Asianet Suvarna News Asianet Suvarna News

ಚೈತ್ರಾ ಕುಂದಾಪುರ ಬಿಜೆಪಿ ಟಿಕೆಟ್‌ ವಂಚನೆ ಕೇಸ್‌ನಲ್ಲಿ ಸ್ವಾಮೀಜಿ ಪಾಲೆಷ್ಟು ಗೊತ್ತಾ?

ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಹೇಳಿ ವಂಚನೆ ಮಾಡಿರುವ ಆರೋಪದಡಿ ಬಂಧಿತರಾಗಿರುವ ಚೈತ್ರಾ ಕುಂದಾಪುರ ಅವರೊಂದಿಗೆ ಸ್ವಾಮೀಜಿ ಕೂಡ ಭಾಗಿಯಾಗಿದ್ದಾರೆ.

Hadagali Halashree Swamiji involved in Chaitra Kundapur BJP ticket fraud case sat
Author
First Published Sep 13, 2023, 1:39 PM IST

ವಿಜಯನಗರ (ಸೆ.13): ರಾಜ್ಯದಲ್ಲಿ ಹಲವು ಶಾಸಕ ಟಿಕೆಟ್‌ ಆಕಾಂಕ್ಷಿಗಳಿಂದ ಕೋಟ್ಯಂಣತರ ರೂ. ಹಣವನ್ನು ಪಡೆದು ವಂಚನೆ ಮಾಡಿದ್ದಾರೆಂಬ ಆರೋಪದಡಿ ಬಂಧಿತವಾಗಿರುವ ಚೈತ್ರಾ ಕುಂದಾಪುರ ಅವರೊಂದಿಗೆ ಹೊಸಪೇಟೆ ಜಿಲ್ಲೆಯ ಹಿರೇ ಹಡಗಲಿಯ ಹಾಲು ಸ್ವಾಮಿ ಮಠದ ಅಭಿನವ ಶ್ರೀ ಹಾಲುಶ್ರೀ ಸ್ವಾಮೀನಿ ಕೂಡ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇನ್ನು ಕರ್ನಾಟಕ ವಿಧಾನಸಭಾ ಚುನಾವಣೆ 2023ರ ವೇಳೆ ಬಿಜೆಪಿಯಿಂದ ಟಿಕೆಟ್‌ ಕೊಡಿಸುವುದಾಗಿ ಆಕಾಂಕ್ಷಿಗಳಿಂದ ಚೈತ್ರಾ ಕುಂದಾಪುರ ಅಂಡ್‌ಗ್ಯಾಂಗ್‌ ವತಿಯಿಂದ ಕೋಟ್ಯಂತರ ರೂ, ಹಣವನ್ನು ಪಡೆಯಲಾಗಿದೆ. ಈ ವಂಚನೆಯ ತಂಡದೊಂದಿಗೆ ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ಹಿರೇಹಡಗಲಿಯ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿ ಕೂಡ 1.50 ಕೋಟಿ ರೂ. ಹಣ ಪಡೆದಿದ್ದಾರೆ ಎಂದು ಕೇಳಿಬಂದಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಹಾಲಶ್ರೀ ಸ್ವಾಮೀಜಿ ಅಜ್ಞಾತ ಸ್ಥಳಕ್ಕೆ ತರಳಿದ್ದಾರೆ. ವಿಜಯನಗರ ಜಿಲ್ಲೆಯ ಹಗಡಲಿ ತಾಲೂಕಿನ ಹಿರೇಹಡಗಲಿ ಹಾಲು ಮಠದ ಅಭಿನವ ಹಾಲಶ್ರೀ ಸ್ವಾಮೀಜಿ ಹಿಂದೂಪರ ಸಂಘಟನೆಗಳಲ್ಲಿ ಗುರುಸಿಕೊಂಡಿದ್ದರು. ಹೀಗಾಗಿ, ಚೈತ್ರಾ ಕುಂದಾಪುರ ಗ್ಯಾಂಗ್‌ ಇವರನ್ನು ಸುಲಭವಾಗಿ ಪುಸಲಾಯಿಸಿ ವಂಚನೆಹಗೊಳಗಾದ ಸಂತ್ರಸ್ಥರಿಗೆ ಟಿಕೆಟ್‌ ಕೊಡಿಸುವ ಭರವಸೆಯನ್ನು ಸ್ವಾಮೀಜಿ ಅವರಿಂದ ಹೇಳಿಸಿದ್ದರು.

