ಸ್ಥಾನಕ್ಕಿಂತ ಮೇಲಿದ್ದಾರೆ. ಜೊತೆಗೆ ಅವರ ನಿರ್ಣಯ ಏನು ಅನ್ನೋದನ್ನ ಅವರೇ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಒಬ್ಬರಿಗೆ ಟಿಕೆಟ್ ಕೊಡ್ಬೇಕು ಅಂದ್ರೆ ಪಕ್ಷದಲ್ಲಿ ಬಹಳಷ್ಟು ಜನ ಆಕಾಂಕ್ಷಿಗಳು ಇರ್ತಾರೆ ಇದೆಲ್ಲಾವನ್ನು ಆಲೋಚನೆ ಮಾಡಿಯೇ ನಮ್ಮ ಹೈಕಮಾಂಡ್‌ ನಿರ್ಣಯ ಮಾಡಿದೆ. ಹೈ ಕಮಾಂಡ್‌ ನಿರ್ಣಯಕ್ಕೆ ವಿಜಯೇಂದ್ರ ಅವರ ಒಪ್ಪಿಗೆ ಕೂಡ ಇದೆ, ಇದರಲ್ಲಿ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕುವ ನಿರ್ಧಾರವಿಲ್ಲ, ಯಡಿಯೂರಪ್ಪನವರು ನಮ್ಮ ಮಹಾನ್ ನಾಯಕರು, ಪಕ್ಷ ಬೆಳೆಸಿದವರು, ನಾವು ಅವರನ್ನ ಯಾವುತ್ತು ಅಗೌರವಿಸುವಂತ ಯಾವ ಪ್ರಶ್ನೆಯು ಇಲ್ಲ ಎಂದರು. ಹೈಕಮಾಂಡ್‌ ನ ನಾಯಕರು ಟಿಕೆಟ್‌ ಯಾರಿಗೆ ನೀಡಬೇಕೆಂದು ನಿರ್ಣಯ ಮಾಡಿದ್ದಾರೆ. ಬೇರೆ ಬೇರೆ ಸಮುದಾಯಕ್ಕೆ ಟಿಕೆಟ್ ಹಂಚಿಕೆ ಮಾಡಿದ್ದಾರೆ. 

ತಾಂಬೂಲ ಪ್ರಶ್ನೆ ನಾನು ಅಲ್ಲಗಳೆಯುವುದಿಲ್ಲ: ಮಂಗಳೂರಿನಲ್ಲಿ ತಾಂಬೂಲ ಪ್ರಶ್ನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅರಗ ಜ್ಞಾನೇಂದ್ರ, ಅದು ಆ ಭಾಗದ ಜನರ ನಂಬಿಕೆ, ಹಾಗಾಗಿ ನಾನೇನು ಅದನ್ನ ಅಲ್ಲಗೆಳೆಯೋಕೆ ಆಗಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಲು ಮಂಗಳೂರು ಎಲ್ಲಾ ಸಿದ್ದತೆಗಳನ್ನ ಮಾಡಿಕೊಂಡಿದ್ದಾರೆ. ಮಸೀದಿಯ ರಿನೋವೆಷನ್ ಗೆ ಹೋದಾಗ ದೇವಾಲಯದ ಸ್ಟ್ರಚ್ಚರ್ ಅವಶೇಶ ಸಿಕ್ಕಿದೆ‌. ಅದರ ಬಗ್ಗೆ ನ್ಯಾಯಾಲಯ ಕೂಡಾ ತಡೆಯಾಜ್ಞೆ ನೀಡಿದೆ. ಆ ಕಾಮಗಾರಿಯನ್ನ ಮುಂದುವರಿಸಬಾರದು ಅಂತ ತಡೆಯಾಜ್ಞಾನೆ ನೀಡಿದೆ. ಈ ನಿಟ್ಟಿನಲ್ಲಿ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡುತ್ತಿದ್ದಾರೆ. 

