ಪೆನ್ನು ಕದ್ದಿದ್ದಕ್ಕೆ ಬಾಲಕನಿಗೆ ಚಿತ್ರಹಿಂಸೆ ಕೊಟ್ಟ ಪ್ರಕರಣ; ರಾಮಕೃಷ್ಣಮಠದ ಗುರೂಜಿ ಬಂಧನ

ಪೆನ್ನು ಕದ್ದಿದ್ದಕ್ಕೆ ಬಾಲಕನಿಗೆ ಚಿತ್ರಹಿಂಸೆ ಕೊಟ್ಟ ಪ್ರಕರಣದ ಆರೋಪಿ ವಿವೇಕಾನಂದ ಆಶ್ರಮದ ಗುರೂಜಿಯಾಗಿದ್ದ ವೇಣುಗೋಪಾಲನನ್ನ ಬಂಧಿಸಿದ ಪೊಲೀಸರು. ಬಾಲಕನ ಕೈಗೆ ಕಚ್ಚಿ ಗಾಯಗೊಳಿಸಿ ಕಣ್ಣಿಗೆ ಖಾರದ ಹಾಕಿ ಹಿಂಸೆ ಕೊಟ್ಟಿದ್ದ ಆರೋಪಿ

Guruji Venugopal of ramakrishna math raichur  was arrested for torturing minor boy rav

ಪೋಷಕರೇ ಎಚ್ಚರ.. ಎಚ್ಚರ..  ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಸಿಗಬೇಕು ಅಂತ ಯಾರೋ ಹೇಳಿದ ಶಾಲಾ- ಕಾಲೇಜು, ಆಶ್ರಮ ಮತ್ತು ಮಠಗಳಿಗೆ ಸೇರಿಸುವ ಮುನ್ನ ಸ್ವಲ್ಪ ಎಚ್ಚರವಹಿಸಿ..ನೀವೂ ಯಾರೂ ಹೇಳಿದ ಮಾತಿಗೆ ಮರುಳಾಗಿ ಮಕ್ಕಳಿಗೆ ಆಶ್ರಮ ಮತ್ತು ‌ಮಠಕ್ಕೆ ಸೇರಿದ್ರೆ ನಿಮ್ಮ ಮಕ್ಕಳು ಹಾಗೂ ನೀವೇ ಸಂಕಷ್ಟ ಎದುರಿಸಬಹುದು. ಇತ್ತೀಚಿನ ದಿನಗಳಲ್ಲಿ ಗುರುಗಳೇ ವಿಲನ್ ಆಗುತ್ತಿದ್ದಾರೆ.‌ಇದಕ್ಕೆ ಕಾರಣಗಳು ಹಲವು ಇರಬಹುದು.. ಆದ್ರೆ ಚಿಕ್ಕ ಮಕ್ಕಳಿಗೆ ಚಿತ್ರಹಿಂಸೆ ‌ನೀಡುವುದು ಮಾತ್ರ ತಪ್ಪು..ರಾಯಚೂರು ನಗರದಲ್ಲಿ ವಿದ್ಯಾರ್ಥಿ ಆಶ್ರಮದಲ್ಲಿ ಬಿದ್ದಿರುವ ಪೆನ್ನುವೊಂದನ್ನ ಕದ್ದಿದ್ದನೇ ಎಂಬ ಕಾರಣಕ್ಕೆ ಆಶ್ರಮದ ಗುರೂಜಿ ವಿದ್ಯಾರ್ಥಿಗೆ ಮನಬಂದಂತೆ ಚಿತ್ರಹಿಂಸೆ ನೀಡಿದ್ದಾರೆ. ಈ ಪ್ರಕರಣದ ಕುರಿತು ರಾಯಚೂರು ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು, ಪೊಲೀಸರು ಗುರೂಜಿ  ವೇಣುಗೋಪಾಲನನ್ನ ಬಂಧಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಆಶ್ರಮದ ಹಿನ್ನೆಲೆ: 

ರಾಯಚೂರಿನ ಉದಯನಗರದಲ್ಲಿ ರಾಮಕೃಷ್ಣ - ವಿವೇಕಾನಂದ ಆಶ್ರಮವಿದೆ. ಈ ಆಶ್ರಮದಲ್ಲಿ 8-10 ಬಡ ಮಕ್ಕಳಿಗೆ ಆಶ್ರಯ ನೀಡಿದ್ದಾರೆ. ವಿವಿಧ ಶಿಕ್ಷಣ ಸಂಸ್ಥೆಗಳು ಹಾಗೂ ದಾನಿಗಳು ನೀಡುವ ಅನುದಾನದಿಂದ ಈ ಆಶ್ರಮ ನಡೆದಿದೆ. ಈ ಆಶ್ರಮದಲ್ಲಿ ಇಂಜಿನಿಯರ್ ಪದವೀಧರರಾದ ಗುರೂಜಿ ವೇಣುಗೋಪಾಲ ಇಡೀ ಆಶ್ರಮ ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಆಶ್ರಮದ  ಗುರೂಜಿ ವೇಣುಗೋಪಾಲ ಮಕ್ಕಳಿಗೆ ಶಿಸ್ತು ಕಲಿಸುತ್ತೇನೆ ಅಂತ ಮಕ್ಕಳಿಗೆ ‌ಮನಬಂದಂತೆ ಹೊಡೆಯುವುದು ರೂಢಿ ಮಾಡಿಕೊಂಡಿದ್ದಾನೆ. 

