ಬೆಂಗ್ಳೂರು ಸೇರಿ ರಾಜ್ಯಾದ್ಯಂತ ಮುಂದಿನ 3 ದಿನ ಭಾರೀ ಮಳೆ!

ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ಹಾವೇರಿ, ದಾವಣಗೆರೆ, ಕೊಡಗು, ಉಡುಪಿ, ತುಮಕೂರು, ಬಾಗಲಕೋಟೆ, ಧಾರವಾಡ, ಉತ್ತರ ಕನ್ನಡ, ಗದಗ, ಬೆಂಗಳೂರು, ರಾಮನಗರ, ಹಾಸನ , ಉಡುಪಿ ಹಾಗೂ ಚಿತ್ರದುರ್ಗ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಈ ಎಲ್ಲ ಜಿಲ್ಲೆಗಳಲ್ಲಿ ಯೆಲ್ಲೋ ಆಲರ್ಟ್ ಘೋಷಿಸಲಾಗಿದೆ. 
 
Heavy rain for the next 3 days across the state including Bengaluru grg

ಬೆಂಗಳೂರು(ಅ.22): ರಾಜ್ಯದಲ್ಲಿ ವರುಣನ ಆರ್ಭಟಕ್ಕೆ ಜನ ಹೈರಾಣಾಗಿದ್ದಾರೆ. ಹಿಂಗಾರು ಮಳೆ ಎಫೆಕ್ಟ್‌ನಿಂದ ರಾಜ್ಯಾದ್ಯಂತ ಹಲವು ಅವಾಂತರಗಳು ಸೃಷ್ಟಿಯಾಗಿವೆ. ರಾಜಧಾನಿ ಬೆಂಗಳೂರು ಸೇರಿದ ರಾಜ್ಯದ ಹಲವೆಡೆ ಮುಂದಿನ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಸಿಲಿಕಾನ್ ಸಿಟಿಯಲ್ಲೂ ಮುಂದಿನ ಮೂರು ದಿನ ಮಳೆಯಾಗುವ ಸಾಧ್ಯತೆ ಇದ್ದು, ಇಂದಿನಿಂದ ಮೂರು ದಿನ ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜ್ಯದ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. 
ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ಹಾವೇರಿ, ದಾವಣಗೆರೆ, ಕೊಡಗು, ಉಡುಪಿ, ತುಮಕೂರು, ಬಾಗಲಕೋಟೆ, ಧಾರವಾಡ, ಉತ್ತರ ಕನ್ನಡ, ಗದಗ, ಬೆಂಗಳೂರು, ರಾಮನಗರ, ಹಾಸನ , ಉಡುಪಿ ಹಾಗೂ ಚಿತ್ರದುರ್ಗ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಈ ಎಲ್ಲ ಜಿಲ್ಲೆಗಳಲ್ಲಿ ಯೆಲ್ಲೋ ಆಲರ್ಟ್ ಘೋಷಿಸಲಾಗಿದೆ. 

ಅಕ್ಟೋಬರ್ 24, 25ರಂದು ಕಡಲತೀರಕ್ಕೆ ಡಾನಾ ಚಂಡಮಾರುತ; 100-110 ಕಿಮೀ ವೇಗದಲ್ಲಿ ಗಾಳಿ ಜೊತೆ ಮಳೆ

ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಈ ಹಿನ್ನೆಲೆ ಈ ಎರಡು ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ ಮುನ್ಸೂಚನೆ ಆರೆಂಜ್ ಆಲರ್ಟ್ ಘೋಷಣೆ ಮಾಡಲಾಗಿದೆ. 

ಇನ್ನು ಬೆಂಗಳೂರಿನ ಬಾಲಾಜಿ ಲೇಔಟ್ ನಲ್ಲಿ ಪರಿಸ್ಥಿತಿ ಕೈ ಮೀರಿದೆ. ಹೌದು, ಪ್ರವಾಹದ ಹೊಡೆತಕ್ಕೆ ಕುಟುಂಬಗಳು ಅಕ್ಷರಶಃ ನಲುಗಿ ಹೋಗಿವೆ. ಪ್ರವಾಹದಲ್ಲಿ ಬೈಕ್, ಕಾರುಗಳು ಮುಳುಗಿವೆ. ಮಳೆಯ ನೀರಲ್ಲಿ ನಿವಾಸಿಗಳರು ಪರದಾಟ ನಡೆಸುತ್ತಿದ್ದಾರೆ. ಸಂಚಾರ ಮಾಡೋದಕ್ಕೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಮನೆಗಳಲ್ಲೂ ಕೂಡ ನೀರು ತುಂಬಿದೆ. 

Latest Videos
Follow Us:
Download App:
  • android
  • ios