ಮಂಗಳವಾರ ರಾಜ್ಯದ ಉತ್ತರ ಕನ್ನಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದಿದೆ. ಉತ್ತರ ಕನ್ನಡದ ಸಿದ್ದಾಪುರ, ಕ್ಯಾಸಲ್ ರಾಕ್, ಯಲ್ಲಾಪುರ, ಕದ್ರಾ, ಕುಮಟಾ, ಮಂಕಿ, ಶಿರಾಲಿ ಪಿಟಿಓ ಹಾಗೂ ಹೊನ್ನಾವರದಲ್ಲಿ ಅತ್ಯುತ್ತಮ ಮಳೆಯಾಗಿದೆ. ದಕ್ಷಿಣ ಕನ್ನಡದ ಸುಬ್ರಹ್ಮಣ್ಯ, ಉಪ್ಪಿನಂಗಡಿ, ಮಂಗಳೂರು, ಬೆಳ್ತಂಗಡಿ, ಪುತ್ತೂರುನಲ್ಲಿ ಭಾರೀ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಬೆಂಗಳೂರು(ಜು.26): ನೈಋುತ್ಯ ಮುಂಗಾರು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜುಲೈ 26ರಂದು ಕಲಬುರಗಿ, ಉಡುಪಿ, ಬೀದರ, ಚಿಕ್ಕಮಗಳೂರು, ಬೆಳಗಾವಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಚ್’ ಹಾಗೂ ಹಾಸನ, ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಿಗೆ ‘ಯಲ್ಲೋ ಅಲರ್ಟ್’ ಘೋಷಿಸಲಾಗಿದೆ. ಜುಲೈ 27ರಂದು ವಿಜಯಪುರ, ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು ಜಿಲ್ಲೆಗಳಿಗೆ ‘ಯಲ್ಲೋ ಅಲರ್ಚ್ ನೀಡಲಾಗಿದೆ. ಜುಲೈ 28ರಂದು ಉಡುಪಿ, ಕೊಡಗು, ಉತ್ತರ ಕನ್ನಡ ಜಿಲ್ಲೆಗಳಿಗೆ ‘ಯಲ್ಲೋ ಅಲರ್ಟ್’ ಘೋಷಿಸಲಾಗಿದೆ. ಮುಂದಿನ ನಾಲ್ಕು ದಿನಗಳ ಕಾಲ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಕರ್ನಾಟಕದಲ್ಲಿ ಮಳೆಗೆ ಮತ್ತೆ 5 ಬಲಿ: 9 ಜಿಲ್ಲೆಗಳಿಗೆ ಇಂದು ಆರೆಂಜ್ ಅಲರ್ಟ್
ಐದು ದಿನಗಳ ಕಾಲ ಬಿರುಗಾಳಿಯ ವೇಗ ಗಂಟೆಗೆ 55 ಕಿ.ಮೀ ಇರಲಿದೆ.
ಮಂಗಳವಾರ ರಾಜ್ಯದ ಉತ್ತರ ಕನ್ನಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದಿದೆ. ಉತ್ತರ ಕನ್ನಡದ ಸಿದ್ದಾಪುರ, ಕ್ಯಾಸಲ್ ರಾಕ್, ಯಲ್ಲಾಪುರ, ಕದ್ರಾ, ಕುಮಟಾ, ಮಂಕಿ, ಶಿರಾಲಿ ಪಿಟಿಓ ಹಾಗೂ ಹೊನ್ನಾವರದಲ್ಲಿ ಅತ್ಯುತ್ತಮ ಮಳೆಯಾಗಿದೆ. ದಕ್ಷಿಣ ಕನ್ನಡದ ಸುಬ್ರಹ್ಮಣ್ಯ, ಉಪ್ಪಿನಂಗಡಿ, ಮಂಗಳೂರು, ಬೆಳ್ತಂಗಡಿ, ಪುತ್ತೂರುನಲ್ಲಿ ಭಾರೀ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಸಿದ್ದಾಪುರದಲ್ಲಿ ರಾಜ್ಯದಲ್ಲೇ ಗರಿಷ್ಠ 20 ಸೆಂಮೀ ಮಳೆ:
ಸಿದ್ದಾಪುರ, ಭಾಗಮಂಡಲ ತಲಾ 20 ಸೆಂ.ಮೀ, ಕ್ಯಾಸಲ್ ರಾಕ್ 19 ಸೆಂ.ಮೀ, ಗೇರುಸೊಪ್ಪೆ 18 ಸೆಂ.ಮೀ, ಯಲ್ಲಾಪುರ, ಸುಬ್ರಹ್ಮಣ್ಯ ತಲಾ 17 ಸೆಂ.ಮೀ, ಮಾಣಿ, ಕೊಟ್ಟಿಗೆಹಾರ ತಲಾ 16 ಸೆಂ.ಮೀ, ನಾಪೋಕ್ಲು 15 ಸೆಂ.ಮೀ, ಕದ್ರಾ, ಕುಮಟಾ, ಮಂಕಿ, ಹುಂಚದಕಟ್ಟೆ, ಮೂರ್ನಾಡು ತಲಾ 14 ಸೆಂ.ಮೀ, ಶಿರಾಲಿ ಪಿಟಿಓ, ಹೊನ್ನಾವರ, ಕೊಲ್ಲೂರು, ತಾಳಗುಪ್ಪ, ಸೋಮವಾರಪೇಟೆ, ಕಮ್ಮರಡಿ, ಕೊಪ್ಪ ತಲಾ 13 ಸೆಂ.ಮೀ, ಉಪ್ಪಿನಂಗಡಿ, ಲಿಂಗನಮಕ್ಕಿ ತಲಾ 12 ಸೆಂ.ಮೀ, ಉಡುಪಿಯ ಸಿದ್ದಾಪುರ, ಗೋಕರ್ಣ, ಮಂಚಿಕೆರೆ, ಪುತ್ತೂರು, ಬೆಳ್ತಂಗಡಿ, ಧರ್ಮಸ್ಥಳ ತಲಾ 11 ಸೆಂ.ಮೀ, ಮಂಗಳೂರು ವಿಮಾನನಿಲ್ದಾಣ, ಕಳಸ, ಜಯಪುರ ತಲಾ 10 ಸೆಂ.ಮೀ ಮಳೆ ಸುರಿದಿದೆ.