ವಿಕ್ರಂ ಸಿಂಹ ಜಾಗದಲ್ಲಿ ಮರ ಕಡಿಸಿ ಹಾಕಿಸಿದ್ದೇ ಸಿಎಂ: ಎಚ್‌ಡಿಕೆ ಆರೋಪ
ಮುಖ್ಯಮಂತ್ರಿಗಳೇ ಮರ ಕಡಿಸಿ ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಮ ಸಿಂಹ ಅವರಿಗೆ ಸೇರಿದ ಜಾಗದಲ್ಲಿ ಹಾಕುವಂತೆ ಅರಣ್ಯಾಧಿಕಾರಿಗಳಿಗೆ ಹೇಳಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು (ಜ.6) : ಮುಖ್ಯಮಂತ್ರಿಗಳೇ ಮರ ಕಡಿಸಿ ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಮ ಸಿಂಹ ಅವರಿಗೆ ಸೇರಿದ ಜಾಗದಲ್ಲಿ ಹಾಕುವಂತೆ ಅರಣ್ಯಾಧಿಕಾರಿಗಳಿಗೆ ಹೇಳಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಮುಖ್ಯಮಂತ್ರಿಗಳು ಸಾಚಾ ಆಗಿದ್ದರೆ ಅವರ ಫೋನ್ ಕಾಲ್ ವಿವರ ತೆಗೆಯಿರಿ. ಸತ್ಯ ಗೊತ್ತಾಗುತ್ತದೆ ಎಂದೂ ಅವರು ಸವಾಲು ಹಾಕಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಗತ್ಯವಾಗಿ ಪ್ರತಾಪ್ ಸಿಂಹ ಅವರ ಸಹೋದರನ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಹಾಕಿದ್ದಾರೆ. ಇದರ ಸತ್ಯಾಸತ್ಯತೆ ಏನಿದೆ ಎಂಬುದು ಹೊರಗೆ ಬರಬೇಕು ಎಂದು ಆಗ್ರಹಿಸಿದರು.
ಹಾಸನ ಮರ ಕಡಿತಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದ ವಿಕ್ರಂ ಸಿಂಹ!
ಕಾಂಗ್ರೆಸ್‌ನವರು ವಿರೋಧಿಗಳ ದನಿ ಅಡಗಿಸಲು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮರ ಕಡಿದ ಆರೋಪಕ್ಕೆ ಗುರಿಯಾಗಿರುವ ವಿಕ್ರಂ ಸಿಂಹ ಅವರ ಮೇಲೆ ಸರ್ಕಾರ ನಡೆಸುತ್ತಿರುವ ದಬ್ಬಾಳಿಕೆ ಬಗ್ಗೆ ಹಲವು ಅನುಮಾನಗಳಿವೆ. ಆರೋಪಿ 1 ಮತ್ತು 2 ಜಯಮ್ಮ, ರಾಕೇಶ್ ಶೆಟ್ಟಿ ಹೆಸರು ಉಲ್ಲೇಖ ಮಾಡಿದ್ದಾರೆ. ಪ್ರಕರಣದಲ್ಲಿ ಮೂರನೇ ಆರೋಪಿ ಇರಲಿಲ್ಲ. ಸ್ಥಳೀಯ ಪುಡಾರಿಯೊಬ್ಬ ಮುಖ್ಯಮಂತ್ರಿಗಳಿಗೆ ಮಾಹಿತಿ ಕೊಟ್ಟು ಪ್ರತಾಪ್ ಸಿಂಹಗೆ ಪಾಠ ಕಲಿಸಬೇಕು ಎಂದು ತಿಳಿಸಿದ್ದ. ವಿವೇಚನೆ ಕಳೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ ಅಧಿಕಾರಿಗಳಿಗೆ ಕರೆ ಮಾಡಿ ಬೀಟೆ ಮರ ಕಡಿದು ಆ ಜಾಗದಲ್ಲಿ ಹಾಕುವಂತೆ ಹೇಳಿದ್ದರು ಎಂದು ಆರೋಪಿಸಿದರು.
ಸರ್ಕಾರ ಮಾಡಿದ ತಪ್ಪಿಗೆ ದಲಿತ ಅಧಿಕಾರಿಗೆ ಶಿಕ್ಷೆ ಕೊಡಲಾಗಿದೆ. ಅಮಾನತು ಆಗಿರುವ ಡಿಎಫ್ಓ ದಲಿತ ಸಮುದಾಯದ ಅಧಿಕಾರಿ. ಯಾಕೆ ಈ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಈತ ಪ್ರಾಮಾಣಿಕ ದಲಿತ ಅಧಿಕಾರಿ. ಅವರ ಮೇಲೆ ಯಾಕೆ ಕ್ರಮ ಆಯಿತು? ಅವರನ್ನು ಹಾಸನಕ್ಕೆ ಹಾಕಿಸಲು ಯಾವ ಶಾಸಕ ಬಂದು ಕೂತಿದ್ದ? ಯಶವಂತಪುರದಲ್ಲಿ ಹಣ ವ್ಯವಹಾರ ಆಗಿದೆ. ಅದನ್ನು ಬಯಲು ಮಾಡುವಿರಾ ಎಂದು ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.
ಮಾನ್ಯ ಸಿದ್ದರಾಮಯ್ಯ ಅವರಿಗೆ ಸಾಷ್ಟಾಂಗ ನಮಸ್ಕಾರಗಳು: ಸಹೋದರನ ಬಂಧನಕ್ಕೆ ಸಂಸದ ಪ್ರತಾಪ್ ಸಿಂಹ ಭಾವುಕ ನುಡಿ
ಮುಖ್ಯಮಂತ್ರಿಗಳ ಆದೇಶದಂತೆ ಬೀಟೆ ಮರವನ್ನು ಗೆಂಡೆಕೆರೆಯಿಂದ ಕಟ್ ಮಾಡಿಕೊಂಡು ಬಂದು ಇಲ್ಲಿ ಹಾಕಲು ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಪ್ರತಾಪ್ ಸಿಂಹನ ಸಹೋದರ ಮರ ಕಡಿದಿಲ್ಲ. ಮುಖ್ಯಮಂತ್ರಿಗಳೇ ಹೇಳಿ ಮರ ಕಡಿಸಿ ಪ್ರತಾಪ್ ಸಿಂಹ ಹೆದರಿಸೋಕೆ ಹೀಗೆ ಮಾಡಿದ್ದಾರೆ ಎಂದು ದೂರಿದರು.