ಐಎಎಸ್ ಅಧಿಕಾರಿಗಳ ಜಟಾಪಟಿ: ರೋಹಿಣಿ ಸಿಂಧೂರಿ ವಿರುದ್ಧ ಮತ್ತೊಂದು ಗಂಭೀರ ಆರೋಪ

* ಮೈಸೂರಿನಲ್ಲಿ ಇಬ್ಬರು ಐಎಎಸ್ ಅಧಿಕಾರಿ ಜಟಾಪಟಿ
* ಇದರ ಮಧ್ಯೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮತ್ತೊಂದು ಆರೋಪ
* ಗಂಭೀರ ಆರೋಪ ಮಾಡಿದ ಮಾಜಿ ಸಚಿವ
 

Hassan BJP Leader A Manju Hits out at Mysuru DC Rohini Sindhuri rbj

ಮೈಸೂರು, (ಜೂನ್.05): ಇಬ್ಬರು ಐಎಎಸ್ ಅಧಿಕಾರಿಗಳಾದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ನಡುವಿನ ಕಿತ್ತಾಟ ಬೀದಿಗೆ ಬೀಳುತ್ತಿದ್ದಂತೆ ಪರವಿರೋಧ'ಚರ್ಚೆಗಳು ಶುರುವಾಗಿದೆ. ಇಬ್ಬರು ಅಧಿಕಾರಿಗಳು ಮಾಧ್ಯಮಗಳ ಮೂಲಕ ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿರುವುದು ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿದೆ.

ಇದರ ಮಧ್ಯೆ ಮಾಜಿ ಸಚಿವ ಎ.ಮಂಜು ಅವರು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮತ್ತೊಂದು ಆರೋಪ ಮಾಡಿದ್ದಾರೆ.

ಇಂದು (ಶನಿವಾರ) ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎ.ಮಂಜು, ಜಿಲ್ಲಾಧಿಕಾರಿಗಳಿಗೆ ಒಂದು ನಿಯಮ, ಸಾಮಾನ್ಯ ಜನರಿಗೊಂದು ನಿಯಮ. ಸಾಮಾನ್ಯ ಜನರ ಮಕ್ಕಳಿಗೆ ಆನ್ ಲೈನ್ ಶಿಕ್ಷಣ, ಆದರೆ ಜಿಲ್ಲಾಧಿಕಾರಿಯವರ ಮಕ್ಕಳಿಗೆ 20ಕ್ಕೂ ಹೆಚ್ಚು ಶಿಕ್ಷಕರಿಂದ ಶಿಕ್ಷಣ ನೀಡಲಾಗುತ್ತಿದೆ. ರೋಹಿಣಿ ಸಿಂಧೂರಿ ಅವರ ಈ ಇಬ್ಬಗೆಯ ನೀತಿ ಕೇಳೋರು ಯಾರು  ಎಂದು ಆರೋಪಿಸಿದರು.

ಸಂಧಾನ ಸಕ್ಸಸ್: ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ರಾಜೀನಾಮೆ ವಾಪಸ್

ಈಗ ಧನ ಕಾಯುವವನು ಕೂಡಾ ಅಡ್ಜೆಸ್ಟ್ ಮೆಂಟ್ ನಲ್ಲೂ ಐಎಎಸ್ ಮಾಡುತ್ತಾನೆ. ಐಎಎಸ್ ಮಾಡಿದ ಮೇಲೆ ಅಧಿಕಾರ ಹೇಗೆ ನಡೆಸುತ್ತೇವೆ ಎನ್ನುವುದು ಮುಖ್ಯ. ಆದರೆ ಜನರ ಸೇವೆ ಹೇಗೆ ಮಾಡುತ್ತೇವೆ ಎನ್ನುವುದೇ ಮುಖ್ಯ ಎಂದು ಡಿಸಿ ವಿರುದ್ದ ಕಿಡಿಕಾರಿದರು.