ಪೆನ್ನು ಕದ್ದಿದ್ದಕ್ಕೆ ಬಾಲಕನಿಗೆ ಮನಬಂದಂತೆ ಥಳಿಸಿದ ಗುರೂಜಿ! ಮಗನ ಸ್ಥಿತಿ ಕಂಡು ತಾಯಿ ಆಘಾತ!

ಬಾಲಕ ಆಶ್ರಮ ಸೇರಿದ್ದು ಹೇಗೆ?

ಚಿತ್ರಹಿಂಸೆ ಅನುಭವಿಸಿದ ಬಾಲಕ ಇನ್ನೂ 3ನೇ ತರಗತಿ ವಿದ್ಯಾರ್ಥಿ.. ಮೂಲತಃ ಕೊಪ್ಪಳ ಜಿಲ್ಲೆಯವನು. ಮನೆಯಲ್ಲಿ ಕೌಟುಂಬಿಕ ಕಲಹದಿಂದ ಬಾಲಕನ ತಾಯಿ ಯಾರೋ ಹೇಳಿದ್ರೂ ಅಂತ ಬಾಲಕನಿಗೆ ಆಶ್ರಮದಲ್ಲಿ ದಾಖಲು ಮಾಡಿದ್ರು. ಬಾಲಕನೂ ಒಂದು ತಿಂಗಳಿಂದ ಆಶ್ರಮದಲ್ಲಿ ಇದ್ದು, ಶಾಲೆಗೆ ಹೋಗಿ ಬರುತ್ತಿದ್ದ, ವಾರಕ್ಕೆ ಒಮ್ಮೆ ಪೋಷಕರು ಮಕ್ಕಳ ಭೇಟಿಗೆ ಬಂದು ಹೋಗುತ್ತಿದ್ರು. ಆಗ ಗುರೂಜಿ ‌ನನ್ನ ಮಗುವಿನಂತೆ ನೋಡಿಕೊಳ್ಳುವೆ ಎಂದು ಹೇಳುತ್ತಿದ್ದಂತೆ..ಹೀಗಾಗಿ ಬಾಲಕನ ತಾಯಿ 15 ದಿನಗಳಿಂದ ಆಶ್ರಮದ ಕಡೆ ಬಂದಿರಲಿಲ್ಲ. ಇತ್ತ ನಿತ್ಯ ಶಾಲೆಗೆ ಹೋಗುವ ಬಾಲಕ ಎರಡು- ಮೂರು ದಿನಗಳಿಂದ ಶಾಲೆಗೆ ಗೈರು ಆಗಿದ್ದಾನೆ. ಆಗ ಬಾಲಕನ ಸಹೋದರ ತಾಯಿಗೆ ಎಲ್ಲಾ ವಿಷಯ ತಿಳಿಸಿದ್ದಾನೆ. ಆ ಬಾಲಕನ ತಾಯಿ ಬಂದು ಕೇಳಿದ್ರೆ ಅವನು ಈಗ ಪೆನ್ನು ಕದಿದ್ದಾನೆ. ಹೀಗೆ ಬಿಟ್ಟರೆ ಕಳ್ಳ ಆಗುತ್ತಾನೆ ಅದಕ್ಕೆ ಹೊಡೆದಿದ್ದೇನೆ ಎಂದು ಸಮರ್ಥನೆ ಸಹ ಗುರೂಜಿ ಮಾಡಿಕೊಂಡಿದ್ದಾನೆ. ಮಗನ ಸ್ಥಿತಿ ‌ನೋಡಿದ ತಾಯಿ ಕಂಗಾಲಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾಳೆ. ಆಗ ವಿಷಯ ಬಹಿರಂಗವಾಗಿದೆ.

ಬಾಲಕ ಮಾಡಿದ ತಪ್ಪೇನು..

