ಸರ್ಕಾರಿ ಸಾಮೂಹಿಕ ಮದುವೆಗೆ ಹಟ್ಟಿ ಗೋಲ್ಡ್ ಉಡುಗೊರೆ
ರಾಜ್ಯದ 100 ಎ ದರ್ಜೆಯ ದೇವಸ್ಥಾನಗಳಲ್ಲಿ ಸರ್ಕಾರ ವತಿಯಿಂದ ಏರ್ಪಡಿಸುವ ಸಾಮೂಹಿಕ ವಿವಾಹ ವೇಳೆ ನೀಡುವ ಮಾಂಗಲ್ಯಕ್ಕೆ ಹಟ್ಟಿ ಗೋಲ್ಡ್‌ನಿಂದ ಚಿನ್ನ ಖರೀದಿಸಲು ಚಿಂತನೆ ನಡೆಸಲಾಗಿದೆ
ಮಂಗಳೂರು [ನ.09] : ಮುಜರಾಯಿ ಇಲಾಖೆ ರಾಜ್ಯದ 100 ಎ ದರ್ಜೆಯ ದೇವಸ್ಥಾನಗಳಲ್ಲಿ ಸರ್ಕಾರ ವತಿಯಿಂದ ಏರ್ಪಡಿಸುವ ಸಾಮೂಹಿಕ ವಿವಾಹ ವೇಳೆ ನೀಡುವ ಮಾಂಗಲ್ಯಕ್ಕೆ ಹಟ್ಟಿ ಗೋಲ್ಡ್‌ನಿಂದ ಚಿನ್ನ ಖರೀದಿಸಲು ಚಿಂತನೆ ನಡೆಸಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ನಡೆಸುವ ಸಾಮೂಹಿಕ ವಿವಾಹದ ವೇಳೆ ವಧುವಿಗೆ ಸುಮಾರು 40 ಸಾವಿರ ರು. ವೆಚ್ಚದಲ್ಲಿ 8 ಗ್ರಾಂ ಚಿನ್ನವನ್ನು ನೀಡಲು ತೀರ್ಮಾನಿಸಲಾಗಿದೆ. ಈ ಚಿನ್ನ ಹಟ್ಟಿ ಗೋಲ್ಡ್‌ನಲ್ಲಿ ಖರೀದಿಸಲು ಯೋಚಿಸಲಾಗುತ್ತಿದೆ ಎಂದರು.
ಡಿಕೆಶಿ ಬಿಡುಗಡೆಯಿಂದ ಎಲೆಕ್ಷನ್ ಮೇಲೆ ನೋ ಎಫೆಕ್ಟ್ ಎಂದ ಸಚಿವ...
ವಧುವಿಗೆ 40 ಸಾವಿರ, ವರನಿಗೆ 10 ಸಾವಿರ ಹಾಗೂ ಮದುವೆಗೆ ಖರ್ಚಿಗೆ 5 ಸಾವಿರ ಸೇರಿದಂತೆ ಒಂದು ಜೋಡಿಗೆ 55 ಸಾವಿರ ವೆಚ್ಚವನ್ನು ಸರ್ಕಾ ರದ ವತಿಯಿಂದ ಮಾಡಲಾಗುವುದು ಎಂದರು.