Asianet Suvarna News Asianet Suvarna News

ನನ್ನ ತಮ್ಮ ದೆಹಲಿಯಲ್ಲಿ ಕೂರುವ ಸಂಸದ ಅಲ್ಲ, ಅವನು ಹಳ್ಳಿಯ ಸಂಸದ: ಡಿಕೆ ಶಿವಕುಮಾರ

ರಾಜಕೀಯದಲ್ಲಿ ಯಾವುದೂ ಶಾಶ್ವತ ಅಲ್ಲ ಹಾಗೂ ಅಸಾಧ್ಯವೂ ಅಲ್ಲ. ರಾಜಕಾರಣ ಎಂಬುದು ಸಾಧ್ಯತೆಗಳ ಕಲೆ. ಹೀಗಾಗಿ ಇಲ್ಲಿ ಬದಲಾವಣೆಯ ವಿಶ್ವಾಸವಿದೆ. ಹೀಗಾಗಿ ಮಂಗಳೂರಿನಲ್ಲಿ ಈ ಬಾರಿ ಸಮಾವೇಶ ಮಾಡ್ತಾ ಇದ್ದೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ತಿಳಿಸಿದರು.

DK Shivakumar reaction about Loksabha election 2024 at Mangaluru rav
Author
First Published Feb 17, 2024, 12:39 PM IST

ಮಂಗಳೂರು (ಫೆ.17): ರಾಜಕೀಯದಲ್ಲಿ ಯಾವುದೂ ಶಾಶ್ವತ ಅಲ್ಲ ಹಾಗೂ ಅಸಾಧ್ಯವೂ ಅಲ್ಲ. ರಾಜಕಾರಣ ಎಂಬುದು ಸಾಧ್ಯತೆಗಳ ಕಲೆ. ಹೀಗಾಗಿ ಇಲ್ಲಿ ಬದಲಾವಣೆಯ ವಿಶ್ವಾಸವಿದೆ. ಹೀಗಾಗಿ ಮಂಗಳೂರಿನಲ್ಲಿ ಈ ಬಾರಿ ಸಮಾವೇಶ ಮಾಡ್ತಾ ಇದ್ದೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ತಿಳಿಸಿದರು.

ಇಂದು ಮಂಗಳೂರಿನ ಕಾಂಗ್ರೆಸ್ ಸಮಾವೇಶ ಮೈದಾನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಭಾಗದಲ್ಲಿ ನಾವು ಗೆಲ್ಲುವ ಸಾಧ್ಯತೆ ಹೆಚ್ಚಿದೆ ಹಾಗಾಗಿ ನಾವು ಇಲ್ಲಿ ಸಮಾವೇಶ ಮಾಡಲು ನಿರ್ಧರಿಸಿದ್ದೇವೆ. ಇಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಇಲ್ಲಿನ ಜನರು ಬೇರೆಡೆ ಉದ್ಯೋಗಕ್ಕೆ ಹೋಗುತ್ತಿದ್ದಾರೆ. ಸೌದಿ, ಬೆಂಗಳೂರು, ಮುಂಬೈ ಕಡೆಯೆಲ್ಲ ಇಲ್ಲಿನವರು ವಲಸೆ ಹೋಗುತ್ತಿದ್ದಾರೆ. ಇಲ್ಲಿ ಎಷ್ಟೇ ಶಿಕ್ಷಣ ಸಂಸ್ಥೆಗಳಿದ್ದರೂ ಮಕ್ಕಳು ಡ್ರಾಪ್ ಔಟ್ ಆಗುತ್ತಿದ್ದಾರೆ. ಅದಕ್ಕೆ ಕಾರಣ ಇಲ್ಲಿ ಧರ್ಮ ರಾಜಕೀಯ ಇದೆ. ಇಲ್ಲಿನ ನಾಯಕರು ಅಭಿವೃದ್ಧಿ ಮಾಡುತ್ತಿಲ್ಲ. ಹೀಗಾಗಿ ಜಿಲ್ಲೆಯ ಅಭಿವೃದ್ಧಿ, ಉದ್ಯೋಗ ಸೃಷ್ಟಿಸುವ ಬಗ್ಗೆ ನಾವು ಹೊಸ ಆಲೋಚನೆ ಮಾಡಿದ್ದೇವೆ ಎಂದರು.

