ರಾಜ್ಯ ಇನ್ನೂ ದಿವಾಳಿ ಆಗಿಲ್ಲ, ಇನ್ನಷ್ಟು ಗ್ಯಾರಂಟಿ ಕೊಡಿ: ಎಚ್‌ಡಿಕೆ ತಿರುಗೇಟು
ಬೇಕಾದರೆ ಇನ್ನೂ ಐದು ಗ್ಯಾರಂಟಿ ಕೊಡಲಿ, ರಾಜ್ಯ ಇನ್ನೂ ದಿವಾಳಿ ಆಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು. ಹಾಸನ ತಾಲೂಕಿನ ಮಾರನಾಯಕನಹಳ್ಳಿ ಗ್ರಾಮದ ಶ್ರೀ ವೀರಾಂಜನೆಯಸ್ವಾಮಿ ದೇವಸ್ಥಾನ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾನುವಾರ ಭಾಗವಹಿಸಿ ನಂತರ ಸುದ್ದಿಗಾರರ ಜತೆ ಮಾತನಾಡಿದರು.
ಹಾಸನ (ಫೆ.19) : ಬೇಕಾದರೆ ಇನ್ನೂ ಐದು ಗ್ಯಾರಂಟಿ ಕೊಡಲಿ, ರಾಜ್ಯ ಇನ್ನೂ ದಿವಾಳಿ ಆಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.
ಹಾಸನ ತಾಲೂಕಿನ ಮಾರನಾಯಕನಹಳ್ಳಿ ಗ್ರಾಮದ ಶ್ರೀ ವೀರಾಂಜನೆಯಸ್ವಾಮಿ ದೇವಸ್ಥಾನ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾನುವಾರ ಭಾಗವಹಿಸಿ ನಂತರ ಸುದ್ದಿಗಾರರ ಜತೆ ಮಾತನಾಡಿದರು.
ನನ್ನ ತಮ್ಮ ದೆಹಲಿಯಲ್ಲಿ ಕೂರುವ ಸಂಸದ ಅಲ್ಲ, ಅವನು ಹಳ್ಳಿಯ ಸಂಸದ: ಡಿಕೆ ಶಿವಕುಮಾರ
‘ಜೆಡಿಎಸ್ ಬಿಜೆಪಿಯವರಿಗೆ ಬಜೆಟ್ ಬಗ್ಗೆ ಗೊತ್ತಿಲ್ಲ ಎಂಬ ರೀತಿ ಮಾತನಾಡಿದ್ದಾರೆ. ಪ್ರತಿನಿತ್ಯ ಸುಳ್ಳು ಹೇಳಿ ಅದನ್ನೇ ಸತ್ಯ ಎಂಬಂತೆ ಬಿಂಬಿಸುತ್ತಿದ್ದಾರೆ. ಐದರ ಜೊತೆ ಇನ್ನೂ ಐದು ಗ್ಯಾರಂಟಿ ಕಾರ್ಯಕ್ರಮ ಕೊಡಲಿ, ಇನ್ನು ರಾಜ್ಯ ದಿವಾಳಿ ಆಗಿಲ್ಲ. ನಾನು ಮುಖ್ಯಮಂತ್ರಿ ಇದ್ದಾಗ ೪೫ ಸಾವಿರ ಕೋಟಿ ರು. ಸಾಲ ಇರಬಹುದು. ಇಂದು ೬.೬೫ ಲಕ್ಷ ಕೋಟಿ ರು. ಸಾಲ ಆಗಿದೆ’ ಎಂದು ಕುಹಕವಾಡಿದರು.
‘ಗ್ಯಾರಂಟಿಗಳಿಗೆ ೧.೦೫ ಲಕ್ಷ ರು. ಸಾಲ ಮಾಡಿದ್ದೀರಿ. ನೀವು ಮಹಾ ಪ್ರವೀಣರು ಎಂಬುದು ಗೊತ್ತಿದೆ. ನಿಮ್ಮ ಬಜೆಟ್ ನೋಡಿದರೆ ಯಾರೇ ಆದ್ರೂ ನಗುತ್ತಾರೆ. ಬಿಜೆಪಿಯವರು ಏನಿಲ್ಲ ಎಂದಿದ್ದಕ್ಕೆ ನಗುತ್ತಿದ್ದೀರಲ್ಲಾ. ಈ ಸಾಲ ತೀರಿಸೋರು ಯಾರು? ಒಂದು ಲಕ್ಷ ಕೋಟಿ ರು. ಸಾಲ ಮಾಡಿ ೫೨ ಸಾವಿರ ಕೋಟಿ ರು. ಗ್ಯಾರಂಟಿಗೆ ನೀಡುತ್ತಿದ್ದೀರಿ. ಈ ಸಾಲವನ್ನು ಬಡವರ ಮೇಲೆ ಹೇರುತ್ತಾರೆ. ಇದಕ್ಕೆ ಬಡವರ ಬಜೆಟ್ ಎಂದು ಹೇಳುತ್ತಾರಾ?’ ಎಂದು ವ್ಯಂಗ್ಯವಾಡಿದರು