ಭಾರತದ ಹೈ ಪ್ರೊಫೈಲ್‌ ಹನಿಟ್ರ್ಯಾಪ್‌ ರಾಣಿ ಆರತಿ ದಯಾಳ್‌ ಬೆಂಗಳೂರಿನಲ್ಲಿ ಅರೆಸ್ಟ್‌

ಇನ್ನು ಕೋಟ್ಯಂತರ ರೂ. ಹಣ ಕಳೆದುಕೊಂಡು ಹಾಗೂ ಟಿಕೆಟ್‌ ಸಿಗದೇ ವಂಚನೆಗೊಳಗಾದ ಉದ್ಯಮಿ ಗೋವಿಂದ್ ಬಾಬು ಕಡೆಯಿಂದ 1.50 ಕೋಟಿ ರೂ. ಪಡೆದಿದ್ದಾರೆ ಎಂದು ಕೇಳಿಬಂದಿದೆ. ವಂಚನೆ ಪ್ರಕರಣದಲ್ಲಿ ಹಿರೇಹಡಗಲಿ ಹಾಲ ಮಠದ ಅಭಿನವ ಹಾಲಶ್ರೀ ಅವರು A3 ಆರೋಪಿ ಆಗಿದ್ದಾರೆ. ಬೆಳಗಿನಿಂದ ಹಾಲಶ್ರೀ ಮೊಬೈಲ್ ಸ್ವೀಚ್ ಆಫ್ ಆಗಿದೆ. ಹಾಲಸ್ವಾಮಿ ಮಠಕ್ಕೂ ಬಾರದೇ ಅಜ್ಞಾತ ಸ್ಥಳಕ್ಕೆ ತರಳಿದ್ದು, ಯಾರ ಸಂಪರ್ಕಕ್ಕೂ ಸಿಗದಿರುವ ನಡೆ ಹಲವು ಅನುಮಾನಕ್ಕೆ ಕಾರಣವಾಗಿದೆ ಎಂದು ಕೇಳಿಬಂದಿದೆ.

ಬಿಜೆಪಿ ಹೈಕಮಾಂಡ್‌ ಎಂದು ಹಲವರನ್ನು ತೋರಿಸಿ ವಂಚನೆ: ಇನ್ನು ಚೈತ್ರಾ ಕುಂದಾಪುರ ಅವರು ಉದ್ಯಮಿ ಗೋವಿಂದಬಾಬು ಪೂಜಾರಿ ಎಂಬುವವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ಹೇಳಿ ಆಗಾಗ ಬೆಂಗಳೂರಿಗೆ ಕರೆಸಿಕೊಳ್ಳುತ್ತಿದ್ದರು. ಇದನ್ನು ನಂಬಿದ ಗೋವಿಂದಬಾಬು ಆಗಾಗ ಬೆಂಗಳೂರಿಗೆ ಬಂದಾಗ, ಚೈತ್ರಾ ಕುಂದಾಪುರ ತನ್ನ ಪರಿಚಯಸ್ತರಿಗೆ ಒಳ್ಳೆ ಬಟ್ಟೆ ಹಾಕಿಸಿ, ಇವರೇ ಹೈಕಮಾಂಡ್ ನಾಯಕರು ಎಂದು ನಂಬಿಸುತ್ತಿದ್ದರು. ಇವರು ಹೇಳಿದ ಮೇಲೆ ಟಿಕೆಟ್ ನಿಮಗೆ ಸಿಗುತ್ತದೆ ಎಂದು ಹೇಳಿದ್ದರು.

ಉದ್ಯಮಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ₹7 ಕೋಟಿ ವಂಚನೆ ಆರೋಪ; ಚೈತ್ರಾ ಕುಂದಾಪುರ ಪೊಲೀಸರ ವಶಕ್ಕೆ!

ಕೇಂದ್ರದ ನಾಯಕರು, ಆರೆಸ್ಸೆಸ್ ಪ್ರಮುಖರ ಹೆಸರಿನಲ್ಲಿ ಟಿಕೆಟ್ ಕೊಡಿಸುವುದಾಗಿ ಹೇಳಿ ಈಕೆಯೊಂದಿಗೆ ನಾಲ್ಕೈದು ಜನರ ತಂಡ ಪಂಗನಾಮ ಹಾಕಿದೆ. ಬೈಂದೂರು ಬಿಜೆಪಿಯ ಟಿಕೆಟ್ ಪಕ್ಕ ಮಾಡಿಕೊಡುವುದಾಗಿ ನಂಬಿಸಿದ್ದ ಚೈತ್ರಾ ಕುಂದಾಪುರ A1, ಗಗನ್ ಕಡೂರು A2, ರಮೇಶ್ A4, ಧನರಾಜ್ A6, ಶ್ರೀಕಾಂತ್ A7 ಹಾಗೂ ಪ್ರಜ್ವಲ್ A10 ಸದ್ಯ ಪೊಲೀಸರ ವಶದಲ್ಲಿ ಇದ್ದಾರೆ. ಇನ್ನು ಹೂವಿನ ಹಡಗಲಿ ತಾಲೂಕಿನ ಹಿರೇ ಹಡಗಲಿಯ ಹಾಲಸ್ವಾಮಿ ಮಠದ ಹಾಲಶ್ರೀ ಸ್ವಾಮೀಜಿ (A3) ಆರೋಪಿ ಸೇರಿದಂತೆ ಹಲವರು ಕಣ್ಮರೆಯಾಗಿದ್ದು, ಬಂಧನಕ್ಕೆ ಬಲೆ ಬೀಸಿದ್ದಾರೆ.

Hadagali Halashree Swamiji involved in Chaitra Kundapur BJP ticket fraud case sat

Follow Us:
Download App:
  • android
  • ios