ಚಾಮರಾಜನಗರ ದುರಂತದ ಬಳಿಕ ಎಚ್ಚೆತ್ತ ಸರ್ಕಾರ: ಮಹತ್ವದ ನಿರ್ಧಾರ ಕೈಗೊಂಡ ಸಿಎಂ

ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೇ 24 ಕೊರೋನಾ ಸೋಂಕಿತರು ಸಾವನ್ನಪ್ಪಿದ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಆಕ್ಸಿಜನ್ ತಯಾರಿಕರು ಜೊತೆ ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ ಸಿಎಂ ತೆಗೆದುಕೊಂಡ ನಿರ್ಧಾರಗಳು ಈ ಕೆಳಗಿನಂತಿವೆ.

here Is Cm Yediyurappa Meeting  highlights about oxygen rbj

ಬೆಂಗಳೂರು, (ಮೇ.03): ಚಾಮರಾಜನಗರ ಜಿಲ್ಲೆಯಲ್ಲಿ 24 ರೋಗಿಗಳು ಆಕ್ಸಿಜನ್ ಕೊರತೆಯಿಂದ ಸಾವಪ್ಪಿರುವ ದುರ್ಘಟನೆ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಿದರು.

 ಆಕ್ಸಿಜನ್ ಉತ್ಪಾದನಾ ಸಂಸ್ಥೆಗಳು ಕೂಡ ಭಾಗಿಯಾಗಿರುವ ಈ ಸಭೆಯಲ್ಲಿ ಆಕ್ಸಿಜನ್ ತಯಾರಿಕೆ ಮತ್ತು ಆಸ್ಪತ್ರೆಗಳಿಗೆ ಪೂರೈಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು.

ಸಭೆಯಲ್ಲಿ  ಗೃಹಸಚಿವ ಬಸವರಾಜ್ ಬೊಮ್ಮಾಯಿ, ಮುಖ್ಯ ಕಾರ್ಯದರ್ಶಿ ರವಿಕುಮಾರ್, ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ರು.

'ಚಾಮರಾಜನಗರದಲ್ಲಿ ಸತ್ತದ್ದು 24 ಅಲ್ಲ, 34 ಮಂದಿ: ಅಧಿಕಾರಿಗಳು ಮಾಹಿತಿ ಮುಚ್ಚಿಟ್ಟಿದ್ದಾರೆ'

 ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಇಲ್ಲದಂತೆ ಮಾಡಲು ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿರುವ ಸಿಎಂ, ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಘಟನೆ ಯಾವುದೇ ಜಿಲ್ಲೆಯಲ್ಲಿ ಮರುಕಳಿಸದಂತೆ ಎಚ್ಚರ ವಹಿಸಬೇಕೆಂದು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಜಿಲ್ಲಾ ಆಸ್ಪತ್ರೆಗಳ ಸ್ಥಿತಿ ಗತಿ ಬಗ್ಗೆ ವರದಿ ಸಂಗ್ರಹ ಮಾಡುವಂತೆ, ಔಷಧಿ ಕೊರತೆಯೂ ಎದುರಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

ಸಭೆಯಲ್ಲಿ ಕೈಗೊಂಡ ಹಲವು ನಿರ್ಧಾರಗಳು

1. ಕೇಂದ್ರದ ಆಕ್ಸಿಜನ್ ಕೋಟಾದಲ್ಲಿ ಯಾವುದೇ ರೀತಿ ಕಡಿತವಾಗದಂತೆ ಸರಬರಾಜು ಮಾಡಲು ಅಗತ್ಯ ಕ್ರಮ

2. ಆಕ್ಸಿಜನ್ ಟ್ಯಾಂಕರ್‍ಗಳ ಫಿಲ್ಲಿಂಗ್ ಅವಧಿಯನ್ನು ಕಡಿತಗೊಳಿಸಲು ಕ್ರಮ ...

3. ಆಕ್ಸಿಜನ್ ಟ್ಯಾಂಕರ್‍ಗಳ ತಡೆರಹಿತ ಪ್ರಯಾಣಕ್ಕೆ ಗ್ರಿನ್ ಕಾರಿಡಾರ್‍ಗಳನ್ನು ಒದಗಿಸುವುದು...

4. ಟೋಲ್‍ಗಳಲ್ಲಿ ಅನಗತ್ಯ ತಡೆರಹಿತ ಪ್ರಯಾಣಕ್ಕೆ ಕ್ರಮ

5. ನೈಟ್ರೋಜನ್, ಆರ್ಗನ್ ಅನಿಲಗಳ ಸಾಗಣೆ ಟ್ಯಾಂಕರ್‍ಗಳನ್ನು ಆಕ್ಸಿಜನ್ ಸಾಗಣೆಗೆ ಪರಿವರ್ತಿಸಲು ಕ್ರಮ...

6. ಎಲ್‍ಪಿಜಿ ಟ್ಯಾಂಕರ್‍ಗಳ ಚಾಲಕರನ್ನು ಆಕ್ಸಿಜನ್ ಪೂರೈಕೆಗೆ ಬಳಸಿಕೊಳ್ಳುವುದು...

7. ಆಕ್ಸಿಜನ್ ಉತ್ಪಾದಕರು ಮತ್ತು ಸರಬರಾಜುದಾರರು ಆಕ್ಸಿಜನ್ ಸರಬರಾಜಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದು..

8.ಲಭ್ಯವಿರುವ ಟ್ಯಾಂಕರ್‌ಗಳನ್ನು ಗರಿಷ್ಠ ಪ್ರಮಾಣದಲ್ಲಿ‌ ಬಳಸಿಕೊಳ್ಳಲು ನಿರ್ಧಾರ...

Latest Videos
Follow Us:
Download App:
  • android
  • ios