9 ವರ್ಷದ ಬಾಲಕನಿಗೆ ಮನೆಯಲ್ಲಿ ಬಡತನ ಇರುವುದಕ್ಕೆ ತಾಯಿ ಮಗನಿಗೆ ಆಶ್ರಮಕ್ಕೆ ಸೇರಿಸಿದ್ದಳು. ಬಾಲಕ ಆಶ್ರಮದ ಬಾಗಿಲು ಬಳಿ ಬಿದ್ದ ಗುರೂಜಿ ಪೆನ್ನು ತೆಗೆದುಕೊಂಡು ತನ್ನ ಬಳಿ ಇಟ್ಟುಕೊಂಡಿದ್ದಾನೆ. ಆಗ ಗುರೂಜಿ ಎಲ್ಲಾ ಮಕ್ಕಳಿಗೆ ಪೆನ್ನಿನ ಬಗ್ಗೆ ವಿಚಾರಣೆ ಮಾಡಿದ್ದಾರೆ. ಆಗ ಯಾರು ಪೆನ್ನು ತೆಗೆದುಕೊಂಡ ಬಗ್ಗೆ ಹೇಳಿಲ್ಲ. ಆಗ ಬಾಲಕನ ಬಳಿ ಪೆನ್ನು ಇರುವುದು ಗುರೂಜಿಗೆ ಗೊತ್ತಾಗಿದೆ. ಕೂಡಲೇ ಯಮಸ್ವರೂಪಿಯಂತೆ ಗುರೂಜಿ ಬೆಲ್ಟ್, ಕಟ್ಟಿಗೆ ತೆಗೆದುಕೊಂಡು ಮನಬಂದಂತೆ ಬಾಲಕನಿಗೆ ಥಳಿಸಿದ್ದಾನೆ. ಅಲ್ಲದೇ ಬಾಲಕನಿಗೆ ತಲೆಕೆಳಗೆ ಮಾಡಿ ಕಣ್ಣಿಗೆ ಕಾರದಪುಡಿ ಹಾಕಿ ಚಿತ್ರಹಿಂಸೆ ನೀಡಿದ್ದಾನೆ. ಆ ಬಳಿಕ ಬಾಲಕನ ಕೈಗೆ ಕಚ್ಚಿ, ಬಾಲಕನಿಗೆ ಮೂರು ದಿನಗಳ ಕಾಲ ಕತ್ತಲೆ ಕೋಣೆಯಲ್ಲಿ ಕೂರಿಸಿ ಚಿತ್ರಹಿಂಸೆ ‌ನೀಡಿದ್ದಾನೆ.

ಪಿಎಸ್‌ಐ ಅನುಮಾನಾಸ್ಪದ ಸಾವು; ಯಾದಗಿರಿ ಶಾಸಕ, ಪುತ್ರನ ವಿರುದ್ಧ ಕುಟುಂಬ, ಸಂಘಟನೆಗಳು ಗಂಭೀರ ಆರೋಪ!

ಪಶ್ಚಿಮ ಠಾಣೆ ಪೊಲೀಸರಿಂದ ಗುರೂಜಿ ಬಂಧನ

ಆಶ್ರಮದಲ್ಲಿ ಗುರೂಜಿ ಚಿತ್ರಹಿಂಸೆ ‌ನೀಡಿದ ಬಳಿಕ ಬಾಲಕನ ತಾಯಿ ಆಸ್ಪತ್ರೆಗೆ ದಾಖಲು ಮಾಡಿದ್ದಳು. ಈ ವೇಳೆ ಬಾಲಕನ ಸ್ಥಿತಿ ‌ನೋಡಿದ ಸಾರ್ವಜನಿಕರು ‌ಪೊಲೀಸರಿಗೆ ಮಾಹಿತಿ ‌ನೀಡಿದ್ರು. ಆಗ ಪೊಲೀಸರು ‌ಬಾಲಕನ ತಾಯಿಗೆ ಧೈರ್ಯ ತುಂಬಿದ್ರು. ಈಗ ಬಾಲಕನ ತಾಯಿ ದೂರು ನೀಡಿದ್ದು, ಪಶ್ಚಿಮ ಠಾಣೆ ಪೊಲೀಸರು ‌ಆರೋಪಿ ಗುರೂಜಿ ವೇಣುಗೋಪಾಲನನ್ನ ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ. ಮಾಹಿತಿ ತಿಳಿದು ಪಶ್ಚಿಮ ಠಾಣೆಗೆ ರಾಯಚೂರು ಎಸ್ ಪಿ ಎಂ. ಪುಟ್ಟಮಾದಯ್ಯ ಭೇಟಿ ನೀಡಿ ಪ್ರಕರಣದ ‌ಕುರಿತು ಸಂಪೂರ್ಣ ‌ತನಿಖೆಗೆ ಆದೇಶ ನೀಡಿದ್ರು. ಅಲ್ಲದೇ ಪೋಷಕರು ಸಹ ಮಕ್ಕಳಿಗೆ ಶಾಲೆ, ಆಶ್ರಮ ಮತ್ತು ಮಠಗಳಿಗೆ ಸೇರಿಸುವ ಮುನ್ನ ಆ ಸಂಸ್ಥೆಗಳ ಬಗ್ಗೆ ತಿಳಿದುಕೊಳ್ಳಬೇಕು. ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ಮತ್ತೆ ಮರುಕಳಿಸದಂತೆ ಎಲ್ಲರೂ ಎಚ್ಚರವಹಿಸಬೇಕೆಂದು ಸಂದೇಶ ನೀಡಿದ್ರು.

Latest Videos
Follow Us:
Download App:
  • android
  • ios