ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ವಿಚಾರದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಸಿದ್ದರಾಮಯ್ಯ ಆಡಳಿತದ ಅವಧಿ​ಯಲ್ಲಿ ತೆಗೆದುಕೊಂಡ ಬೇಕಾಬಿಟ್ಟಿ ನಿರ್ಧಾರಗಳೇ ಯೋಜನಾ ವೆಚ್ಚ ಹೆಚ್ಚಳಕ್ಕೆ ಕಾರಣ 

ಸಕಲೇಶಪುರ (ಅ.10): ಎತ್ತಿನಹೊಳೆ (Yettinahole) ಕುಡಿಯುವ ನೀರಿನ ಯೋಜನೆ ವಿಚಾರದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಆಡಳಿತದ ಅವಧಿ​ಯಲ್ಲಿ ತೆಗೆದುಕೊಂಡ ಬೇಕಾಬಿಟ್ಟಿ ನಿರ್ಧಾರಗಳೇ ಯೋಜನಾ ವೆಚ್ಚ ಹೆಚ್ಚಳಕ್ಕೆ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD kumaraswamy) ಆರೋಪಿಸಿದ್ದಾರೆ. 

ಶನಿವಾರ ಎತ್ತಿನಹೊಳೆ ಯೋಜನಾ ಪ್ರದೇಶಕ್ಕೆ ಪಕ್ಷದ ವಿವಿಧ ಕ್ಷೇತ್ರದ ಶಾಸಕರೊಂದಿಗೆ ಭೇಟಿ ನೀಡಿ ಕಾಮಗಾರಿ ವೀಕ್ಷಣೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬೃಹತ್‌ ಕಾಮಗಾರಿ ಕೈಗೆತ್ತಿಕೊಳ್ಳುವ ವೇಳೆ ಸಂಪೂರ್ಣ ಯೋಜನೆಯ ಡಿಪಿಆರ್‌ (DPR) ರಚಿಸಿ ಅದರಂತೆ ಕಾಮಗಾರಿ ಕೈಗೊಳ್ಳಲಾಗುತ್ತದೆ. ಆದರೆ ಎತ್ತಿನಹೊಳೆ ಯೋಜನೆಯನ್ನು ಮಾತ್ರ ಲೈನ್‌ ಎಸ್ಟಿಮೆಟ್‌ ಮೂಲಕ ನಡೆಸಲಾಗುತ್ತಿದೆ. ಇದರಿಂದಾಗಿ ಯೋಜನೆ ವೆಚ್ಚ .8 ಕೋಟಿಯಿಂದ .23 ಕೋಟಿ ಗೆ ಏರಿಕೆಯಾಗಿದೆ ಎಂದರು.

'ಕುಮಾರಸ್ವಾಮಿ ಬಾಯಿ ಹರಕೆಯಿಂದ ಅಷ್ಟು ಮಂದಿ RSSನವರು IAS ಅಧಿಕಾರಿಗಳಾಗಲಿ'

ಇದೇವೇಳೆ ಆಡಳಿತಾರೂಢ ಬಿಜೆಪಿ (BJP) ವಿರುದ್ಧವೂ ಹರಿಹಾಯ್ದ ಅವರು ಈ ಸರ್ಕಾರಕ್ಕೆ ಎತ್ತಿನಹೊಳೆ ಯೋಜನೆ ಬಗ್ಗೆ ಬದ್ಧತೆ ಇಲ್ಲ. ಈ ವೇಳೆಗೆ ಪ್ರಾಯೋಗಿಕವಾಗಿಯಾದರೂ ನೀರು ಹರಿಸಬೇಕಿತ್ತು. ಆದರೆ ಇನ್ನೂ ಕಾಮಗಾರಿಯೇ ಮುಗಿದಿಲ್ಲ, ರೈತರಿಗೂ ಪರಿಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶೀಘ್ರ ಕೋಲಾರ ಜಿಲ್ಲೆಗೆ ಎತ್ತಿನ ಹೊಳೆ ನೀರು

ಕೋಲಾರ (Kolar) ಸೇರಿದಂತೆ ಬಯಲು ಸೀಮೆ ಜಿಲ್ಲೆಗಳಿಗೆ ಎತ್ತಿನ ಹೊಳೆ ಯೋಜನೆಯಿಂದ ಶೀಘ್ರವೇ ಕೊಡಲಾಗುವುದು, ಈ ಜಿಲ್ಲೆಯನ್ನು ಅಭಿವೃದ್ದಿ ಪಡಿಸುವ ಆಕಾಂಕ್ಷೆ ನಮ್ಮ ಸರ್ಕಾರಕ್ಕಿದೆ ಎಂದು ಸಣ್ಣ ನೀರಾವರಿ ಸಚಿವರಾದ ಜೆ.ಸಿ. ಮಧುಸ್ವಾಮಿ (JC Mduswamy) ಭರವಸೆ ನೀಡಿದರು.

ಮುಳಬಾಗಿಲು ತಾಲೂಕಿನ ಜಮ್ಮನಹಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ. ಕೋಲಾರ ತಾಲೂಕಿನ ಹೊಳಲಿ ಕೆರೆ ಪಂಪ್‌ಹೌಸ್‌ನಿಂದ ನೀರನ್ನು ಎತ್ತುವಳಿ ಮಾಡಿ ಮುಳಬಾಗಿಲು ತಾಲೂಕಿನ 32 ಕೆರೆಗಳನ್ನು ತುಂಬಿಸುವ ಕಾಮಗಾರಿ ಮತ್ತು ಕೆ.ಸಿ.ವ್ಯಾಲಿ ಯೋಜನೆಯ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಎತ್ತಿನ ಹೊಳೆ ಯೋಜನೆಗೆ ಉಂಟಾಗಿರುವ ಸಮಸ್ಯೆಗಳನ್ನು ಶೀಘ್ರವೇ ಇತ್ಯರ್ಥಪಡಿಸಿ ಈ ಭಾಗಕ್ಕೆ ನೀರು ಹರಿಸುವ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚರ್ಚೆ ನಡೆಸಿದ್ದು ಅವರೂ ಅದಕ್ಕೆ ಬದ್ಧರಾಗಿದ್ದಾರೆ. ನೀರು ಬರುತ್ತದೆ ಎಂದು ಹೇಳುವ ಭಾಷಣಕ್ಕೆ ನಾವು ಸೀಮಿತವಾಗಿಲ್ಲ. ಭಾಷಣದ ಪಂಪ್‌ ಮಾಡುವುದು ಬಿಟ್ಟು ನೀರು ಪಂಪ್‌ ಮಾಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ ಎಂದರು.