ಬೆಂಗಳೂರು (ಡಿ.20):  ರಾಜ್ಯದ 33 ಹೆದ್ದಾರಿ ಯೋಜನೆಗಳ ಚಾಲನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರನ್ನು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಡಿ ಹೊಗಳಿದ ಪ್ರಸಂಗ ನಡೆಯಿತು.

ನಾನು ಮೊದಲಿನಿಂದಲೂ ಗಡ್ಕರಿ ಅವರ ಕೆಲಸವನ್ನು ಗಮನಿಸುತ್ತಿದ್ದೇನೆ. ಯಾವುದೇ ಪ್ರಾಂತ್ಯಗಳಿದ್ದರೂ ಅವರು ಪಕ್ಷಭೇದ ಮರೆತು ಸ್ಪಂದಿಸಿ ಕೆಲಸ ಮಾಡುತ್ತಾರೆ. ಬಹಳ ತಾಳ್ಮೆಯಿಂದ ಕಾರ್ಯನಿರ್ವಹಣೆ ಮಾಡುತ್ತಾರೆ.

ಕರ್ನಾಟಕದಲ್ಲಿ 11 ಸಾವಿರ ಕೋಟಿಯ 33 ಹೆದ್ದಾರಿ ಕಾಮಗಾರಿ ಉದ್ಘಾಟಿಸಿದ ಗಡ್ಕರಿ!

ಅವರ ಏಳು ವರ್ಷದ ಅಧಿಕಾರಾವಧಿಯಲ್ಲಿ ಕರ್ನಾಟಕ ಸೇರಿದಂತೆ ದೇಶಾದ್ಯಂತ ರಸ್ತೆ ಜಾಲ ವಿಸ್ತರಣೆ ಕಾರ್ಯಗಳು ಉತ್ತಮ ರೀತಿಯಲ್ಲಿ ಸಾಗುತ್ತಿವೆ. ಇದೆಲ್ಲವೂ ಅವರ ಕಚೇರಿಗೆ ಸಲ್ಲಬೇಕು ಎಂದು ಹೇಳಿದರು.

ಇದೇ ವೇಳೆ, ಹಾಸನ, ಚಿಕ್ಕಮಗಳೂರು, ಮಂಗಳೂರು ಭಾಗದಲ್ಲಿ ಭಾಕಿ ಉಳಿದಿರುವ ಹೆದ್ದಾರಿ ಕಾಮಗಾರಿ ಹಾಗೂ ಬೆಂಗಳೂರು ಮತ್ತು ಕೊಯಮತ್ತೂರು ಹೆದ್ದಾರಿ ಕಾಮಗಾರಿಯನ್ನು ಆದಷ್ಟುಬೇಗ ಪೂರ್ಣಗೊಳಿಸುವಂತೆ ಮನವಿ ಮಾಡಿದರು.