ಮೈಸೂರು ಮಹಾರಾಜರೇ ಸ್ವಿಮ್ಮಿಂಗ್ ಪೂಲ್ ಕಟ್ಟಲಿಲ್ಲ. ಸರ್ಕಾರಿ ಸ್ಥಳದಲ್ಲಿ ಈ ಸಮಯದಲ್ಲಿ ಈಜುಕೊಳ ಬೇಕಿತ್ತೇ? ಸರ್ಕಾರಿ ಅಧಿಕಾರಿ ಒಂದೇ ಕಡೆ ಇರುತ್ತಾರಾ? ಐದು ವರ್ಷ ಆದ ಮೇಲೆ ವರ್ಗಾವಣೆಯಾಗುತ್ತಾರೆ. ಇದು ಗುತ್ತಿಗೆ ಕಂಟ್ರಾಕ್ಟರ್ ಗೋಸ್ಕರ ಮಾಡಿರುವ ಕೆಲಸ ಅಷ್ಟೇ ಎಂದು ಮಂಜು ಆರೋಪಿಸಿದರು.

ಎಲ್ಲ ಅಧಿಕಾರಿಗಳು ಇಷ್ಟ ಬಂದಹಾಗೆ ಕೆಲಸ ಮಾಡಲು ಅವಕಾಶವಿಲ್ಲ. ನನ್ನ ಅವಧಿಯಲ್ಲಿ ಕೆಲಸ ಮಾಡುವಾಗ ಕೆಲವು ತಪ್ಪುಗಳನ್ನ ತಿದ್ದಿದ್ದೆ, ತಿಳಿ ಹೇಳಿದ್ದೆ. ಜನರು ಬರುವಾಗ ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು ಬೇಡ ಗೌರವ ಕೊಡಬೇಕು ಎಂದು ಹೇಳಿದ್ದೆ. ಈ ಬಗ್ಗೆ ಚೀಫ್ ಸೆಕರೇಟರಿ, ಸಿಎಂ ಗಮನಕ್ಕೂ ತಂದಿದ್ದೆ ಎಂದರು.

ಹಾಸನಕ್ಕೆ ಸಿಎಂ ಸಿದ್ದರಾಮಯ್ಯ ಬಂದಿದ್ದಾಗ ಅವರನ್ನ ಆಹ್ವಾನ ಮಾಡಲು ಪ್ರೋಟೋಕಾಲ್ ಪ್ರಕಾರ ಡಿಸಿ ಅವರು ಬರಬೇಕಿತ್ತು, ಆದ್ರೆ ರೋಹಿಣಿ ಸಿಂಧೂರಿ ಬರಲಿಲ್ಲ, ಆಗ ಸಿದ್ದರಾಮಯ್ಯಗೆ ವರ್ಗಾವಣೆ ಮಾಡುವಂತೆ ಹೇಳಿದ್ದೆ. ನಂತರದ ಚುನಾವಣೆಯಲ್ಲಿ ನಾನು ಸೋತೆ, ಅವರ ಪರ ಯಾರಿದ್ದಾರೋ ಅವವರೇ ಅವರನ್ನ ವರ್ಗಾವಣೆ ಮಾಡಿಸಲು ಮುಂದಾಗಿದ್ದರು ಎಂದು ತಿಳಿಸಿದರು.

ಚುನಾಯಿತ ಪ್ರತಿನಿಧಿಗಳೊಂದಿಗೆ ಅಗೌರವದೊಂದಿಗೆ ನಡೆದುಕೊಳ್ಳುವುದು ಸರಿಯಿಲ್ಲ.  ಎಲ್ಲವೂ ನನಗೆ ಗೊತ್ತಿದೆ. ನಾನ್ ಹೇಳಿದ್ದೆ ಆಗಬೇಕು ಅನ್ನೋದು ಸರಿಯಲ್ಲ ಎಂದು ರೋಹಿಣಿ ಸಿಂಧೂರಿಗೆ ತಿಳಿ ಹೇಳಿದರು.
 

Latest Videos
Follow Us:
Download App:
  • android
  • ios