ಬೆಂಗಳೂರು(ಜ.04): ಕೊರೊನಾ ಆತಂಕದ ನಡುವೆ ಹಕ್ಕಿಜ್ವರದ ಭೀತಿ ಶುರುವಾಗಿದೆ. ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಹಕ್ಕಿಗಳ ಮಾರಣಹೋಮ ನಡೆದಿದೆ. ರಾಜಸ್ಥಾನವೊಂದರಲ್ಲೇ ಸುಮಾರು 219 ಕಾಗೆಗಳು ಹಕ್ಕಿ ಜ್ವರಕ್ಕೆ ಬಲಿಯಾಗಿವೆ. ಮಧ್ಯಪ್ರದೇಶದಲ್ಲೂ ಕಾಗೆ ಹಾಗೂ ಕಿಂಗ್ ಫಿಶರ್ ಬರ್ಡ್ ಗಳ ಮಾರಣಹೋಮವಾಗಿದೆ.

ಹಕ್ಕಿಜ್ವರ ಹಿನ್ನಲೆ ರಾಜ್ಯದ ಆರೋಗ್ಯ ಇಲಾಖೆಗೂ ಟೆನ್ಶನ್ ಶುರುವಾಗಿದೆ. ಹಕ್ಕಿ ಜ್ವರಕ್ಕೊಳಗಾದ ಪಕ್ಷಿಗಳಿಂದ ಮನುಷ್ಯರಿಗೂ ರೋಗ ಕಾಣಿಸಿಕೊಳ್ಳಲಿದೆ ಎಂದು ತಜ್ಞ ವೈದ್ಯರು ಊಹಿಸಿದ್ದಾರೆ.

ಹಿ.ಪ್ರದೇಶದಲ್ಲಿ 1700ಕ್ಕೂ ಅಧಿಕ ವಲಸೆ ಪಕ್ಷಿಗಳ ನಿಗೂಢ ಸಾವು: ಭಾರೀ ಆತಂಕ

ಕೊರೊನಾ ಕಾಲದಲ್ಲಿ ಬರ್ಡ್ ಫ್ಲ್ಯೂ ಬಗ್ಗೆ ಜನರು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ತಜ್ಞರು ಸೂಚನೆ ನೀಡಿದ್ದಾರೆ. ಜನವರಿ ಫೆಬ್ರವರಿ ಸೀಸನ್ ನಲ್ಲಿ ಬರ್ಡ್ ಫ್ಲೂ ಎಫೆಕ್ಟ್ ಕೊಡಲಿದೆ.

ರಾಜ್ಯದಲ್ಲಿ ಸದ್ಯ ಹಕ್ಕಿ ಜ್ವರ ಕಾಣಿಸಿಕೊಂಡಿಲ್ಲ ಎಂದು ಆರೋಗ್ಯಧಿಕಾರಿಗಳು ಹೇಳಿದ್ದಾರೆ. ಆದರೂ ಜಾಗರೂಕತೆಯಿಂದ ಇರಬೇಕು ಎಂದು ಜನರಿಗೆ ತಜ್ಞರು ಸಲಹೆ ನೀಡಿದ್ದಾರೆ.