ಶಿರಾ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲು ಕ್ರಮ: ಡಿಕೆ ಶಿವಕುಮಾರ್

ಸಂಜೆ ಏಳು ಗಂಟೆ ಬಳಿಕ ಮಂಗಳೂರು ಡೆಡ್ ಸಿಟಿ ಆಗಿದೆ. ವ್ಯಾಪಾರ ವಹಿವಾಟು ನಡೆದು ಜನರಿಗೆ ಉದ್ಯೋಗ ಸಿಗಬೇಕು. ಇಲ್ಲಿನ ಬ್ಯಾಂಕ್‌ಗಳು ಕೂಡ ಇಲ್ಲಿಂದ ಬೇರೆ ಕಡೆ ಹೋಗ್ತಾ ಇವೆ. ಜನರು ದೇವಸ್ಥಾನಗಳಲ್ಲಿ ಭಕ್ತಿಯಿಂದ ಇರ್ತಾರೆ ಹಾಗೆ ವ್ಯವಹಾರಗಳಲ್ಲೂ ಇರಬೇಕು. ಜೆರೋಸಾ ಶಾಲೆ ವಿಚಾರದಲ್ಲಿ ಕಾನೂನು ಪ್ರಕ್ರಿಯೆ ನಡೆಯುತ್ತಿದೆ. ಯಾರೇ ರಾಜಕೀಯ ಮಾಡಿದ್ರೂ ಕಾನೂನು ಕೆಲಸ ಮಾಡಲಿದೆ. ಅವರು ಹೋರಾಟ ಮಾಡ್ತಾ ಇರಲಿ, ಕಾನೂನು ತನ್ನ ಕೆಲಸ ಮಾಡುತ್ತೆ. ನಾನು ಪೊಲೀಸ್ ಕೆಲಸ ಮಾಡಲು ಆಗಲ್ಲ, ಪೊಲೀಸರು ಮಾಡ್ತಾರೆ. ಜೆರೋಸಾ ಶಾಲೆ ಗಲಾಟೆಯಲ್ಲಿ ತಪ್ಪಿಸ್ಥರ ಮೇಲೆ ಕ್ರಮವಾಗುತ್ತದೆಕ. ನಮ್ಮ ರಾಜ್ಯಕ್ಕೆ ಅನ್ಯಾಯ ಆದಾಗ ಬಿಜೆಪಿಯವರು ಮಾತನಾಡಿಲ್ಲ. ದ.ಕ ಜಿಲ್ಲೆಗೂ ಅನುದಾನ ಕೊಟ್ಟಿದ್ದೇವೆ, ಮುಸ್ಲಿಮರಿಗೆ ಕೂಡಲೇ ಬಾರದಾ? ಬಿಜೆಪಿ ಧರ್ಮ ರಾಜಕಾರಣ ಮಾಡ್ತಾ ಇದೆ, ಅದು ಮಾಡಲಿ ಎಂದರು.

ಕಾಂಗ್ರೆಸ್ ಸರ್ಕಾರದಲ್ಲಿ ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರ ಮಿತಿ ಮೀರಿದೆ: ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಿಡಿ

ನಾನು ದೇವೇಗೌಡ, ಕುಮಾರಸ್ವಾಮಿ ವಿರುದ್ದ ನಿಂತಿದ್ದವನು. ನನ್ನ ಸಹೋದರನ ವಿರುದ್ದ ಅನಿತಾ ಕುಮಾರಸ್ವಾಮಿ ನಿಂತರೂ ಗೆದ್ದಿದ್ದಾನೆ. ಬಿಜೆಪಿ-ಜೆಡಿಎಸ್ ಒಟ್ಟಾಗಿ ನನ್ನ ಸಹೋದರನ ವಿರುದ್ದ ನಿಂತಾಗಲೂ ಗೆದ್ದಿದ್ದಾನೆ. ಸುರೇಶ್ ದೆಹಲಿಯಲ್ಲಿ ಕೂರುವ ಸಂಸದ ಅಲ್ಲ. ಅವನು ಹಳ್ಳಿಯ ಸಂಸದ. ಆತನಿಗೆ ಮತದಾರರ ಭಾವನೆ ಗೊತ್ತಿದೆ. ದೇವೇಗೌಡ ಕುಮಾರಸ್ವಾಮಿ ನಮ್ಮ ಎಂಪಿ ಆಗಿದ್ದರು. ಹಳೆಯ ಎಂಪಿಗಳು ಹಾಗೂ ಈ ಎಂಪಿಯ ವ್ಯತ್ಯಾಸ ಜನ ನೋಡಿದ್ದಾರೆ. ಪ್ರತೀ ಹಳ್ಳಿ, ರಸ್ತೆ, ಅಭಿವೃದ್ಧಿ, ಮನೆಗಳ ಅಭಿವೃದ್ಧಿ ಆಗಿದೆ. ಹೀಗಾಗಿ ನನ್ನ ಸಹೋದರನ ವಿರುದ್ಧ ಯಾರನ್ನೇ ನಿಲ್ಲಿಸಿದರೂ ಮತದಾರ ಉತ್ತರ ಕೊಡ್ತಾನೆ. ಮತದಾರ ಪ್ರಜ್ಞಾವಂತನಾಗಿದ್ದಾನೆ. ನನ್ನ ಸಹೋದರನ ವಿರುದ್ಧ ಕುಮಾರಸ್ವಾಮಿ ನಿಂತರೂ ಯಾವುದೇ ಬೇಜಾರಿಲ್ಲ. ಯಾರೇ ನಿಂತರೂ ನಾವು ಸ್ವಾಗತ ಮಾಡ್ತೇವೆ ಎನ್ನುವ ಮೂಲಕ ಬಿಜೆಪಿ ಜೆಡಿಎಸ್ ಒಟ್ಟಾಗಿ ಸ್ಪರ್ಧಿಸಿದರೂ ಈ ಬಾರಿಯೂ ಸಹೋದರ ಡಿಕೆ ಸುರೇಶ್ ಗೆಲ್ಲುವ ಕುರಿತು ಭರವಸೆ ವ್ಯಕ್ತಪಡಿಸಿದರು.

Follow Us:
Download App:
  • android
  • ios