ಟೆಂಟಲ್ಲಿ ನೀಲಿ ಚಿತ್ರ ತೋರಿಸಿ ಜೀವನ ಮಾಡಿದವನು ಡಿಕೆಶಿ: ಎಚ್‌ಡಿಕೆ ವಾಗ್ದಾಳಿ
ಟೆಂಟಲ್ಲಿ ಬ್ಲೂ ಫಿಲಂ ತೋರಿಸಿ, ಜೀವನ ಮಾಡಿಕೊಂಡು ಬಂದವನು ಎಂದು ಡಿಕೆಶಿ ವಿರುದ್ಧ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪರೋಕ್ಷವಾಗಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರು (ನ.20) : ಟೆಂಟಲ್ಲಿ ಬ್ಲೂ ಫಿಲಂ ತೋರಿಸಿ, ಜೀವನ ಮಾಡಿಕೊಂಡು ಬಂದವನು ಎಂದು ಡಿಕೆಶಿ ವಿರುದ್ಧ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪರೋಕ್ಷವಾಗಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಲೂ ಫಿಲಂ ತೋರಿಸುವ ಮನಸ್ಥಿತಿಯಲ್ಲಿದ್ದವರಿಗೆ ಆ ರೀತಿಯ ಪೋಸ್ಟರ್ ಸಿದ್ಧತೆ ಮಾಡಲು ಬರುವುದು. ಆ ಮನಸ್ಥಿತಿಯಲ್ಲಿರುವ ಅವನಿಗೆ ಇನ್ನೇನು ಬರುತ್ತೆ, ಆ ತರಹ ಪೋಸ್ಟರ್ ಪ್ರಿಪೇರ್ ಮಾಡಿಸೋದು ಬಿಟ್ಟು ದೇವರದ್ದು ಹಾಕಿಸುತ್ತಾನಾ ಎಂದು ಪ್ರಶ್ನಿಸಿದರು.
ಪ್ರಿಯಾಂಕ್ ಖರ್ಗೆ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿಗ ಮಣಿಕಂಠ ಮೇಲೆ ಹಲ್ಲೆ
ದೊಡ್ಡ ಆಲದಹಳ್ಳಿಯ ಸಾತನೂರಿನಲ್ಲಿ 2 ಟೆಂಟ್ ಇದ್ವಲ್ಲಾ, ಮಲೆಯಾಳಿ ಸಿನಿಮಾಗೆ ಕಟ್ಟಿಂಗ್ ಸೇರಿಸೋರಲ್ಲ, ನಾವು ಚಿಕ್ಕವರಿದ್ದಾಗ, ನಾನು ಆ ಜೀವನ ಮಾಡಿಕೊಂಡು ಬಂದಿಲ್ಲ. ಅವರು ಅದನ್ನೇ ಮುಂದುವರೆಸುತ್ತಿದ್ದಾರೆ, ಅವರು ಬಂದಿರುವುದೇ ಆ ಸಂಸ್ಕೃತಿಯಲ್ಲಿ, ಅಂತವರನ್ನ ಈ ರಾಜ್ಯದ ಜನ ಆಯ್ಕೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಕೂಡ ಇಂದು ಅಂತವರಿಗೆ ಅಧಿಕಾರ ನೀಡಿದೆ. ಅವರ ಜೀವನ, ಸಂಸ್ಕೃತಿ ಬದುಕೇ ಅಷ್ಟು, ಏನು ಮಾಡೋದು ಎಂದರು.
ಕುಮಾರಸ್ವಾಮಿಗೆ ನಮ್ಮನ್ನು ನೋಡಿ ಸಹಿಸೋಕಾಗುತ್ತಿಲ್ಲ: ಸಚಿವ ಚಲುವರಾಯಸ್ವಾಮಿ
ಗುಪ್ತಚರ ಇಲಾಖೆ ಡಿಜಿಯವರು ಸುತ್ತೋಲೆ ಹೊರಡಿಸಿದ್ದಾರೆ. ಸಿಎಂ ಹಾಗೂ ಡಿಸಿಎಂ ಮನೆ ಮುಂದೆ ಜನತಾದಳ ಕಾರ್ಯಕರ್ತರು ಪೋಸ್ಟರ್ ಅಂಟಿಸಬಹುದು ಅದ್ದರಿಂದ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಜನತೆಗೆ ರಕ್ಷಣೆ ಕೊಡಲು ಪೊಲೀಸ್ ಇಲಾಖೆ ಹೇಳಿಲ್ಲಾ, ಜೆಡಿಎಸ್‌ನವರು ಪೋಸ್ಟರ್ ಅಂಟಿಸುತ್ತಾರೆಂದು, ಇದು, ಅವರ ಅಭಿರುಚಿ ಎಂದು ಟೀಕಿಸಿದರು.