Asianet Suvarna News Asianet Suvarna News

ಸಿಎಂ ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ನಡೆದ ಮಹತ್ವದ ಚರ್ಚೆಗಳು ಇವು...!

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು (ಭಾನುವಾರ) ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವರು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಸಭೆಯ ಮುಖ್ಯಾಂಶಗಳು ಕೆಳಗಿನಂತಿವೆ.

Here Is highlights of CM BS Yediyurappa Meeting On May 10th
Author
Bengaluru, First Published May 10, 2020, 6:47 PM IST

ಬೆಂಗಳೂರು, (ಮೇ.10): ಸಿಎಂ ಬಿಎಸ್‌ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೇರೆ ಬೇರೆ ದೇಶ ಹಾಗೂ ರಾಜ್ಯದಿಂದ ಕನ್ನಡಿಗರು ವಾಪಸ್ ಬರುತ್ತಿದ್ದು, ಅವರನ್ನು ಯಾವ ರೀತಿ ಕ್ವಾರಂಟೈನ್ ಮಾಡಬೇಕು ಅನ್ನೋ ಬಗ್ಗೆ ಚರ್ಚೆಗಳು ಆಗಿವೆ.

"

ಇಂದು (ಭಾನುವಾರ) ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆಯಲ್ಲಿ ಡಿಸಿಎಂಗಳಾದ ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ್, ಸಚಿವರಾದ ಆರ್. ಅಶೋಕ್, ಸುರೇಶ್ ಕುಮಾರ್, ಡಾ.ಕೆ. ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ಮೊದಲಾದವರು ಇದ್ದರು. ಹಾಗಾದ್ರೆ ಸಭೆಯಲ್ಲಿ ಏನೆಲ್ಲಾ ಮಾತುಕತೆಗಳಾದವು ಎನ್ನುವ ಪ್ರಮುಖಾಂಶಗಳು ಈ ಕೆಳಗಿನಂತಿವೆ.

ಅಮ್ಮಂದಿರಿಗೆ ವಿಶ್ವವೇ ಹೇಳಿತು ನಮನ; ದುಬೈನಲ್ಲಿ IPL ನಡೆಸಲು ಆಹ್ವಾನ; ಮೇ.10ರ ಟಾಪ್ 10 ಸುದ್ದಿ!

* ಹೊರ ರಾಜ್ಯದಿಂದ ಬರುವ ಕನ್ನಡಿಗರು‌ ನಿರ್ದಿಷ್ಟ ವ್ಯವಸ್ಥೆಯಡಿ ಬರುವಂತೆ ಮಾಡಬೇಕು. ರಾಜ್ಯಕ್ಕೆ ಬರುವವರು ಕಡ್ಡಾಯವಾಗಿ ಕ್ವಾರಂಟೈನ್ ನಲ್ಲಿರಬೇಕು. ಆನ್ ಲೈನ್ ನಲ್ಲಿ ರಿಜಿಸ್ಟರ್ ಮಾಡಬೇಕು. 

* ರಾಜ್ಯಕ್ಕೆ ಬರುವವರು‌ ಕಡ್ಡಾಯವಾಗಿ ರಾಜ್ಯದಿಂದ ಅನಿರ್ವಾಯವಾಗಿ ಹೊರ ಹೋಗಿ ಸಿಕ್ಕಿಹಾಕಿ ಕೊಂಡಿರುವವರಾಗಿರಬೇಕು. ಎಲ್ಲಿಗೆ ಬರುತ್ತೇವೆ ಮತ್ತು ಎಂದು ಬರುತ್ತೇವೆ ಎನ್ನುವುದನ್ನು ರಿಜಿಸ್ಟರ್ ಮಾಡಬೇಕು.

* ರಂಟೈನ್ ಸೌಲಭ್ಯಕ್ಕೆ‌ ಅನುಗುಣವಾಗಿ ಕರೆಸಿಕೊಳ್ಳಲಾಗುವುದು. ಬಂದ ತಕ್ಷಣ ಯಾರೂ ಅವರ ಊರಿಗೆ ಹೋಗುವಂತಿಲ್ಲ. ರಾಜ್ಯಕ್ಕೆ ಬಂದ ಎಲ್ಲರೂ 14 ದಿನ‌ ಕ್ವಾರಂಟೈನ್ ಆಗಲೇಬೇಕು. ಕ್ವಾರಂಟೈನ್ ಗೆ ಸಿದ್ದವಿದ್ದವರು ಮಾತ್ರ ನೋಂದಣಿ‌ ಮಾಡಿಕೊಳ್ಳಬೇಕು. 

ಹೊರ ರಾಜ್ಯದಿಂದ ರೈಲುಗಳಲ್ಲಿ ಬರುವವರಿಗೆ ರಾಜ್ಯ ಸರ್ಕಾರವೇ ವೆಚ್ಚ ಭರಿಸುತ್ತದೆ. ಬೇರೆ ರಾಜ್ಯದಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದರೂ ಇಲ್ಲಿಯು ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಲೇಬೇಕು ಎಂದು ತಿಳಿಸಲಾಗಿದೆ.

* ಇನ್ನು‌ ಮುಂದೆ ಬೇರೆ ರಾಜ್ಯದಲ್ಲಿ ಮೃತರಾದರೆ ಶವಗಳನ್ನು ರಾಜ್ಯಕ್ಕೆ ತರುವಂತಿಲ್ಲ. ಎಲ್ಲಿ ಮೃತರಾಗಿರುತ್ತಾರೋ ಅಲ್ಲಿಯೇ ಅಂತ್ಯ ಸಂಸ್ಕಾರ ಮಾಡಬೇಕು. ರಾಜ್ಯದಲ್ಲಿ ತೀರಿಕೊಂಡರೆ ತೀರಿಕೊಂಡ ಸ್ಥಳದಲ್ಲಿಯೇ ಅಂತ್ಯಕ್ರಿಯೆ ಮಾಡಬೇಕು.

"

Follow Us:
Download App:
  • android
  • ios