ಇಲ್ಲೊಂದು ಕೋಳಿ ಕೇವಲ 10 ದಿನಗಳಲ್ಲಿ ಬರೋಬ್ಬರಿ 35 ಮೊಟ್ಟೆಗಳನ್ನಿಟ್ಟು ಎಲ್ಲರನ್ನೂ ಬೆಕ್ಕಸ ಬೆರಗಾಗಿಸಿದೆ. 

ಚಿತ್ರದುರ್ಗ[ಜ.24]: ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನ ಹುಚ್ಚವನಹಳ್ಳಿ ಗ್ರಾಮದಲ್ಲಿ 8 ತಿಂಗಳಿಂದ ಸಾಕಿದ್ದ ಕೋಳಿಯೊಂದು ಬರೋಬ್ಬರಿ 35 ಮೊಟ್ಟೆ ಇಟ್ಟು ಅಚ್ಚರಿ ಮೂಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗುರುವಾರ ಬೆಳಗ್ಗೆ ಹುಚ್ಚವನಹಳ್ಳಿ ಗ್ರಾಮದ ಯಲ್ಲಮ್ಮ ಎಂಬುವರ ಮನೆಯಲ್ಲಿ ಸಾಕಿದ್ದ ಕೋಳಿಯೇ ಹೀಗೆ ಕೇವಲ 10 ದಿನಗಳಲ್ಲಿ 35 ಮೊಟ್ಟೆ ಇಟ್ಟು ಗ್ರಾಮದ ಜನರೆಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದೆ.