ಬರ್ತಡೇ ಪಾರ್ಟಿಗೆಂದು ಅಳವಡಿಕೆ ಮಾಡಲಾಗಿದ್ದ ಹೀಲಿಯಂ ಬಲೂನ್ ಬ್ಲಾಸ್ಟ್ ಆಗಿ ಐವರಿಗೆ ಗಾಯವಾಗಿದೆ. ಓರ್ವ ವ್ಯಕ್ತಿ‌ ಸೇರಿಂದಂತೆ ಮೂವರು ಮಕ್ಕಳಿಗೆ ಗಂಭೀರ ಗಾಯವಾಗಿದೆ.

ಬೆಂಗಳೂರು (ಅ.01): ಬೆಂಗಳೂರು ಹೊರವಲಯದಲ್ಲಿ ಹುಟ್ಟುಹಬ್ಬದ ಆಚರಣೆ ವೇಳೆ ಅವಘಡ ಸಂಭವಿಸಿದೆ. ಹಿಲೇನಿಯಮ್ ಬ್ಲಾಸ್ಟ್ ಆಗಿ ಐವರಿಗೆ ಗಾಯವಾಗಿದೆ. ನಿನ್ನೆ ಹುಟ್ಟಹಬ್ಬದ ಆಚರಣೆ ವೇಳೆ ಘಟನೆ ಸಂಭವಿಸಿದ್ದು, ಓರ್ವ ವ್ಯಕ್ತಿ‌ ಸೇರಿಂದಂತೆ ಮೂವರು ಮಕ್ಕಳಿಗೆ ಗಾಯವಾಗಿದೆ.

ಮಗನ ಹುಟ್ಟುಹಬ್ಬದ‌ ಪ್ರಯುಕ್ತ ಹಿಲೇನಿಯಮ್ ಗ್ಯಾಸ್ ತುಂಬಿಸಿದ್ದ ಬಲೂನ್ ಬಳಸಲಾಗಿತ್ತು. ಆದರೆ, ಈ ವೇಳೆ ಕೇಕ್ ಕತ್ತರಿಸುವ ಮುನ್ನ ಕ್ಯಾಂಡಲ್‌ ಹಚ್ಚಲು ಲೈಟರ್‌ ಹಚ್ಚಿದ ತಕ್ಷಣವೇ ಅಕ್ಕಪಕ್ಕದಲ್ಲಿ ಬಳಕೆ ಮಾಡಲಾಗಿದ್ದ ಹೀಲಿಯಂ ಬಲೂನ್‌ಗಳು ಬ್ಲಾಸ್ಟ್‌ ಆಗಿವೆ. ಈ ಘಟನೆಯಲ್ಲಿ ವಿಜಯ್ ಕುಮಾರ್ (44) ಧ್ಯಾನ್(7) , ಸಂಜಯ್(8), ಸೋಹಿಲಾ (3) ಗಾಯಗೊಂಡಿದ್ದಾರೆ. ದೇಹದದಲ್ಲಿ ಕೈ-ಕಾಲು ಮುಖದ ಭಾಗಗಳು ಸುಟ್ಟು ಹೋಗಿದ್ದು, ಚರ್ಮವು ಸುಟ್ಟು ಹೋಗಿದೆ.

ಸ್ಯಾಂಡಲ್‌ವುಡ್‌ ನಟ ನಾಗಭೂಷಣ್‌ ಕಾರು ಅಪಘಾತ: ಮಹಿಳೆ ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ

ಈ ಘಟನೆಯು ಕಾಡುಗೋಡಿ ಬಳಿಯ ಬೆಲತ್ತೂರಿನಲ್ಲಿ ನಡೆದಿದೆ. ಈ ಘಟನೆ ಸಂಬಂಧ ಗಾಯಾಳುಗಳಿಗೆ ವಿಕ್ಟೋರಿಯಾ ಬರ್ನಿಂಗ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳ ಭೇಟಿ ಮಾಡಿ ಮಾಹಿತಿ ಕಲೆಹಾಕಿದ್ದಾರೆ. ಇನ್ನು ಆಸ್ಪತ್ರೆಯಲ್ಲಿ ಗಾಯಾಳುಗಳಲ್ಲಿ ಇಬ್ಬರು ಮಕ್ಕಳಿಗೆ ದೇಹದ ಮೇಲಿನ ಶೇ.30ಕ್ಕೂ ಹೆಚ್ಚು ಭಾಗದ ಚರ್ಮವು ಸುಟ್ಟಿದ್ದು, ಚಿಕಿತ್ಸೆ ಮುಂದುವರೆಸಲಾಗುತ್ತಿದೆ. ಆದರೆ, ಬೆಂಕಿ ಸಮೀಪದಲ್ಲಿ ಹೀಲಿಯಂ ಬಲೂನ್‌ ಬಳಕೆ ಮಾಡಿರುವುದೇ ಇದಕ್ಕೆಲ್ಲ ಕಾರಣ ಎಂದು ಹೇಳಲಾಗುತ್ತಿದೆ.