ಬೆಂಗಳೂರು (ಅ.07): ಮಾಸ್ಕ್ ಹಾಕದವರ ವಿರುದ್ಧ 1000 ರು. ದಂಡ ಹಾಕಲು ಈಗಾಗಲೇ ನಿರ್ಧರಿಸಲಾಗಿದ್ದು, ದಂಡದ ಮೊತ್ತವನ್ನು ಯಾವುದೇ ಕಾರಣಕ್ಕೂ ಕಡಿಮೆ ಮಾಡುವುದಿಲ್ಲ ಎಂದು ಆರೋಗ್ಯ ಇಲಾಖೆ ನಿರ್ದೇಶಕ ಓಂ ಪ್ರಕಾಶ್ ಹೇಳಿದ್ದಾರೆ. 

ಕೊರೋನಾ ನಿಯಂತ್ರಣದ ಉದ್ದೇಶದಿಂದ ಮಾಸ್ಕ್ ಧರಿಸಲು ಹೇಳಲಾಗುತ್ತಿದೆ. ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸಬೇಕು. ಇದು ಅವರ ಕರ್ತವ್ಯ, ಮಾಸ್ಕ್ ಹಾಕಿದರೆ ದಂಡ ಹಾಕುವ ಪ್ರಶ್ನೆಯೇ ಇಲ್ಲ. ಇದನ್ನು ಜನರು ಅರಿಯಬೇಕು ಎಂದರು. 

ಕೋವಿಡ್ ಕಂಟ್ರೋಲ್‌ಗೆ ಕಾನುನು ಕ್ರಮ; ಟೆಸ್ಟ್‌ಗೆ ಒಪ್ಪದಿದ್ರೆ ಜೈಲುವಾಸ.! ...

ಇನ್ನು ಟೆಸ್ಟಿಂಗ್‌ಗೂ ಜನರು ನಿರಾಕರಿಸುತ್ತಿದ್ದಾರೆ. ಟೆಸ್ಟಿಂಗ್ ಮಾಡಿಸಿದರೆ ಮರಣ ಪ್ರಮಾಣ ಕಡಿಮೆಯಾಗುತ್ತದೆ. 

ಸೆಕ್ಷನ್ 4 ಎಪಿಡಮಿಕ್ ಆಕ್ಟ್ ಪ್ರಕಾರ ಮಾರ್ಕೆಟ್, ಮಾಲ್ ಥಿಯೇಟರ್ ಬಂದ್ ಮಾಡಿಸುವ ಕಾನೂನು ಇದೆ. ಈ ಕಾನೂನು ಪಾಲನೆ ಮಾಡದವರನ್ನು ಬಮಧಿಸಲು ಅವಕಾಶ ಇದೆ.  50 ಸಾವಿರದಷ್ಟು ದಂಡ ವಿಧಿಸುವ ಕಾನೂನು ಇದೆ.  ಈ ಆಕ್ಟ್ ಜನಸಾಮಾನ್ಯರ ಮೇಲೂ ವಿಧಿಸಲು ನರ್ಧರಿಸಲಾಗಿದೆ ಎಂದರು. 

ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರು, ILI , SARI ಪೇಷೆಂಟ್ ಗಳು ಕರೊನಾ ಪರೀಕ್ಷೆ ಮಾಡಿಸಬೇಕು. ಒಂದು ವೇಳೆ ಪರೀಕ್ಷೆ ನಿರಾಕರಿಸಿದರೆ ಅಂತರವರ ವಿರುದ್ಧ  ಎಪಿಡಮಿಕ್ ಆಕ್ಟ್ ನಡಿ ಕ್ರಮ ಕೈಗೊಳ್ಳಲಾಗುವುದು.  ಅವರಿಗೆ 10 ರೂಪಾಯಿ ಇಂದ 1 ಸಾವಿರ ದಂಡ, ಮೂರು ವರ್ಷಗಳ ಜೈಲು ವಾಸ ವಿಧಿಸಬಹುದು ಎಂದು ಓಂ ಪ್ರಕಾಶ್ ಹೇಳಿದರು.

ಮಾಸ್ಕ್ ಧಾರಣೆ ವಿಚಾರದಲ್ಲಿ ಜನಸಾಮಾನ್ಯರು ಮಾತ್ರ ಟಾರ್ಗೆಟ್?

ಇನ್ನು ಮಾಸ್ಕ್ ವಿಚಾರದಲ್ಲಿ ಜನಸಾಮಾನ್ಯರು ಮಾತ್ರವೇ ಟಾರ್ಗೆಟ್ ಆಗುತ್ತಿದ್ದಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಓಂ ಪ್ರಕಾಶ್ , ಜನ ಪ್ರತಿನಿಧಿಗಳಿಗೆ ದಂಡ ಹಾಕಿರುವ ವಿಚಾರದ ಬಗ್ಗೆ ಆರೋಗ್ಯ ಇಲಾಖೆ ನಿರ್ದೇಶಕರಿಗೆ ತಿಳಿದಿಲ್ಲ.  ರೂಲ್ ಎಲ್ಲರಿಗೂ ಒಂದೇ. ಅದರ ಬಗ್ಗೆ ಮಾಹಿತಿ ತರಿಸಿಕೊಂಡು ತಿಳಿಸುತ್ತೇನೆ ಎಂದರು.