CHITRADURGA; ಟೊಮ್ಯಾಟೊ ಬೆಲೆ ಗಗನಕ್ಕೇರಿದ್ರೂ ರೈತನಿಗೆ ತಪ್ಪದ ಸಂಕಷ್ಟ

ಪಿಎಸ್‌ಐ ನೇಮಕಾತಿ ಪರೀಕ್ಷೆ ಪ್ರಕರಣದ ತನಿಖೆ ಮುಂದುವರೆದಿದೆ. ಸಿಐಡಿ ಯಿಂದ ವಿಶೇಷ ರೀತಿಯಲ್ಲಿ ಕಾರ್ಯಚರಣೆ ಮಾಡ್ತಿದೆ, ಸಂಪೂರ್ಣ ಅಮೂಲಗ್ರವಾಗಿ ಬೇರು ಮಟ್ಟಕ್ಕೆ ಹೋಗಿ ತನಿಖೆ ಮಾಡುವಂತಹ ಕೆಲಸ ನಡೆಯುತ್ತಿದೆ. ಅದರಲ್ಲಿ ಯಾರು ಭಾಗಿಯಾಗಿದ್ದಾರೆ ಅವರನ್ನ ಅರೆಸ್ಟ್ ಮಾಡುವಂತಹ ಕೆಲಸವನ್ನ ಸಿಐಡಿ ಮಾಡಲಿದೆ. 

ಪೊಲೀಸರ ಕಾರ್ಯ ಶ್ಲಾಘನೀಯ: ತುಮಕೂರಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ವ್ಯಕ್ತಿಯನ್ನ ತಡೆಯಲು ಹೋದ ಪೊಲೀಸ್ ಸಿಬ್ಬಂದಿಗೆ ಬೆಂಕಿ ತಗುಲಿ ವಿಚಾರ ಗಂಭೀರವಾದ್ದು, ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರ 112 ನಂಬರ್‌ ಮೂಲಕ ಪೊಲೀಸರಿಗೆ ಮಾಹಿತಿ ಬರುತ್ತೆ, ಕೂಡಲೇ ಸ್ಥಳಕ್ಕೆ ಹೋಗುವ ಪೊಲೀಸರು ಆತ್ಮಹತ್ಯೆ ಯತ್ನಿಸಿದ ವ್ಯಕ್ತಿಯನ್ನು ರಕ್ಷಿಸಲು ಮುಂದಾಗುತ್ತಾರೆ. ಈ ವೇಳೆ ಆ ಇಬ್ಬರು ಪೊಲೀಸ್‌ ಸಿಬ್ಬಂದಿಗೆ ಬೆಂಕಿ ತಗುಲಿ ಗಂಭೀರ ಗಾಯವಾಗಿದೆ. ಆ ಪೊಲೀಸರ ಬಗ್ಗೆ ‌ ನನಗೆ ಅಭಿಮಾನ ಬರುತ್ತೆ.

Chamarajanagara ಕೆರೆ ತುಂಬಿದ್ದಕ್ಕೆ ಕ್ರೆಡಿಟ್, ಕಾಂಗ್ರೆಸ್-ಬಿಜೆಪಿ ಕೆಸರೆರಚಾಟ

ನಮ್ಮ ಪೊಲೀಸರನ್ನ ಬೇರೆ ಬೇರೆ ವಿಚಾರಕ್ಕೆ ಬೈಯ್ತಾರೆ, ಆದರೆ ಪೊಲೀಸರ ಇಂತಹ ಕಾರ್ಯ ಶ್ಲಾಘನೀಯ, ನಾವು ಅವರ ಕರ್ತವ್ಯನಿಷ್ಟೆಯನ್ನು ಮೆಚ್ಚಲೆ ಬೇಕು. ಇನ್ನೊಬ್ಬರ ಪ್ರಾಣ ಉಳಿಸಲು ತಮ್ಮ‌ ಪ್ರಾಣವನ್ನ ಒತ್ತೆ ಇಡ್ತಾರೆ ಅಂದ್ರೆ ನಮಗೆ ಹೆಮ್ಮೆ. ಆ ಪೊಲೀಸ್ ಸಿಬ್ಬಂದಿಗಳಿಬ್ಬರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ. ಅಷ್ಟು ವೆಚ್ಚವನ್ನ ಪೊಲೀಸ್ ಇಲಾಖೆ ವತಿಯಿಂದ ಬರಿಸಲಾಗುತ್ತೆ. ಆ ಪೊಲೀಸ್ ಸಿಬ್ಬಂದಿಗಳಿಬ್ಬರಿಗೆ 2 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. ಗುಣಮುಖವಾಗುವವರೆಗೆ ಆ ಪೊಲೀಸ್ ಸಿಬ್ಬಂದಿಗೆ ರಜೆ ಸಹಿತ ಸಂಬಳ ಭತ್ಯೆ ಕೊಡಲಾಗುತ್ತೆ ಎಂದು ತುಮಕೂರಿನಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.