ಬೆಂಗಳೂರು (ಡಿ.13): ‘ಎಂಟು ತಿಂಗಳಿನಿಂದ ಸರ್ಕಾರ ಕೋವಿಡ್‌ ಸಂಕಷ್ಟದಲ್ಲಿದೆ. ಇಂತಹ ವೇಳೆಯಲ್ಲಿ ಬೇಡಿಕೆಯನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಸಾರಿಗೆ ನೌಕರರು ಪಟ್ಟು ಹಿಡಿಯುವುದು ಸರಿಯಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಕುಮಾರಸ್ವಾಮಿ ಪರ ಸಿಎಂ ಬ್ಯಾಟಿಂಗ್: ಕುತೂಹಲ ಮೂಡಿಸಿದ ರಾಜ್ಯ ರಾಜಕಾರಣ

 ‘ಪ್ರತಿಭಟನೆ ನಡೆದಾಗ, ಪ್ರತಿಭಟನೆ ನಡೆಸುತ್ತಿರುವವರನ್ನು ಆಹ್ವಾನಿಸಿ ಅವರ ಸಮಸ್ಯೆಯನ್ನು ಮತ್ತು ಬೇಡಿಕೆಗಳನ್ನು ಆಲಿಸಬೇಕು. ಅವರ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನ ಮಾಡಿ ಜವಾಬ್ದಾರಿ ನಿರ್ವಹಿಸಬೇಕು.

 ಅಂತೆಯೇ ಸಾರ್ವಜನಿಕರ ಹಿತದೃಷ್ಟಿಯಿಂದ ಸಾರಿಗೆ ನೌಕರರು ಮುಷ್ಕರ ವಾಪಸ್‌ ಪಡೆಯಬೇಕು. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.